Asianet Suvarna News Asianet Suvarna News

Big3 Impact : ಸುವರ್ಣ ನ್ಯೂಸ್ ಫಲಶ್ರುತಿ: ಹೆರೂರು ಹಾಡಿ ಗ್ರಾಮಕ್ಕೆ ಬಂತು ಬಸ್

ಕೊಡಗು ಜಿಲ್ಲೆ ಕುಶಾಲನಗರ ತಾಲ್ಲೂಕಿನ ಹೆರೂರು ಹಾಡಿ ಗ್ರಾಮಕ್ಕೆ ಸರಿಯಾದ ಬಸ್ ವ್ಯವಸ್ಥೆ ಇರಲಿಲ್ಲವಾಗಿದ್ದು, ಸುವರ್ಣ ನ್ಯೂಸ್ ಬಿಗ್-3 ಯಲ್ಲಿ ವರದಿ ಪ್ರಸಾರ ಮಾಡಿದ್ದು, ಇಂಪ್ಯಾಕ್ಟ್ ಆಗಿದೆ.

ಕೊಡಗು ಜಿಲ್ಲೆ ಕುಶಾಲನಗರ ತಾಲ್ಲೂಕಿನ ಹೆರೂರು ಹಾಡಿ ಗ್ರಾಮಕ್ಕೆ ಸರಿಯಾದ ಬಸ್ ವ್ಯವಸ್ಥೆ ಇರಲಿಲ್ಲ. ಇದರಿಂದಾಗಿ 14ಕ್ಕೂ ಹೆಚ್ಚು ವಿದ್ಯಾರ್ಥಿಗಳು ಶಾಲೆಗೆ ಹೊಗದೇ ಮನೆಯಲ್ಲೇ ಉಳಿದಿದ್ದರು. ಈ ಬಗ್ಗೆ  ಸುವರ್ಣ ನ್ಯೂಸ್ ಬಿಗ್-3 ಯಲ್ಲಿ ವರದಿ ಪ್ರಸಾರ ಮಾಡಿ ಸಂಬಂಧ ಪಟ್ಟವರ ಗಮನಕ್ಕೆ ತಂದಿತ್ತು. 50ಕ್ಕೂ ಹೆಚ್ಚು ವಿದ್ಯಾರ್ಥಿಗಳು 6 ರಿಂದ 8 ಕಿಲೋ ಮೀಟರ್ ದೂರದಲ್ಲಿರುವ ಬಸವನಹಳ್ಳಿ, ಕಾನ್‍ಬೈಲು ಮತ್ತು ಏಳನೇ ಹೊಸಕೋಟೆ ಶಾಲೆಗಳಿಗೆ ಹೋಗಬೇಕಿತ್ತು.ಇನ್ನೂ ಗ್ರಾಮಕ್ಕೆ ಸಮಯಕ್ಕೆ ಸರಿಯಾಗಿ ಬಸ್ಸು ಬಾರದೆ ಹತ್ತಾರು ವಿದ್ಯಾರ್ಥಿಗಳು ಶಾಲೆಯಿಂದ ಹೊರಗುಳಿದ ಪರಿಸ್ಥಿತಿಯನ್ನು ಬಿಗ್-3 ಯಲ್ಲಿ ವರದಿ ಪ್ರಸಾರ ಮಾಡ್ತಾ ಇದ್ದಂತೆ ಅಧಿಕಾರಿಗಳೆಲ್ಲಾ ಎಚ್ಚೆತ್ತುಕೊಂಡರು. ಸಮಯಕ್ಕೆ ಸರಿಯಾಗಿ ಬಸ್ಸು ಸಂಚರಿಸುವಂತೆ ನೋಡಿಕೊಂಡರು. ಗ್ರಾಮದಲ್ಲಿ ಬಸ್ ಕಂಡು ವಿದ್ಯಾರ್ಥಿಗಳು, ಪೋಷಕರೆಲ್ಲಾ ಸಂತಸಗೊಂಡಿದ್ದಾರೆ. ಸುವರ್ಣ ನ್ಯೂಸ್ ಬಿಗ್-3 ವರದಿಗೆ ಧನ್ಯವಾದ ಕೂಡ ತಿಳಿಸಿದರು.

HD Kumaraswamy: ದಳಪತಿಗೆ ಬ್ರಾಹ್ಮಣ ವಿರೋಧಿ ಹಣೆಪಟ್ಟಿ: ಕುಮಾರಸ್ವಾ ...