ಸಾವಿರಾರು ಮಹಿಳೆಯರಿಗೆ ಮಾದರಿಯಾದ ಧಾರವಾಡ ಮಹಿಳೆ: ಪ್ರತಿ ದಿನ ಈಕೆ ಆದಾಯ 5 ಸಾವಿರ !

ಧಾರವಾಡದ ಝಾನ್ಸಿ ಹೂಗಾರ ಎಂಬ ಮಹಿಳೆ ಸ್ವಂತ ಉದ್ಯೋಗವನ್ನು ಆರಂಭಿಸಿ, ಪ್ರತಿ ತಿಂಗಳು ಸುಮಾರು 1 ಲಕ್ಷ 50 ಸಾವಿರ ರೂಪಾಯಿ ಹಣವನ್ನು ಗಳಿಸುತ್ತಿದ್ದಾರೆ.
 

First Published Aug 10, 2023, 12:13 PM IST | Last Updated Aug 11, 2023, 8:34 AM IST

ಧಾರವಾಡ: ಜಿಲ್ಲೆಯ ಉಪ್ಪಿನ ಬೆಟಗೇರಿ ಗ್ರಾಮದ ಝಾನ್ಸಿ ಹೂಗಾರ(Jhansi Hugara) ಎಂಬ ಮಹಿಳೆ ಕೊರೊನಾ ನಂತರ ಸ್ವಂತ ಉದ್ಯೋಗ ಮಾಡಲು ಆರಂಭಿಸಿದ್ದಾರೆ. ಈ ಮೂಲಕ ಅವರು ಸಾವಿರಾರು ಮಹಿಳೆಯರಿಗೆ(Women) ಮಾದರಿಯಾಗಿದ್ದಾರೆ. ಅಮೃತ್ ನ್ಯಾಚುರಲ್‌ ಪ್ರೊಡಕ್ಟ್‌ ಎಂಬ ಹೆಸರಿನಲ್ಲಿ ಉದ್ಯೋಗವನ್ನು(business) ಆರಂಭಿಸಿದ್ರು. ಇದರಲ್ಲಿ ಅವರು ಪ್ರತಿ ತಿಂಗಳು ಒಂದು ಲಕ್ಷ 50 ಸಾವಿರ ಆದಾಯವನ್ನು ಗಳಿಸುತ್ತಿದ್ದಾರೆ. ಅಡುಗೆಗೆ ಬಳಸುವ ಶುದ್ಧ ಎಣ್ಣೆಯ ಗಾಣವನ್ನಿಟ್ಟುಕೊಂಡು ಈ ಮಹಿಳೆ ಉದ್ಯೋಗವನ್ನು ಮಾಡುತ್ತಿದ್ದಾರೆ. ಇವರ ಈ ಕೆಲಸಕ್ಕೆ ಪತಿ ಕೂಡ ಸಾಥ್‌ ನೀಡುತ್ತಿದ್ದಾರೆ. ಇದಕ್ಕೆ ಝಾನ್ಸಿಯವರು ಯಾವುದೇ ಬೇರೆ ಎಣ್ಣೆಯನ್ನು ಕಲಬೆರಕೆ ಮಾಡುವುದಿಲ್ಲ. ಪ್ರತಿ ದಿನ ಸುಮಾರು 5 ಸಾವಿರ ಆದಾಯವನ್ನು ಗಳಿಸುತ್ತಿದ್ದಾರೆ. 

ಇದನ್ನೂ ವೀಕ್ಷಿಸಿ:  ಶಾಸಕರು ವರ್ಸಸ್ ಸಚಿವರ ಮಧ್ಯೆ ಗೊಂದಲಕ್ಕೆ ತೆರೆ ಎಳೆದರಾ..?: 3 ದಿನಗಳ ಜಿಲ್ಲಾವಾರು ಸಭೆಯಲ್ಲಿ ಸಿಎಂ ಹೇಳಿದ್ದೇನು..?