ಕೋಲಾರಮ್ಮ ಕೆರೆಗೆ ಜಿಲ್ಲಾಡಳಿತದಿಂದ ಆಧುನಿಕ ಸ್ಪರ್ಶ: 600 ಎಕರೆ ಕೆರೆಗೆ ಕೋಟಿ ಕೋಟಿ ವೆಚ್ಚದಲ್ಲಿ ಅಭಿವೃದ್ಧಿ

ಕೋಲಾರಮ್ಮ ಕೆರೆ ಅಂದ್ರೆ ಇಡೀ ನಗರಕ್ಕೆ ಫೇಮಸ್‌..ಅಷ್ಟೇ ಅಲ್ಲ ಈ ಕೆರೆಯಿಂದಲೇ ಕೆ.ಸಿ ವ್ಯಾಲಿಗೆ ಸೇರಿದಂತೆ ಇಡೀ ನಗರಕ್ಕೆ ನೀರು ಸರಬರಾಜು ಆಗುತ್ತೆ. ಇದೇ ಕೆರೆಯನ್ನೇ ಈಗ ಜಿಲ್ಲಾಡಳಿತ ಅಭಿವೃದ್ಧಿ ಮಾಡಲು ಮುಂದಾಗಿದೆ. ಇನ್ಫೋಸಿಸ್ ನೀಡಿದ  20 ಕೋಟಿ ಹಣದಲ್ಲಿ ಪ್ರವಾಸಿ ತಾಣ ಮಾಡಲು ಅಧಿಕಾರಿಗಳು ಪ್ಲಾನ್ ಮಾಡಿದ್ದಾರೆ.
 

First Published Sep 27, 2023, 10:25 AM IST | Last Updated Sep 27, 2023, 10:25 AM IST

ಕೋಲಾರ ನಗರದ ಹೃದಯ ಭಾಗದಲ್ಲಿ ಇರುವ ಕೋಲಾರಮ್ಮ ಕೆರೆಗೆ(Kolaramma lake) ಆಧುನಿಕ ಸ್ಪರ್ಶ ನೀಡಲು ಜಿಲ್ಲಾಡಳಿತ ಮುಂದಾಗಿದೆ. ಈ ಅಮಾನಿ ಕೆರೆ ನೂರಾರು ಎಕರೆ ಭೂಪ್ರದೇಶಕ್ಕೆ. ಅಸಂಖ್ಯಾತ ಕೊಳವೇ ಬಾವಿಗಳಿಗೆ ನೀರು ನೀಡುವ ಪ್ರಮುಖ ಜಲಕೇಂದ್ರವಾಗಿತ್ತು. ಆದ್ರೆ ಕಳೆದ 2 ವರ್ಷಗಳಿಂದ ಉತ್ತಮ ಮಳೆ(Rain) ಆಗಿಲ್ಲ. ಇತ್ತ ಕೆ.ಸಿ. ವ್ಯಾಲಿಗೆ(KC Valley) ಕೂಡ ಈ ಕೆರೆಯಿಂದಲೇ ನೀರು ಹರಿಯುತ್ತಿದೆ. ಆದ್ರೆ ಈಗ 600 ಎಕರೆಯಷ್ಟು ಬೃಹತ್‌ ಕೆರೆಯ ಆವರಣದಲ್ಲಿ ಗಿಡ ಗಂಟಿಗಳು ತುಂಬಿದ್ದು, ಇದನ್ನು ತೆರವು ಮಾಡಲು ಜಿಲ್ಲಾಡಳಿತ ಮುಂದಾಗಿದೆ. ಕೆ.ಸಿ ವ್ಯಾಲಿ ಯೋಜನೆ ಅಭಿವೃದ್ಧಿ ಅಡಿಯಲ್ಲಿ 8 ಕೋಟಿ ಖರ್ಚು ಮಾಡಿ ಕೆರೆ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲಾಗಿದೆ. ಜೊತೆಗೆ ಇನ್ಫೋಸಿಸ್ ಪೌಂಡೇಷನ್ ನೀಡಿದ ಹಣವನ್ನೂ ಬಳಸಿಕೊಳ್ಳಾಗ್ತಿದೆ. ಸುತ್ತಲೂ ವಾಕಿಂಗ್ ಪಾತ್ ಕೂಡ ನಿರ್ಮಿಸಲಾಗುತ್ತಂತೆ. ಕೋಲಾರಮ್ಮ ಕೆರೆ ಅಚ್ಚುಕಟ್ಟು 789 ಎಕರೆ ಇದ್ದು, 13 ಅಡಿ ಆಳ ಹಾಗೂ 659  ಯೂನಿಟ್ ನಷ್ಟು ನೀರು ಸಂಗ್ರಹವಾಗುತ್ತೆ. ಅದರಂತೆ ಕಳೆದ 2 ವರ್ಷಗಳಿಂದ ನಾಲ್ಕು ಭಾರಿ ಕೋಡಿ ಹರಿದಿರುವ ಕೋಲಾರಮ್ಮ ಕೆರೆ ತುಂಬಿದಕ್ಕೆ ಹರ್ಷ ವ್ಯಕ್ತಪಡಿಸಿ ಕೆ.ಸಿ.ವ್ಯಾಲಿ ಶುದ್ಧೀಕರಿಸಿ ಕೆರೆಗೆ ಹರಿಸಲಾಗುತ್ತಿದೆ. ಕೆರೆ ಅಭಿವೃದ್ಧಿಗೆ ಸರ್ಕಾರದ 8 ಕೋಟಿ ಖರ್ಚು ಆಯಿತೋ ಇಲ್ವೋ ಗೊತ್ತಿಲ್ಲ. ಆದ್ರೆ ಈಗ ಇನ್ಫೋಸಿಸ್ ಪೌಂಡೇಷನ್ ನೀಡಿರುವ 20 ಕೋಟಿ ಹಣವನ್ನು ಬಳಕೆ ಮಾಡಲು ಫ್ಲಾನ್ ಮಾಡಿದೆ.

ಇದನ್ನೂ ವೀಕ್ಷಿಸಿ:  ಬೆಂಗಳೂರು ಬಂದ್ ಆಯ್ತು ಈಗ ಕರುನಾಡಿಗೆ ಬೀಗ: ಕಾವೇರಿ ಕಿಚ್ಚಿಗೆ ಶುಕ್ರವಾರ ಸ್ತಬ್ಧವಾಗುತ್ತಾ ಕರ್ನಾಟಕ..?