ಇದೇನಿದು ಎರಡೂವರೆ ವರ್ಷದ ನಂತರ ಅಧಿಕಾರ ಹಸ್ತಾಂತರ ? ಈ ಬಗ್ಗೆ ಸಂಸದರು ಹೇಳಿದ್ದೇನು ?
ಏಸ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಸಂಸದ ಡಿ.ಕೆ. ಸುರೇಶ್ ಮಾತನಾಡಿದ್ದು, ಅವರ ರಾಜಕೀಯ ಜೀವನದ ಬಗ್ಗೆ ಮಾತನಾಡಿದ್ದಾರೆ. ಅಲ್ಲದೇ ಎರಡೂವರೆ ವರ್ಷದ ನಂತರ ಅಧಿಕಾರ ಹಸ್ತಾಂತರ ಆಗುತ್ತೋ, ಇಲ್ಲವೋ ಎಂಬುದರ ಬಗ್ಗೆಯೂ ಮಾತನಾಡಿದ್ದಾರೆ.
ರಾಜ್ಯದ ಜನತೆ ಕಾಂಗ್ರೆಸ್ ಉತ್ತಮ ಆಡಳಿತ ನೀಡಲಿ ಎಂದು ಆಯ್ಕೆ ಮಾಡಿದ್ದಾರೆ. ಎಲ್ಲಾರೂ ಡಿ.ಕೆ. ಶಿವಕುಮಾರ್(Dk Shivakumar) ಅವರಿಗೆ ಒಂದು ಅವಕಾಶ ಸಿಗಲಿ ಎಂದು ಹೇಳುತ್ತಿದ್ದಾರೆ. ನಮ್ಮ ಪಕ್ಷದ ಅಧಿಕಾರವಧಿ 5 ವರ್ಷ ಇದೆ. ನೋಡೋಣಾ ಮುಂದೆ ಅವರು ಸಿಎಂ ಆದ್ರೂ ಆಗಬಹುದು ಎಂದು ಸಂಸದ ಡಿ.ಕೆ. ಸುರೇಶ್ (DK Suresh) ಹೇಳಿದ್ದಾರೆ. ಸದ್ಯ ಇಬ್ಬರೂ ನಾಯಕರು ಉತ್ತಮ ಆಡಳಿತ ನೀಡಲು ಕಾರ್ಯನಿರ್ವಹಿಸುತ್ತಿದ್ದಾರೆ. ನಮ್ಮ ಗುರಿ ಇರುವುದು ಉತ್ತಮ ಆಡಳಿತ ನೀಡುವುದಾಗಿದೆ. ಅಲ್ಲದೇ ನಾನು ರಾಜಕೀಯಕ್ಕೆ ಬೇಕು ಎಂದು ಬಂದಿಲ್ಲ. ನಾನು ನನ್ನ ಕೆಲಸ, ವ್ಯಾಪಾರ ಅಂತ ಇದ್ದೆ, ಅನಿವಾರ್ಯವಾಗಿ ರಾಜಕಾರಣಕ್ಕೆ ಬಂದೆ. ಪಕ್ಷದ ತೀರ್ಮಾನ ಮಾಡಿದ್ದರಿಂದ ಒಲ್ಲದ ಮನಸ್ಸಿನಿಂದ ಒಪ್ಪಿಕೊಂಡೆ ಎಂದು ಡಿ.ಕೆ. ಸುರೇಶ್ ಹೇಳಿದ್ದಾರೆ. ಪ್ರಧಾನಿ ನರೇಂದ್ರ ಮೋದಿ (Narendra Modi) ಬಗ್ಗೆ ಮಾತನಾಡಿದ ಅವರು, ನೀವು ಎಲ್ಲಾರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಆಡಳಿತ ನಡೆಸಿ. ಆದ್ರೆ ಪ್ರಧಾನಿ ಒಳ್ಳೆ ಆಡಳಿತಗಾರ ಎಂದು ಅವರು ಹೇಳಿದರು.
ಇದನ್ನೂ ವೀಕ್ಷಿಸಿ: ಈ ದೇಶಕ್ಕೆ ಒಂದು ಯಂಗ್ ಲೀಡರ್‌ಶಿಪ್ ಬೇಕು, ರಾಹುಲ್ ಗಾಂಧಿ ಪ್ರಧಾನಿ ಆಗಲಿ: ಪ್ರದೀಪ್ ಈಶ್ವರ್