
ಅತೀ ಶೀಘ್ರದಲ್ಲೇ ಅಂತಿಮ ತೀರ್ಪು.. ದರ್ಶನ್‌ಗೆ ಸಿಗೋದು ಬೇಲಾ, ಪರ್ಮನೆಂಟ್ ಜೈಲಾ?
ಕೊಲೆ ಆರೋಪ ಹೊತ್ತು ಜೈಲು ಸೇರಿರೋ ಸ್ಯಾಂಡಲ್‌ವುಡ್ ನಟ ದರ್ಶನ್ ಪ್ರಕರಣದ ವಿಚಾರಣೆಯಲ್ಲಿ ಈಗ ಬಿಗ್ ಟ್ವಿಸ್ಟ್ ಸಿಕ್ಕಿದೆ! ಇಷ್ಟು ದಿನ ಆಮೆಗತಿಯಲ್ಲಿ ಸಾಗ್ತಾ ಇದ್ದ ಕೇಸ್, ಈಗ ಸೂಪರ್ ಫಾಸ್ಟ್ ಟ್ರ್ಯಾಕ್ ಏರಿದೆ. ಹೌದು, ದರ್ಶನ್ ಭವಿಷ್ಯ ನಿರ್ಧಾರವಾಗುವ ದಿನಗಳು ಹತ್ತಿರ ಬರುತ್ತಿವೆ. ಏನಾಗಲಿದೆ ಮುಂದೆ?
ಏನಾಗಲಿದೆ ದರ್ಶನ್ ಭವಿಷ್ಯ..? ಆತಂಕದಲ್ಲಿ ಫ್ಯಾನ್ಸ್..!
ಕೊಲೆ ಆರೋಪ ಹೊತ್ತು ಜೈಲು ಸೇರಿರೋ ಸ್ಯಾಂಡಲ್‌ವುಡ್ ನಟ ದರ್ಶನ್ ಪ್ರಕರಣದ ವಿಚಾರಣೆಯಲ್ಲಿ ಈಗ ಬಿಗ್ ಟ್ವಿಸ್ಟ್ ಸಿಕ್ಕಿದೆ! ಇಷ್ಟು ದಿನ ಆಮೆಗತಿಯಲ್ಲಿ ಸಾಗ್ತಾ ಇದ್ದ ಕೇಸ್, ಈಗ ಸೂಪರ್ ಫಾಸ್ಟ್ ಟ್ರ್ಯಾಕ್ ಏರಿದೆ. ಹೌದು, ದರ್ಶನ್ ಭವಿಷ್ಯ ನಿರ್ಧಾರವಾಗುವ ದಿನಗಳು ಹತ್ತಿರ ಬರುತ್ತಿವೆ. ಕೋರ್ಟ್ ಅಂಗಳದಲ್ಲಿ ನಡೆದಿರೋ ಆ ಮಹತ್ವದ ಬೆಳವಣಿಗೆಯಾದರೂ ಏನು? ನೋಡೋಣ ಬನ್ನಿ.
ಒಂದು ವರ್ಷದಲ್ಲಿ ಪ್ರಮುಖ ಹಂತಕ್ಕೆ ದಾಸನ ಕೇಸ್..!
ದರ್ಶನ್‌ಗೆ ಸಿಕ್ಕೋದು ಬೇಲಾ..? ಪರ್ಮನೆಂಟ್ ಜೈಲಾ..?
ಸಿಸಿಹೆಚ್-59 ನ್ಯಾಯಾಲಯಕ್ಕೆ ವರ್ಗಾವಣೆಗೊಂಡ ಮೇಲೆ ರೇಣುಕಾಸ್ವಾಮಿ ಮರ್ಡರ್ ಕೇಸ್ ವಿಚಾರಣೆಗೆ ವೇಗ ಸಿಕ್ಕಿದೆ. ಸೋಮವಾರ ದರ್ಶನ್-ಪವಿತ್ರಾ ಸೇರಿದಂತೆ ಆರೋಪಿಗಳು ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆಗೆ ಹಾಜರ್ ಆಗಿದ್ದಾರೆ. ಈ ವೇಳೆ ಪ್ರಾಸಿಕ್ಯೂಶನ್ ಮತ್ತು ದರ್ಶನ್ ಪರ ವಕೀಲರು ಕೋರ್ಟ್ ಮುಂದೆ ಹಲವು ಮನವಿ ಸಲ್ಲಿಸಿದ್ದಾರೆ. ಕೋರ್ಟ್ ಕೂಡ ಈಗ ಒಂದು ಮಹತ್ವದ ತೀರ್ಮಾನ ತೆಗೆದುಕೊಂಡಿದೆ. ಇನ್ಮುಂದೆ ಈ ಕೇಸ್ ವಿಚಾರಣೆ ಮಿಂಚಿನ ವೇಗದಲ್ಲಿ ಸಾಗಲಿದೆ.
ಹಾಗಿದ್ದರೆ ಏನಾಗ್ತಿದೆ ದರ್ಶನ್ ಕೇಸ್ ಬೆಳವಣಿಗೆ? ಹೆಚ್ಚಿನ ಮಾಹಿತಿಗೆ 'ಸಿನಿಮಾ ಹಂಗಾಮ' ವಿಡಿಯೋ ನೋಡಿ..