Cine Express: '8' ಗ್ಲಿಂಪ್ಸ್‌ನಿಂದ 'ಊರಬ್ಬ' ಟ್ರೇಲರ್‌ವರೆಗೆ: ಸ್ಯಾಂಡಲ್‌ವುಡ್‌ನಲ್ಲಿ ಸಿನಿಮಾಗಳ ಹವಾ

Sandalwood Movie Updates: ಈಗ ಮದುವೆ ಸೀಸನ್ ಮುಗಿದಿದೆ. ಇದೀಗ ಸ್ಯಾಂಡಲ್​ವುಡ್​​ನಲ್ಲಿ ನಾಗುಗೆ ವಧು ಬೇಕಾಗಿದೆ ಅನ್ನೋ ಸಿನಿಮಾ ತೆರೆಗೆ ಬರಲು ಸಿದ್ಧವಾಗಿದೆ. ಈ ಚಿತ್ರದ ಹಾಡುಗಳು ಹಾಡು ಟ್ರೈಲರ್ ರಿಲೀಸ್ ಆಗಿದೆ.

Share this Video
  • FB
  • Linkdin
  • Whatsapp

ನಿರ್ಮಾಪಕ ಅರವಿಂದ್ ವೆಂಕಟೇಶ್ ರೆಡ್ಡಿ ಹುಟ್ಟುಹಬ್ಬಕ್ಕೆ '8' ಚಿತ್ರ ಗ್ಲಿಂಪ್ಸ್ ರಿಲೀಸ್: ಉದ್ಯಮಿ ಅರವಿಂದ್​ ವೆಂಕಟೇಶ್​ ರೆಡ್ಡಿ ಈಗ ಸ್ಯಾಂಡಲ್​ವುಡ್​ಗು ಎಂಟ್ರಿ ಕೊಟ್ಟಿದ್ದಾರೆ. ಅರವಿಂದ್ ವೆಂಕಟೇಶ್ ರೆಡ್ಡಿ ಜನ್ಮದಿನದ ವಿಶೇಷ ಅಂಗವಾಗಿ, AVR Entertainment ಬ್ಯಾನರ್​​ನಲ್ಲಿ ನಿರ್ಮಾಣ ಆಗುತ್ತಿರೋ ಬಹು ನಿರೀಕ್ಷಿತ ‘8’ದ ವಿಶೇಷ ಗ್ಲಿಂಪ್ಸ್​ ರಿಲೀಸ್ ಆಗಿದೆ. ಸುಜಯ್ ಶಾಸ್ತ್ರಿ ನಿರ್ದೇಶನದ ಈ ಚಿತ್ರದಲ್ಲಿ ಖ್ಯಾತ ನಟ ಅನುರಾಗ್ ಕಶ್ಯಪ್ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಜೀವನದಲ್ಲಿ ದೊರೆಯುವ ಎರಡನೇ ಅವಕಾಶ ಎಂಬ ಗಂಭೀರವಾದ ವಿಷಯವನ್ನು 8 ಸಿನಿಮಾದಲ್ಲಿ ಹೇಳಲಾಗ್ತಿದೆ. 8 ಸಿನಿಮಾದ ಶೂಟಿಂಗ್ ಕೂಡ ಮುಗಿದಿದ್ದು, ಪೋಸ್ಟ್-ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿವೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

"ನಾಗುಗೆ ವಧು ಬೇಕಾಗಿದೆ" ಹಾಡು, ಟ್ರೇಲರ್ ಬಿಡುಗಡೆ: ಈಗ ಮದುವೆ ಸೀಸನ್ ಮುಗಿದಿದೆ. ಇದೀಗ ಸ್ಯಾಂಡಲ್​ವುಡ್​​ನಲ್ಲಿ ನಾಗುಗೆ ವಧು ಬೇಕಾಗಿದೆ ಅನ್ನೋ ಸಿನಿಮಾ ತೆರೆಗೆ ಬರಲು ಸಿದ್ಧವಾಗಿದೆ. ಈ ಚಿತ್ರದ ಹಾಡುಗಳು ಹಾಡು ಟ್ರೈಲರ್ ರಿಲೀಸ್ ಆಗಿದೆ. ಈಗ ಗಂಡು ಮಕ್ಕಳಿಗೆ ಮದುವೆಗೆ ಹೆಣ್ಣು ಸಿಗುತ್ತಿಲ್ಲ. ಇದಕ್ಕೆ ಕಾರಣಗಳು ಹಲವಾರು. ಇಂತಹ ಪ್ರಸ್ತುತ ಪರಿಸ್ಥಿತಿಯನ್ನಿಟ್ಟುಕೊಂಡು ನಿರ್ದೇಶಕ ಆರ್ ಕೆ "ನಾಗುಗೆ ವಧು ಬೇಕಾಗಿದೆ" ಸಿನಿಮಾ ಮಾಡಿದ್ದಾರೆ. ಕರ್ನಾಟಕ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀ ಚೌಧರಿ ಟ್ರೇಲರ್ ಹಾಗೂ ಹಾಡುಗಳನ್ನು ಅನಾವರಣ ಮಾಡಿದ್ದಾರೆ. ಚಿತ್ರದಲ್ಲಿ ದತ್ತು ಪೂಜಾರಿ, ರೇಖಾದಾಸ್, ಅಪೂರ್ವ ಶ್ರೀ, ಸೋನಿಕಾ ಸೋಮಣ್ಣ ನಟಿಸಿದ್ದಾರೆ.

ಭಾಯ್ಸ್ ನೆವರ್ ಕಾಂಪ್ರಮೈಸ್ ಟೀಸರ್ ಬಿಡುಗಡೆ: ಈ ಹಿಂದೆ ಜಸ್ಟ್ ಮದ್ವೇಲಿ, ರಾಜಣ್ಣನ ಮಗ ಚಿತ್ರಗಳನ್ನು ನಿರ್ಮಿಸಿದ್ದ ಹರೀಶ್ ಜಲಗೆರೆ ಅವರು ಇದೀಗ ನಿರ್ದೇಶನಕ್ಕೆ ಕೈ ಹಾಕಿದ್ದಾರೆ. 'ಬಾಯ್ಸ್ ನೆವರ್ ಕಾಂಪ್ರಮೈಸ್'ಎಂಬ ಚಿತ್ರಕ್ಕೆ ಅವರೇ ಆಕ್ಷನ್ ಕಟ್ ಹೇಳಿದ್ದಾರೆ. ಈ ಸಿನಿಮಾದ ಟೀಸರ್​ ಬಿಡುಗಡೆ ಆಗಿದೆ. ಚಿತ್ರದಲ್ಲಿ ಸಾಮ್ರಾಟ್, ನಕ್ಷತ್ರ, ಸುಪ್ರಿತ್ ಕಾಟಿ, ಸೀತಾರಾಮ, ಮಂಡ್ಯಸಿದ್ದು, ರಾಜೀವ್ ರೆಡ್ಡಿ, ಉಮೇಶ್ ಕಿನ್ನಾಳ, ಗಜೇಂದ್ರ, ಹೇಮಂತ್ ಗೌಡ, ರಾಜರಾಜ ಚೋಳ ಸೇರಿದಂತೆ ಬಹುತೇಕ ಹೊಸ ಮುಖಗಳೇ ಬಣ್ಣ ಹಚ್ಚಿದ್ದಾರೆ. ಮಾರಿ ಗೋಲ್ಡ್ ಸ್ಡುಡಿಯೋಸ್ ಮೂಲಕ ಉಜ್ವಲ ನಾಗರಾಜ ಜಲಗೆರೆ ಚಿತ್ರ ನಿರ್ಮಿಸಿದ್ದಾರೆ.

ಸ್ಯಾಂಡಲ್​ವುಡ್​​ನಲ್ಲಿ ಶುರುವಾಗುತ್ತಿದೆ ದೊಡ್ಡ "ಊರಬ್ಬ": ಮಾಗಡಿ ತಾಲ್ಲೂಕಿನ ಸುಪ್ರಸಿದ್ದ ಉಜ್ಜಿನಿ ಚೌಡೇಶ್ವರಿ ಜಾತ್ರೆ, ಅದರ ಹಿನ್ನೆಲೆಯಲ್ಲಿ ನಡೆಯುವ ಕಥೆ ಇಟ್ಟುಕೊಂಡು ನಿರ್ದೇಶಕ ಲಕ್ಕಿ ಶಂಕರ್ "ಊರಬ್ಬ" ಎಂಬ ಚಿತ್ರವನ್ನು ಸಿದ್ಧಪಡಿಸಿದ್ದಾರೆ. ಇದೀಗ ಊರಬ್ಬ ಸಿನಿಮಾದ ಟ್ರೈಲರ್​ ಬಿಡುಗಡೆ ಆಗಿದೆ. ಒನ್ಸ್ ಮೋರ್ ಕೌರವ ಖ್ಯಾತಿಯ ನರೇಶ್ ಗೌಡ, ತನಿಷಾ ಕುಪ್ಪಂಡ, ಪಾಯಲ್ ಚಂಗಪ್ಪ, ಸಿದ್ದು ಮೂಲಿಮನಿ ಮಿತ್ರಾ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಕುಣಿಗಲ್ ಶಾಸಕ ರಂಗನಾಥ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಟ್ರೈಲರ್ ಲಾಚ್ ಮಾಡಿ ಶುಭ ಹಾರೈಸಿದ್ದಾರೆ. ಚಿತ್ರಕ್ಕೆ ನರೇಶ್ ಗೌಡ ಬಂಡವಾಳ ಹೂಡಿದ್ದಾರೆ.

Related Video