ಭದ್ರಾ ಉಪಕಾಲುವೆಗಾಗಿ 20 ಎಕರೆ ಜಮೀನು ಖರೀದಿ: ದಶಕಗಳೇ ಕಳೆದ್ರೂ ಸ್ವಾಧೀನಕ್ಕೆ ಪಡೆಯದ ತಾಲೂಕು ಆಡಳಿತ

ಸರ್ಕಾರಿ ಅಧಿಕಾರಿಗಳು ಮೈಮರೆತ್ರೆ ಏನೆಲ್ಲಾ ಆಗುತ್ತದೆ ಎಂಬುದಕ್ಕೆ ಈ ಪ್ರಕರಣ ಸಾಕ್ಷಿ. ರೈತರಿಂದ ಸರ್ಕಾರ 20 ಎಕರೆ  ಭೂಸ್ವಾಧೀನ ಅರವತ್ತು ವರ್ಷ ಕಳೆದಿದೆ. ಉದ್ದೇಶಿತ ಗ್ರಾಮ ಠಾಣಾ  ಯೋಜನೆಗೆ ರೈತರ ಜಮೀನು ಬಳಸಿದ್ದಕ್ಕೆ ಇದೀಗ ರೈತರು ತಿರುಗಿಬಿದ್ದಿದ್ದಾರೆ. ಇದು ಸರ್ಕಾರಿ ಅಧಿಕಾರಿಗಳು ಮತ್ತು ರೈತರ ಮಧ್ಯೆ ಜಟಾಪಟಿಗೆ ಕಾರಣವಾಗಿದೆ. 
 

First Published Nov 3, 2023, 11:04 AM IST | Last Updated Nov 3, 2023, 11:04 AM IST

ಇದು ದಾವಣಗೆರೆ (Davanagere) ಜಿಲ್ಲೆಯ ಚನ್ನಗಿರಿ ತಾಲ್ಲೂಕಿನ ಸಂತೆಬೆನ್ನೂರು ಹೋಬಳಿಯ ಗೊಲ್ಲರಹಳ್ಳಿ ಗ್ರಾಮ. 20 ಎಕರೆ ಸರ್ಕಾರಿ ಜಮೀನು ಇದೀಗ ಈ ಗ್ರಾಮದಲ್ಲಿ ವಿವಾದ ಸೃಷ್ಟಿಸಿದೆ.  ಭದ್ರಾ ಉಪ ನಾಲೆ(bhadra canal project) ಈ ಗ್ರಾಮದಲ್ಲಿ ಹಾದು ಹೋಗಿದೆ. 1962-63ರಲ್ಲೇ  ನೀರಾವರಿ ಇಲಾಖೆ ಈ ಗ್ರಾಮವನ್ನು ಶಿಫ್ಟ್‌ ಮಾಡುವ ಸಲುವಾಗಿ 20 ಎಕರೆ ಜಮೀನಿನ ಮಾಲೀಕರಿಗೆ ಹಣ ನೀಡಿ  ಸ್ವಾದೀನ‌ ಮಾಡಿಕೊಂಡಿತ್ತು. ಆದರೆ ಜಮೀನು(Land) ತೆರವು ಕಾರ್ಯ  ಕೇವಲ ಕಾಗದದಲ್ಲಷ್ಟೇ ಉಳಿದು ಬಿಟ್ಟಿದೆ. ಇದು ಇಂದು ವಿವಾದಕ್ಕೆ ಕಾರಣವಾಗಿದೆ. ಜಮೀನಿನ  ಮೂಲ ವಾರಸುದಾರರು ಅದೇ ಜಮೀನಿನಲ್ಲಿ ಕೃಷಿ ಮುಂದುವರಿಸಿಕೊಂಡು ಬಂದು ಅಡಿಕೆ ತೋಟವನ್ನು ಮಾಡಿದರು. ಆಗಲು ಗ್ರಾಮ ಪಂಚಾಯತ್ ಅಧಿಕಾರಿಗಳು ಆ ಭೂಮಿಯನ್ನು ಹದ್ದುಬಸ್ತ್ ಮಾಡಿಕೊಳ್ಳಲಿಲ್ಲ. ಜಮೀನಿನ ಪಹಣಿ 2015ರ ವರೆಗೂ ಮೂಲ ಮಾಲೀಕರ ಹೆಸರಿನಲ್ಲಿ ಓಡುತ್ತಿತ್ತು. ಆದರೆ 2015 ರಿಂದ ಗ್ರಾಮಠಾಣಾ ಹೆಸರಿನಲ್ಲಿ ಪಹಣಿ ಬಂದಿದ್ದು 20 ಕ್ಕೂ ಹೆಚ್ಚು ಕುಟುಂಬಗಳನ್ನು ಒಕ್ಕಲೆಬ್ಬಿಸಲು ಅಧಿಕಾರಿಗಳು ಮುಂದಾದರು. ಈ ವೇಳೆ ಅಧಿಕಾರಿಗಳ ಹಾಗೂ ಗ್ರಾಮಸ್ಥರ ನಡುವೆ ವಾಗ್ವಾದ ನಡೆದಿದೆ. ನಮ್ಮ ಪೂರ್ವಜರಿಗೆ 1 ಸಾವಿರ ರೂಪಾಯಿ ಕೊಟ್ಟು ಖರೀದಿ ಮಾಡಿದ್ದರು. ಆದರೆ ಇಷ್ಟು ವರ್ಷಗಳ ಕಾಲ ನಮ್ಮ ಹೆಸರಿನಲ್ಲಿ ಪಹಣಿ ಇತ್ತು. ಇದರ ವಿರುದ್ಧ ನಾವು ಕಾನೂನು ಹೋರಾಟ ಮಾಡುತ್ತೇವೆ ಎನ್ನುತ್ತಾರೆ ರೈತರು.ಇನ್ನು 1962-63ನೇ ಸಾಲಿನಲ್ಲಿ ಭೂ ಸ್ವಾಧೀನ ಮಾಡಿಕೊಂಡಿದ್ದು ಜಾಗವನ್ನು ಸುಪರ್ದಿಗೆ ತೆಗೆದುಕೊಳ್ಳದೆ ಸರ್ಕಾರಿ ಅಧಿಕಾರಿಗಳು ನಿರ್ಲಕ್ಷ್ಯ ಮಾಡಿದ್ದಾರೆ.‌ ಸ್ಥಳಕ್ಕೆ ಆಗಮಿಸಿದ ಚನ್ನಗಿರಿ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಉತ್ತಮ್  ಜನರ ಮನವೊಲಿಕೆಗೆ ಯತ್ನಿಸಿದ್ರು. ಜಮೀನನ್ನು ತಕ್ಷಣಕ್ಕೆ ತೆರವು ಮಾಡಲ್ಲ. 9 ದಿನಗಳ‌ ಕಾಲಾವಕಾಶ ನೀಡುತ್ತೇವೆ. ಅಷ್ಟರೊಳಗೆ ದಾಖಲೆಗಳನ್ನು ನೀಡಿ, ಇಲ್ಲವಾದ್ರೆ ತೆರವು ಮಾಡುವುದಾಗಿ ಇಒ ರೈತರಿಗೆ ಎಚ್ಚರಿಕೆ ನೀಡಿದ್ರು. 

ಇದನ್ನೂ ವೀಕ್ಷಿಸಿ:  ರಾತ್ರಿ ಹೊತ್ತಲ್ಲಿ ಒತ್ತುವರಿ ತೆರವು ಕಾರ್ಯಾಚರಣೆ: ವಕೀಲೆ ಕುಟುಂಬದ ವಿರುದ್ಧ ಒತ್ತುವರಿ ಆರೋಪ

Video Top Stories