ವರದಕ್ಷಿಣೆ ಕೇಸ್‌ಲ್ಲಿ 26 ವರ್ಷ ಜೈಲಿನಲ್ಲಿದ್ದ 93 ವರ್ಷದ ಅಜ್ಜಿ, ಬಿಡುಗಡೆಯಾದ ಒಂದೇ ವಾರಕ್ಕೆ ಸಾವು
ವರದಕ್ಷಿಣೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ 93 ವರ್ಷದ ನಾಗಮ್ಮ ಅವರಿಗೆ ಪರೋಲ್ ಸಿಕ್ಕಿ ವಾರದಲ್ಲೇ ಸಾವು. 26 ವರ್ಷ ಜೈಲುವಾಸ ಅನುಭವಿಸಿದ್ದ ನಾಗಮ್ಮ ಅವರ ಸ್ಥಿತಿ ನೋಡಿ ಮರುಗಿದ ಉಪಲೋಕಾಯುಕ್ತರು ಪರೋಲ್‌ಗೆ ಮಧ್ಯಪ್ರವೇಶ ಮಾಡಿದ್ದರು.
ಕಲಬುರಗಿ (ಡಿ.7): ವರದಕ್ಷಿಣೆ ಕೇಸ್‌ನಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ 93 ವರ್ಷದ ಅಜ್ಜಿ ನಾಗಮ್ಮ ಎನ್ನುವವರಿಗೆ ಕಳೆದ ವಾರವಷ್ಟೇ ಪರೋಲ್ ಸಿಕ್ಕಿತ್ತು. ಜೈಲಿನಲ್ಲಿ ಅಜ್ಜಿಯ ಸ್ಥಿತಿ ನೋಡಿ ಮರುಗಿದ್ದ ಉಪಲೋಕಾಯುಕ್ತ ಜಸ್ಟೀಸ್ ಬಿ.ವೀರಪ್ಪ ಈಕೆಯ ಬಿಡುಗಡೆಯ ಬಗ್ಗೆ ಮಧ್ಯಪ್ರವೇಶ ಮಾಡೋದಾಗಿ ಹೇಳಿದ್ದರು. ಇದರಿಂದಾಗಿ ಒಂದು ವಾರದ ಹಿಂದೆಯಷ್ಟೇ 90 ದಿನಗಳ ಪರೋಲ್ ಪಡೆದಿದ್ದ ಅಜ್ಜಿ ನಾಗಮ್ಮ ಶುಕ್ರವಾರ ಸಾವು ಕಂಡಿದ್ದಾರೆ.
ತನ್ನ ಸೊಸೆಯ ಸಾವಿನ ಪ್ರಕರಣದಲ್ಲಿ ಐಪಿಸಿ ಸೆಕ್ಷನ್ 498 ರ ಅಡಿಯಲ್ಲಿ ನಾಗಮ್ಮ 26 ವರ್ಷಗಳ ಕಾಲ ಜೈಲಿನಲ್ಲಿದ್ದರು. ಜೇವರ್ಗಿ ಪೊಲೀಸರು ದಾಖಲಿಸಿಕೊಂಡಿದ್ದ ಪ್ರಕರಣದಲ್ಲಿ ಆಕೆ ಕಿರುಕುಳದ ಆರೋಪ ಎದುರಿಸಿದ್ದರು.
ವರದಕ್ಷಿಣೆ ಕಿರುಕುಳ ಕೇಸ್‌ನಲ್ಲಿ ಜೀವಾವಧಿ ಶಿಕ್ಷೆ ಪಡೆದಿದ್ದ 93 ವರ್ಷದ ಅಜ್ಜಿ ನಾಗಮ್ಮ ಬಿಡುಗಡೆ!
ನವೆಂಬರ್ 16 ರಂದು ಕಲಬುರಗಿ ಜೈಲಿಗೆ ಹೋಗಿದ್ದ ವೇಳೆ ನಾಗಮ್ಮ ಅವರ ಪರಿಸ್ಥಿತಿಯನ್ನು ನೋಡಿದ್ದ ಉಪಲೋಕಾಯುಕ್ತರು, ಸುಪ್ರೀಂ ಕೋರ್ಟ್‌ಗೆ ಈಕೆಯ ಶಿಕ್ಷೆಯ ಕುರಿತು ಮರುಪರಿಶೀಲನಾ ಅರ್ಜಿ ಸಲ್ಲಿಸೋದಾಗಿ ತಿಳಿಸಿದ್ದರು. ಇದರ ನಡುವೆ ಇವರನ್ನು 90 ದಿನಗಳ ಪರೋಲ್‌ನಲ್ಲಿ ಬಿಡುಗಡೆ ಮಾಡಲಾಗಿತ್ತು.
ಸೊಸೆ ದಾಖಲಿಸಿದ್ದ ವರದಕ್ಷಿಣೆ ಕೇಸ್‌ನಲ್ಲಿ ಜೈಲಿನಲ್ಲಿರುವ 93 ವರ್ಷದ ಅಜ್ಜಿ, ಮರುಗಿದ ಉಪಲೋಕಾಯುಕ್ತ!