ಶಾಸಕರು ವರ್ಸಸ್ ಸಚಿವರ ಮಧ್ಯೆ ಗೊಂದಲಕ್ಕೆ ತೆರೆ ಎಳೆದರಾ..?: 3 ದಿನಗಳ ಜಿಲ್ಲಾವಾರು ಸಭೆಯಲ್ಲಿ ಸಿಎಂ ಹೇಳಿದ್ದೇನು..?

ಸಿಎಂ ಮುಂದೆ ಕ್ಷೇತ್ರದ ಅಭಿವೃದ್ಧಿಗೆ ಶಾಸಕರಿಂದ ಅನುದಾನದ ಬೇಡಿಕೆ 
ಕೊಟ್ಟ ಭರವಸೆಗಳನ್ನು ಈಡೇರಿಸಲು ಅನುದಾನ ನೀಡಿ ಎಂದ ಶಾಸಕರು
ಶಾಸಕರ ಬೇಡಿಕೆ, ಸಲಹೆಗಳಿಗೆ ಸಿಎಂ ಸಿದ್ದರಾಮಯ್ಯ ಪಾಸಿಟಿವ್ ರಿಯಾಕ್ಷನ್

First Published Aug 10, 2023, 11:26 AM IST | Last Updated Aug 10, 2023, 11:26 AM IST

ಲೋಕಸಭೆ ಚುನಾವಣೆಗೂ ಮುನ್ನ ಸಂಘರ್ಷ ಶಮನಕ್ಕೆ ಸಿಎಂ ಸಿದ್ದರಾಮಯ್ಯ(Siddaramaiah) ಸರ್ಕಸ್ ನಡೆಸುತ್ತಿದ್ದಾರೆ. ಮೂರು ದಿನದಲ್ಲಿ 20 ಜಿಲ್ಲೆಗಳ ಶಾಸಕರು ಮತ್ತು ಸಚಿವರ ಜೊತೆ ಸಭೆ(Meeting) ನಡೆಸಿದ್ದಾರೆ. ಇನ್ನೂ ಎರಡು ದಿನ ಸಿಎಂ ನೇತೃತ್ವದ ಸಭೆ ಮುಂದುವರೆಯಲಿದೆ. ಈ ಸಭೆಯಲ್ಲಿ ಸಿಎಂ  ಸಿದ್ದರಾಮಯ್ಯ ಮುಂದೆ ಶಾಸಕರು ಬೇಡಿಕೆಗಳ ಪಟ್ಟಿಯನ್ನು ಇಟ್ಟಿದ್ದಾರೆ ಎನ್ನಲಾಗ್ತಿದೆ. ಶಾಸಕರು, ಸಚಿವರು(ministers) ಒಗ್ಗಟ್ಟಿನಲ್ಲಿ ಕೆಲಸ ಮಾಡಲು ಸಿಎಂ ಸಲಹೆ ನೀಡಿದ್ದಾರೆ ಎಂದು ತಿಳಿದುಬಂದಿದೆ. ಶಾಸಕರ(MLAs) ಸಮಸ್ಯೆ ಆಲಿಸುತ್ತಲೇ ಸಿಎಂ ಎಲೆಕ್ಷನ್ ಟಾಸ್ಕ್ ಕೊಟ್ಟಿದ್ದಾರೆ. ಶಾಸಕರ ಜಿಲ್ಲಾವಾರು ಸಭೆ ಹೆಸರಲ್ಲಿ ಕಾಂಗ್ರೆಸ್ ಎಲೆಕ್ಷನ್ ತಂತ್ರ ರೂಪಿಸುತ್ತಿದೆ ಎನ್ನಲಾಗ್ತಿದೆ. ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ಹೆಚ್ಚು ಸ್ಥಾನ ಗೆಲ್ಲಬೇಕು. ಲೋಕಸಭೆ ಚುನಾವಣೆಗೆ ಈಗಿನಿಂದಲೇ ಸಿದ್ಧತೆ ಮಾಡಿಕೊಳ್ಳಿ, ಉಸ್ತುವಾರಿ ಸಚಿವರುಗಳು ನಿಮ್ಮ ಕ್ಷೇತ್ರವನ್ನು ಗೆಲ್ಲಿಸಬೇಕು ಎಂದು ಸಿಎಂ ಶಾಸಕರಿಗೆ ಹೇಳಿದ್ದಾರಂತೆ.

ಇದನ್ನೂ ವೀಕ್ಷಿಸಿ:  ವಿಶ್ವ ವಿಖ್ಯಾತ ಮೈಸೂರು ದಸರಾ ಸಂಭ್ರಮ ಶುರು: 2 ಹಂತಗಳಲ್ಲಿ ಆನೆಗಳ ಆಗಮನ !