ಸೊಸೆ ದಾಖಲಿಸಿದ್ದ ವರದಕ್ಷಿಣೆ ಕೇಸ್‌ನಲ್ಲಿ ಜೈಲಿನಲ್ಲಿರುವ 93 ವರ್ಷದ ಅಜ್ಜಿ, ಮರುಗಿದ ಉಪಲೋಕಾಯುಕ್ತ!
ಕಲಬುರಗಿ ಜೈಲಿನಲ್ಲಿ 93 ವರ್ಷದ ವೃದ್ಧ ಮಹಿಳಾ ಕೈದಿಯನ್ನು ಭೇಟಿಯಾದ ಉಪ ಲೋಕಾಯುಕ್ತ ಬಿ. ವೀರಪ್ಪ ಅವರ ಪರಿಸ್ಥಿತಿಯನ್ನು ಕಂಡು ಮರುಗಿದರು. ವರದಕ್ಷಿಣೆ ಕಿರುಕುಳ ಪ್ರಕರಣದಲ್ಲಿ ಶಿಕ್ಷೆಗೊಳಗಾಗಿರುವ ನಾಗಮ್ಮ ಎಂಬುವವರ ಬಗ್ಗೆ ಸುಪ್ರೀಂ ಕೋರ್ಟ್ ಮೇಲ್ಮನವಿಗೆ ಸೂಚಿಸಿದರು.
ಬೆಂಗಳೂರು (ನ.18): ಕಲಬುರಗಿ ಪ್ರವಾಸದಲ್ಲಿರುವ ರಾಜ್ಯದ ಉಪ ಲೋಕಾಯುಕ್ತ ಬಿ.ವೀರಪ್ಪಶನಿವಾರ ಬೆಳ್ಳಂಬೆಳಗ್ಗೆಯೇ ಜೈಲಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಅಲ್ಲಿ ದಿನನಿತ್ಯದ ಚಟುವಟಿಕೆಗಳನ್ನು ಮಾಡಿಕೊಳ್ಳಲು ಪರದಾಡುತ್ತಿದ್ದ ವಯೋವೃದ್ಧೆ ಕೈದಿಯನ್ನು ಕಂಡು ಮರುಗಿದ ಪ್ರಸಂಗ ನಡೆಯಿತು. ವೃದ್ಧ ಮಹಿಳಾ ಕೈದಿಗೆ ಎದ್ದು ಓಡಾಡಲು ಆಗುತ್ತಿರಲಿಲ್ಲ, ಊಟೋಪಚಾರ, ಶೌಚ, ಸ್ನಾನಾದಿಗಳನ್ನೆಲ್ಲ ಬೇರೆಯವರೇ ಮಾಡಬೇಕಾಗಿತ್ತು. ಇದನ್ನು ಕಂಡವರೇ ಆ ವೃದ್ಧೆಯ ಮಾಹಿತಿ ಪಡೆದರು. ಜೇವರ್ಗಿಯ 93 ವರ್ಷದ ನಾಗಮ್ಮ ಎಂಬುವವರೇ ಆ ಕೈದಿ ಎಂಬುದು ಅರಿತು ಅವರ ಪೂರ್ವಾಪರ ತಿಳಿದರು. ಸೊಸೆ ಹಾಕಿರುವ ವರದಕ್ಷಣೆ ಕಿರುಕುಳ ಪ್ರಕರಣದಲ್ಲಿ ನಾಗಮ್ಮಗೆ 3 ವರ್ಷ ಸಜೆಯಾಗಿದೆ. ವರದಕ್ಷಿಣೆ ಪ್ರಕರಣದಲ್ಲಿ ಹೈಕೋರ್ಟ್ ಶಿಕ್ಷೆ ಎತ್ತು ಹಿಡಿದಿದ್ದರಿಂದ ಸುಪ್ರೀಂ ಕೋರ್ಟ್‌ಗೆ ಪುನರ್ ಪರಿಶೀಲನೆ ಅರ್ಜಿ ಸಲ್ಲಿಸಬೇಕಿದೆ. ಈ ಬಗ್ಗೆ ವೃದ್ಧೆ ನಾಗಮ್ಮಳ ಬಗೆಗಿನ ಅಗತ್ಯ ವೈದ್ಯಕೀಯ ದಾಖಲೆಗಳನ್ನೆಲ್ಲ ಸಿದ್ಧಪಡಿಸುವಂತೆ ಜೈಲು ಅಧೀಕ್ಷಕಿ ಡಾ. ಅನಿತಾಗೆ ಲೋಕಾಯುಕ್ತರು ಸೂಚಿಸಿದರು.
ವಯೋವೃದ್ಧೆಯ ಪ್ರಕರಣದ ಬಗ್ಗೆ ಸುಪ್ರೀಂಕೋರ್ಟ್ ರಿಜಿಸ್ಟ್ರಾರ್ ಶಶಿಧರ್ ಶೆಟ್ಟಿಗೆ ಕರೆ ಮಾಡಿ ಮಾತನಾಡಿ, ಮೇಲ್ಮನವಿ ಸಲ್ಲಿಕೆಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಿದರು. ಸರ್ವೋಚ್ಚ ನ್ಯಾಯಾಲಯಕ್ಕೆ ಅವರ ಆರೋಗ್ಯ ಹದಗೆಟ್ಟಿರುವ ವಿಚಾರ ಗಮನಕ್ಕೆ ತಂದು ಇಂದೇ ಮೇಲ್ಮನವಿ ಅರ್ಜಿ ಕಳುಹಿಸಿರಿ ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಶ್ರೀನಿವಾಸ ನವಲೆ ಅವರಿಗೆ ಸೂಚಿಸಿದರು.
ಜೈಲಿನ ಅಡುಗೆ ಮನೆಗೆ ಭೇಟ ನೀಡಿ ಅಲ್ಲಿ ಕೈದಿಗಳಿಗಾಗಿ ಸಿದ್ಧಪಡಿಸಿದ್ದ ಪಲಾವ್ ರುಚಿ ನೋಡಿದರು. ಅಲ್ಲೇ ಇದ್ದ ಕೈದಗಗಳ ಸೆಲ್‌ಗೂ ಭೇಟಿ ನೀಡಿದ ಅವರು ಪುರುಷ ಕೈದಿಗಳಂದಲೂ ಅಹವಾಲು ಆಲಿಸಿದರು.
ಅಹವಾಲು ನೀಡಲು ಮುಂದಾದ ಕೈದಿಗಳಲ್ಲಿ ಓರ್ವ ತನಗೆ 10 ವರ್ಷ ಶಿಕ್ಷೆಯಾಗಿದ್ದು ಒಮ್ಮೆಯೂ ಪೆರೋಲ್ ಮೇಲೆ ಬಿಡುಗಡೆ ಮಾಡಿಲ್ಲವೆಂದು ದೂರಿದನು. ಪೆರೋಲ್ ಮೇಲೆ ಹೋದವರು ಮರಳಿ ಬಂದೇ ಇಲ್ಲ, ಹೀಗಾಗಿ ಪೆರೋಲ್ ನಿಯಮಗಳಲ್ಲಿ ಬದಲಾವಣೆ ಮಾಡಲಾಗಿದೆ. ಈ ಬಗ್ಗೆ ಜೈಲು ಅಧೀಕ್ಷಕರು ಸೂಕ್ತ ತೀರ್ಮಾನ ಕೈಗೊಳ್ಳುತ್ತಾರೆಂದರು.
ಇನ್ಫೋಸಿಸ್‌ನಲ್ಲಿ ನಾರಾಯಣ ಮೂರ್ತಿಗಿಂತ ಈಗ ಇವರೇ ಶ್ರೀಮಂತರು, 38,500 ಕೋಟಿ ಮೌಲ್ಯ!
ಬಿಎ ಓದುತ್ತಿರೋ ಮಹಿಳಾ ಕೈದಿಗೆ ಓದನ್ನು ಮುಂದುವರಿಸಲು ಸಕಲ ನೆರವು ನೀಡುವಂತೆ ಸೂಚಿಸಿರದಲ್ಲದೆ ಜೈಲಲ್ಲಿ ಯಾರಿಗಾದರೂ ವಕೀಲರ ನೆರವು ಬೇಕಿದ್ದರೆ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದಿಂದ ದೊರಕಿಸಲಾಗುತ್ತದೆ ಎಂದರು. ಕಲಬುರಗಿ ಪೊಲೀಸ್ ಕಮೀಶ್ನರ್ ಡಾ. ಶರಣಪ್ಪ, ಎಸ್ಪಿ ಅಡ್ಡೂರು ಶ್ರೀನಿವಾಸುಲು, ಲೋಕಾಯುಕ್ತ ಎಸ್ಪಿ ಬಿಕೆ ಉಮೇಶ ಡಿಸಿಪಿ ಕನ್ನಿಕಾ ಸಿಕ್ರಿವಾಲ್ ಸೇರಿದಂತೆ ಹಲವರಿದ್ದರು.
ಬೆಂಗಳೂರಿನಲ್ಲಿ ಕೆಲಸ ಮಾಡ್ತಿದ್ದೀರಾ? ಹಾಗಿದ್ರೆ ಕನ್ನಡ ಕಲಿಯಿರಿ: Zoho CEO ಶ್ರೀಧರ್ ವೆಂಬು