ಕ್ಯಾಬಿನೆಟ್ ನಿರ್ಧಾರವೇ ಅಂತಿಮನಾ ? ಡಿಕೆಶಿ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋರ್ಟ್ ಹೇಳಿದ್ದೇನು ?

ಕುತೂಹಲ ಹುಟ್ಟಿಸಿದೆ ಡಿ ಕೆ ಶಿವಕುಮಾರ್ ಮುಂದಿನ ನಡೆ..? 
ಸಿಬಿಐಗೆ ಒಪ್ಪಿಸಿದ್ದ ಸರ್ಕಾರದ ನಿರ್ಧಾರ ಪ್ರಶ್ನಿಸಿದ್ದ ಡಿಕೆ..? 
ತಾವೇ ಸಲ್ಲಿಸದ್ದ ಮೇಲ್ಮನವಿ ವಾಪಸ್ ಪಡೆದಿದ್ದೇಕೆ ಡಿಕೆಶಿ..? 

First Published Nov 30, 2023, 2:59 PM IST | Last Updated Nov 30, 2023, 2:59 PM IST

ಡಿಸಿಎಂ ಡಿಕೆ ಶಿವಕುಮಾರ್ ಅಕ್ರಮ ಆಸ್ತಿಗೆ ಸಂಬಂಧಿಸಿದಂತೆ ಇದ್ದ ಎಫ್ಐಆರ್ ರದ್ದು ಮಾಡುವಂತೆ ಈ ಹಿಂದೆ ಹೈಕೋರ್ಟ್‌ಗೆ(Highcourt) ಅರ್ಜಿ ಸಲ್ಲಿಸಿದ್ದರು. ಇಂದು ತಾವೇ ಸಲ್ಲಿಸಿದ್ದ ಅರ್ಜಿಯನ್ನು ವಾಪಸ್ ಪರೆದಿದ್ದಾರೆ. ಡಿಕೆಶಿ(DK Shivakumar) ವಿರುದ್ಧದ ಅಕ್ರಮ ಆಸ್ತಿ ಪ್ರಕರಣಕ್ಕೆ ಇಂದು ಹೊಸ ಟ್ವಿಸ್ಟ್ ಸಿಕ್ಕಿದೆ. 2019ರಲ್ಲಿ ಡಿಕೆಶಿ ಅವರ ಮೇಲೆ ಸಿಬಿಐ(CBI) ರೇಡ್ ಆಗುತ್ತೆ. ಇದರಲ್ಲಿ ನಂತರ ವಿಚಾರಣೆ ಆರಂಭವಾಗುತ್ತೆ. ಈ ವಿಚಾರಣೆಯಲ್ಲಿ ಡಿಕೆಶಿ ಅಕ್ರಮ ಆಸ್ತಿ ಹೊಂದಿದ್ದಾರೆಂದು ಸಿಬಿಐ ಖಚಿತ ಪಡಿಸುತ್ತೆ. ಈಗಾಗ್ಲೇ ಶೇಖಡ 90 ರಷ್ಟು ತನಿಖೆ ಮುಗಿದಿದೆ. ಇನ್ನು ಶೇ. 10 ರಷ್ಟು ತನಿಖೆ ಭಾಗಿ ಇತ್ತು. ಆಗ ಡಿಕೆಶಿ ಹೈಕೋರ್ಟ್ ಮೊರೆ ಹೋಗ್ತಾರೆ. ಹೈಕೋರ್ಟ್ ಮೊರೆ ಹೋಗಿದ್ದ ಡಿಕೆಶಿ ಏನೆಂದು ಪ್ರಶ್ನೆ ಮಾಡಿದ್ದರು ಗೊತ್ತಾ? ತನ್ನ ಆಸ್ತಿ ವಿವರ ತನಿಖೆಯನ್ನು ರಾಜ್ಯ ಸರ್ಕಾರ ಒಪ್ಪಿಸಿದ್ದೇ ತಪ್ಪು, ಹೀಗಾಗಿ ಅಂದಿನ ಬಿಜೆಪಿ ಸರ್ಕಾರದ ಒಪ್ಪಿಗೆ ಅರ್ಜಿಯನ್ನೇ ತಿರಸ್ಕರಿಸಿಬೇಕೆಂದು ಡಿಕೆಶಿ ಹೈಕೋರ್ಟ್ಗೆ ಮನವಿ ಸಲ್ಲಿಸಿದ್ದರು. ಆದ್ರೆ ಡಿಕೆಶಿ ಅವರ ಈ ಅರ್ಜಿಯನ್ನು ಹೈಕೋರ್ಟ್ ಅಂದು ತಿರಸ್ಕರಿಸಿತ್ತು. ಈಗ ತಾವೇ ಸಲ್ಲಿಸಿದ್ದ ಆ ಮೇಲ್ಮನವಿಯನ್ನು ಡಿಕೆಶಿ ವಾಪಸ್ ಪಡೆಸಿದ್ದಾರೆ. ಈ ಹಿಂದೆ ಡಿಕೆಶಿ ಅವ್ರೇ ಹೈಕೋರ್ಟ್ಗೆ ಅರ್ಜಿಯನ್ನು ಸಲ್ಲಿಸಿದ್ದರು. ಈಗ ಅವರೇ ಹಿಂಪಡೆದಿದ್ದಾರೆ. 

ಇದನ್ನೂ ವೀಕ್ಷಿಸಿ:  ಯೋಗವೇ ತಂದಿತ್ತು ಶುಭಯೋಗ! ಹೇಗಿತ್ತು ಸುರಂಗದಲ್ಲಿ..? 17 ದಿನಗಳಲ್ಲಿ ಏನೇನೆಲ್ಲಾ ಆಗೋಯ್ತು..?