ಯೋಗವೇ ತಂದಿತ್ತು ಶುಭಯೋಗ! ಹೇಗಿತ್ತು ಸುರಂಗದಲ್ಲಿ..? 17 ದಿನಗಳಲ್ಲಿ ಏನೇನೆಲ್ಲಾ ಆಗೋಯ್ತು..?

ದೈವ ನಿರ್ಣಯದ ಬಗ್ಗೆ ಅರ್ನಾಲ್ಡ್ ಡಿಕ್ಸ್ ಹೇಳಿದ್ದೇನು..?
ಪ್ರಕೃತಿಯ ಚೆಲ್ಲಾಟದಲ್ಲೂ ಕಡೆಗೂ ಗೆದ್ದಿತ್ತು ಸತತ ಶ್ರಮ!
17 ದಿನ ನರಕಯಾತನೆ ಅನುಭವಿಸಿದವರು ಹೇಳಿದ್ದೇನು..?

First Published Nov 30, 2023, 2:49 PM IST | Last Updated Nov 30, 2023, 2:49 PM IST

ಉತ್ತರಕಾಶಿಯ ಸಿಲ್ಕ್ಯಾರದಲ್ಲಿ(Silkyara) ಏನಾಯ್ತು, ಹೇಗಾಯ್ತು ಅನ್ನೋದು ನಿಮಗೆ ಗೊತ್ತೇ ಇದೆ. ಇಡೀ ದೇಶವೇ ಸತತ 17 ದಿನಗಳಿಂದಲೂ ಕೌತುಕದ ಕಣ್ಣುಗಳಿಂದ ಸಿಲ್ಕ್ಯಾರಾನಾ ನೋಡ್ತಾ ಇತ್ತು. ಅಲ್ಲಿರೋ 41 ಮಂದಿ ಅದ್ಯಾವಾಗ ಕ್ಷೇಮವಾಗಿ ಆಚೆ ಬರ್ತಾರೋ, ಅದ್ಯಾವಾಗ ಅವರವರ ಕುಟುಂಬದವರು ಅವರನ್ನ ಭೇಟಿ ಮಾಡ್ತಾರೋ, ಅಂತ ನಾವೂ ನೀವೂ ಸೇರಿದಂತೆ ಪ್ರತಿಯೊಬ್ಬರೂ ಕಾಯ್ತಾ ಇದ್ರು. ಕಡೆಗೂ ಆ ಶುಭಗಳಿಗೆ ಬಂದೇ ಬಿಡ್ತು. ಮಂಗಳವಾರ ಅನ್ನೋದು ಆ 41 ಮಂದಿಗೆ ಶುಭಮಂಗಳವನ್ನೇ ತಂದಿತ್ತು. 17 ದಿನಗಳ ಹಿಂದೆ. ಅವತ್ತು ದೀಪಾವಳಿ(Diwali) ಹಬ್ಬ. ಇಡೀ ದೇಶವೇ ದೀಪ ಹೊತ್ತಿಸಿ, ಎಲ್ಲೆಲ್ಲೂ ಬೆಳಕು ಹರಡೋ ಹಾಗೆ ಮಾಡೋಕೆ ಸಿದ್ಧವಾಗ್ತಾ ಇದ್ರೆ, ಅದೇ ದಿನ, ಬೆಳ್ಳಂ ಬೆಳಗ್ಗೆ ಮೂರು-ಮೂರುವರೆ ವೇಳೆಗೆ, 41 ಮಂದಿಯ ಕಣ್ಣೆದುರು ಅಂಧಕಾರ ಬಂದು ನಿಂತಿತ್ತು. ಸಿಲ್ಕ್ಯಾರಾದಲ್ಲಿ ನಡೀತಿದ್ದ ಸುರಂಗ ನಿರ್ಮಾಣ ಕಾರ್ಯ ಮುಂದುವರೆಸೋಕೆ, ಅವತ್ತು 41 ಮಂದಿ ಒಳಹೊಕ್ಕಿದ್ದರು. ಮಾಡೋ ಕೆಲಸ ಮುಗಿಸಿ ಆಚೆ ಬರ್ಬೇಕು ಅಂತಿದ್ದಾಗಲೇ, ಆಗಬಾರದ ಅನಾಹುತ ಆಗಿಹೋಗಿತ್ತು. ನೋಡನೋಡುತ್ತಲೇ ಭೂಕುಸಿತವಾಗಿ ಸುರಂಗ(Tunnel) ಮುಚ್ಚಿ ಹೋಗಿತ್ತು. ಸುರಂಗದೊಳಗೆ ಸುಮಾರು 60 ಮೀಟರ್ ಒಳಗೆ ಹೋಗಿದ್ದ ಕಾರ್ಮಿಕರು ಅಲ್ಲಿ ಸಿಕ್ಕಾಕ್ಕೊಂಡ್ರು.ಇಂಥದ್ದೊಂದು ಅನಾಹುತ ಆಗಿದೆ ಅಂತ ಗೊತ್ತಾಗಿದ್ದೇ, ಆರೇಳು ಗಂಟೆಗಳ ಬಳಿಕ. ನವೆಂಬರ್ 12ರ ಬೆಳಗಿನ ಜಾವಕ್ಕೆ, ಅನಾಹುತ ನಡೆದಿದೆ ಅನ್ನೋದು ಗೊತ್ತಾಯ್ತು. ಗೊತ್ತಾದ ಮರುಕ್ಷಣದಿಂದಲೇ ರಕ್ಷಣಾಕಾರ್ಯ ಶುರುವಾಯ್ತು.. ಆದ್ರೆ, ಆಗ ಶುರುವಾದ ಕಾರ್ಯಾಚರಣೆ ಬರೋಬ್ಬರಿ 17 ಗಂಟೆಗಳ ಕಾಲ ನಡೆಯುತ್ತೆ ಅಂತ, ಯಾರೊಬ್ಬರೂ ಊಹಿಸಿರಲೇ ಇಲ್ಲ.

ಇದನ್ನೂ ವೀಕ್ಷಿಸಿ:  4 ಲಕ್ಷಕ್ಕೆ ಹೆಣ್ಣು, 8 ಲಕ್ಷಕ್ಕೆ ಗಂಡು ಮಗು..! ಡಾಕ್ಟರ್‌ಗಳೇ ದಂಧೆಕೋರರ ಇನ್ಫಾರ್ಮರ್ಸ್..!