
ಪ್ರೇಮ ಶಿಖರದಲ್ಲಿ ಆಕ್ರೋಶದ ಹಿಮಾಗ್ನಿ:ಕೆಲವೇ ಗಂಟೆಗಳಲ್ಲಿ ರಣಾಂಗಣವಾಯ್ತ ಕಣಿವೆ.. ಹೋರಾಟದ ಹಿಂದೆ ನೂರೆಂಟು ಒಳಸುಳಿ
ಜೆನ್ ಜೀ ಹೋರಾಟ.. ಸ್ಥಾಪಿತ ಸರ್ಕಾರಗಳನ್ನೇ ಉರುಳಿಸೋ ಬಲ ಹೊಂದಿರೋ ಹೋರಾಟ.. ಅಂಥದ್ದೊಂದು ಹೋರಾಟ ಈಗ ಲಡಾಖಿನಲ್ಲಿ ಶುರುವಾಗಿದೆ.. ಇದರ ಹಿಂದೊರೋ ಅಸಲಿ ಕತೆ ಏನು? ಅದೆಲ್ಲದರ ವಿವರ ಇಲ್ಲಿದೆ ನೋಡಿ..
ನಿನ್ನೆ ಮೊನ್ನೆ ತನಕ, ನಾವು ಪಕ್ಕದ ದೇಶ ನೇಪಾಳದಲ್ಲಿ ಏನಾಯ್ತು ಅಂತ ನೋಡ್ತಾ ಇದ್ವಿ.. ಯುವಕರು, ಅದ್ರಲ್ಲೂ ಜೆನ್-ಜೀ ಯುವಜನರು ರಸ್ತೆಗಿಳಿದ್ರು.. ಪ್ರತಿಭಟನೆ ಮಾಡಿದ್ರು.. ಭೂಕಂಪ ಸೃಷ್ಟಿಸಿದ್ರು.. ಅದರ ಪರಿಣಾಮ-ನೇಪಾಳದ ಸರ್ಕಾರವೇ ಉರುಳಿಬಿತ್ತು.. ಇನ್ನೂ ಆ ಘಟನೆಯೇ ಮರೆಯಾಗಿಲ್ಲ.. ಅಷ್ಟ್ರಲ್ಲೇ, ಭಾರತದಲ್ಲೊಂದು ಅಂಥದ್ದೇ ಹೋರಾಟ ಶುರುವಾದ ಹಾಗೆ ಕಾಣ್ತಾ ಇದೆ.. ಅದೂ ಕೂಡ ಆರಂಭವಾಗಿರೋದು, ಭಾರತದ ನೆತ್ತಿಯಲ್ಲಿ.. ಲಡಾಖ್ನಲ್ಲಿ.. ಅಸಲಿಗೆ ಆಗ್ತಾ ಇರೋದೇನು? ಹೋರಾಟದ ಕಾರಣವೇನು? ಅದರ ಪರಿಣಾಮವೇನು? ಇಲ್ಲಿದೆ ನೋಡಿ ಕಂಪ್ಲೀಟ್ ಡೀಟೇಲ್ಸ್..