ರಾತ್ರಿ ಹೊತ್ತಲ್ಲಿ ಒತ್ತುವರಿ ತೆರವು ಕಾರ್ಯಾಚರಣೆ: ವಕೀಲೆ ಕುಟುಂಬದ ವಿರುದ್ಧ ಒತ್ತುವರಿ ಆರೋಪ

ಒತ್ತುವರಿ ತೆರವು ಕಾರ್ಯಾಚರಣೆ ಸಾಮಾನ್ಯವಾಗಿ ಹಗಲು ಹೊತ್ತಲ್ಲಿ ನಡೆಯುತ್ತೆ. ಇಲ್ಲೀಗಲ್ಲಾಗಿ ಒತ್ತುವರಿ ಮಾಡ್ಕೊಂಡಿದ್ದನ್ನು ಲೀಗಲ್ಲಾಗಿ ತೆರವು ಮಾಡೋದ್ರಲ್ಲಿ ತಪ್ಪೇನಿಲ್ಲ. ಆದ್ರೆ, ಬೀದರ್ನಲ್ಲಿ ಒತ್ತುವರಿಯಾಗಿದೆ ಅನ್ನೋ ಜಾಗವನ್ನು ಅಧಿಕಾರಿಗಳು ರಾತ್ರಿ ಹೊತ್ತಲ್ಲಿ ತೆರವು ಮಾಡೋಕೆ ಹೊರಟಿದ್ರು. ಅಧಿಕಾರಿಗಳ ಈ ಮಿಡ್ನೈಟ್ ಕಾರ್ಯಾಚರಣೆ ಈಗ ದೊಡ್ಡ  ವಿವಾದಕ್ಕೆ ಕಾರಣವಾಗಿದೆ.

First Published Nov 3, 2023, 10:51 AM IST | Last Updated Nov 3, 2023, 10:51 AM IST

ರಾತ್ರಿ ಹೊತ್ತಲ್ಲಿ ಕಾರ್ಯಾಚರಣೆಗಿಳಿದ ಅಧಿಕಾರಿಗಳು. ತೆರವು ಕಾರ್ಯಾಚರಣೆಗೆ (eviction drive)ಕುಟುಂಬಸ್ಥರ ವಿರೋಧ.. ಕೂಗಾಟ.. ತಳ್ಳಾಟ..ಕೊನೆಗೆ ಕಾರ್ಯಾಚರಣೆಗೆ ಅಡ್ಡ ನಿಂತವರನ್ನೇ ಎತ್ತಾಕೊಂಡ್ ಹೋದ ಪೊಲೀಸರು. ಇದು ಬೀದರ್ ಜಿಲ್ಲೆಯ ಬಾಲ್ಕಿಯಲ್ಲಿ ನಡೆದ ಮಿಡ್ ನೈಟ್ ತೆರವು ಕಾರ್ಯಾಚರಣೆ ಹೈಡ್ರಾಮಾ. ಭಾಲ್ಕಿ ಪಟ್ಟಣದ ತಹಶೀಲ್ದಾರ್(Tehsildar) ಕಚೇರಿಯ ಹಿಂಬದಿಯಲ್ಲೇ ನಡೆದ ಘಟನೆ ಇದು. ಇಲ್ಲಿ ಸರ್ಕಾರಿ ಜಾಗ ಒತ್ತುವರಿ ಮಾಡಿದ್ದಾರೆ ಎಂದು ಅಧಿಕಾರಿಗಳು ರಾತ್ರಿ 12 ಗಂಟೆ ಹೊತ್ತಿಗೆ ತೆರವು ಕಾರ್ಯಾಚರಣೆಗೆ ಇಳಿದಿದ್ದರು.ಎಸಿ, ತಹಶಿಲ್ದಾರ್, ಸಿಪಿಐ ಸೇರಿ ಪೊಲೀಸ್ ಭದ್ರತೆಯಲ್ಲಿ ಒತ್ತುವರಿ ತೆರವಿಗೆ ಮುಂದಾಗಿದ್ದರು. ಆದ್ರೆ, ಈ ಜಾಗ ವಕೀಲೆ ಧನಲಕ್ಷ್ಮಿ ಬಳತೆ ಎಂಬುವರ ಕಬ್ಜಾದಲ್ಲಿ ಇದೆ. ಜಾಗದ ಮೇಲೆ ಕೋರ್ಟ್ನಿಂದ ತಡೆಯಾಜ್ಞೆ ಕೂಡ ಇದೆ. ಇಷ್ಟಿದ್ದರೂ ಪೊಲೀಸರು, ಅಧಿಕಾರಿಗಳು ರಾತ್ರೋರಾತ್ರಿ ತೆರವು ಕಾರ್ಯಾಚರಣೆಗೆ ಮುಂದಾಗಿದ್ದಾರೆ. ಆಗ ವಕೀಲೆ ಧನಲಕ್ಷ್ಮಿ ಹಾಗೂ ಅವರ ಪತಿ ವಿರೋಧ ವ್ಯಕ್ತಪಡಿಸಿದ್ದಾರೆ.. ಅಧಿಕಾರಿಗಳು ಮತ್ತು ವಕೀಲೆ ಕುಟುಂಬದ ಮಧ್ಯೆ ಮಾತಿಗೆ ಮಾತು, ವಾಗ್ವಾದ ನಡೆದು ಗಲಾಟೆ ಆಗಿದೆ.. ಕೊನೆಗೆ ಪೊಲೀಸರು ವಕೀಲೆ ಹಾಗೂ ಅವರ ಪತಿಯನ್ನ ಬಂಧಿಸಿ ಕೇಸ್ ದಾಖಲಿಸಿದ್ದಾರೆ.ವಕೀಲೆ ಕುಟುಂಬದ ಮೇಲೆ ಕೇಸ್ ದಾಖಲಿಸಿದ ಪೊಲೀಸರು(police) ಹಾಗೂ ಅಧಿಕಾರಿಗಳ ವಿರುದ್ಧ ವಕೀಲರ ಸಂಘ ಪ್ರತಿಭಟನೆಗೆ ಇಳಿದಿದೆ. ಭಾಲ್ಕಿ, ಚಿಂಚೋಳಿ, ಬೀದರ್ನಲ್ಲಿ ಪ್ರತಿಭಟನೆ ನಡೆಸಿದ ವಕೀಲರ ಸಂಘ, ಒತ್ತುವರಿ ಮಾಡಿಕೊಂಡಿದ್ದರೆ ರಾತ್ರಿ ಹೊತ್ತಲ್ಲಿ ಯಾಕೆ ತೆರವು ಕಾರ್ಯಾಚರಣೆ ಮಾಡ್ಬೇಕಿತ್ತು. ಹತ್ತಾರುಪೊಲೀಸರು ವಕೀಲೆ ಮೇಲೆ ದೌರ್ಜನ್ಯ ಎಸಗಿ ಬಂಧಿಸಿದ್ದಾರೆ, 308 ಕೇಸ್ ದಾಖಲಿಸಿದ್ದಾರೆ ಎಂದು ಆಕ್ರೋಶ ಹೊರಹಾಕಿದ್ದಾರೆ. ಅಷ್ಟೇ ಅಲ್ಲ ಕಾರ್ಯಾಚರಣೆಯಲ್ಲಿ ಭಾಗಿಯಾದ ಅಧಿಕಾರಿಗಳ ವಿರುದ್ಧ 24 ಗಂಟೆಯಲ್ಲಿ ಕ್ರಮ ಜರುಗಿಸದಿದ್ದರೆ ರಾಜ್ಯಾದ್ಯಂತ ಹೋರಾಟ ಮಾಡೋದಾಗಿ ಎಚ್ಚರಿಸಿದ್ದಾರೆ.

ಇದನ್ನೂ ವೀಕ್ಷಿಸಿ:  ಕೈಕೊಟ್ಟ ಮಳೆ..ಗೋಶಾಲೆಗಳಿಗೂ ಬರ ಸಂಕಷ್ಟ : ಗೋವುಗಳಿಗೆ ಮೇವಿಲ್ಲದೇ ಗೋಪಾಲಕರ ಪರದಾಟ