ಗುತ್ತಿಗೆದಾರರ ಗುದ್ದಾಟಕ್ಕೆ ಟ್ವಿಸ್ಟ್: ಕಾಮಗಾರಿ ಮಾಡದೇ ಸಹಿ ಮಾಡಿದ್ರಾ 19 ಗುತ್ತಿಗೆದಾರರು?

ಕಾಮಗಾರಿ ಮಾಡದೇ ಆರೋಪ ಮಾಡಿದ ಗುತ್ತಿಗೆದಾರರ ಮೇಲೆ ಕ್ರಮಕ್ಕೆ ಪೊಲೀಸರ ತಯಾರಿ ನಡೆಸುತ್ತಿದ್ದಾರೆ. ಈ ಬಗ್ಗೆ ಹಿರಿಯ ಪೊಲೀಸ್ ಅಧಿಕಾರಿಗಳ ಜೊತೆ ಚರ್ಚೆ ನಡೆಸಿ ಕ್ರಮ ಕೈಗೊಳ್ಳಲು ನಿರ್ಧಾರ ಮಾಡಲಾಗಿದೆ.

Share this Video
  • FB
  • Linkdin
  • Whatsapp

ಬೆಂಗಳೂರು: ಗುತ್ತಿಗೆದಾರರ ಗುದ್ದಾಟಕ್ಕೆ ಮತ್ತೊಂದು ಟ್ವಿಸ್ಟ್‌ ಸಿಕ್ಕಿದ್ದು, 57 ಗುತ್ತಿಗೆದಾರರ ವಿಚಾರಣೆಯನ್ನು ಪೊಲೀಸರು(police) ಮಾಡಿದ್ದಾರೆ. ಎಸಿಪಿ ವಿಚಾರಣೆಯಲ್ಲಿ ಸ್ಫೋಟಕ ರಹಸ್ಯ ಬಯಲಾಗಿದೆ. 57 ಗುತ್ತಿಗೆದಾರರಲ್ಲಿ(Contractors) 19 ಜನ ಯಾವುದೇ ಕೆಲಸವನ್ನು ಮಾಡಿಲ್ಲ ಎಂಬ ಅಂಶ ಇದೀಗ ಬಯಲಾಗಿದೆ. ಹಾಗಾಗಿ ಸುಮ್ಮನೆ ಆರೋಪ ಮಾಡಿದ ಗುತ್ತಿಗೆದಾರರಿಗೆ ಕಂಟಕ ಶರುವಾಗಿದೆ. ಎಲ್ಲ ಗುತ್ತಿಗೆದಾರರ ಕಾಮಗಾರಿ ವಿವರ ಸಂಗ್ರಹಿಸಿರುವ ಪೊಲೀಸರು, ಸೂಕ್ತ ದಾಖಲೆ ಒದಗಿಸದಿದ್ದರೆ ಕಾನೂನು ಕ್ರಮ ಕೈಗೊಳ್ಳುವ ಸೂಚನೆ ನೀಡಿದ್ದಾರೆ. ಕಾಮಗಾರಿ ಮಾಡದೇ ಪತ್ರಕ್ಕೆ ಸಹಿ ಹಾಕಿದ 19 ಮಂದಿಗೆ ಇದೀಗ ಸಂಕಷ್ಟ ಎದುರಾಗಿದೆ. ಎರಡು ದಿನ 57 ಪಾಲಿಕೆ ಗುತ್ತಿಗೆದಾರರನ್ನ ಶೇಷಾದ್ರಿಪುರಂ ಎಸಿಪಿ ವಿಚಾರಣೆ ಮಾಡಿದ್ದರು. ಪಾಲಿಕೆಯ ಯಾವ ಕಾಮಗಾರಿ ಮಾಡಿದ್ದೀರಾ..? ಎಲ್ಲಿ ಕಾಮಗಾರಿ ಮಾಡಲಾಗಿದೆ..? ಎಷ್ಟು ಮೊತ್ತದ ಕಾಮಗಾರಿ..? ಎಷ್ಟು ಬಿಲ್ ಬಾಕಿ ಇದೆ..? ಇವಿಷ್ಟು ಮಾಹಿತಿ ಮತ್ತು ದಾಖಲೆ ಒದಗಿಸಲು ಸೂಚನೆ ನೀಡಲಾಗಿದೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇದನ್ನೂ ವೀಕ್ಷಿಸಿ:  ಲೋಕಸಭಾ ಸಮರ: ಈ ಬಾರಿ ಮಲ್ಲಿಕಾರ್ಜುನ ಖರ್ಗೆ ಎಲ್ಲಿಂದ ಸ್ಪರ್ಧಿಸುತ್ತಾರೆ?

Related Video