ಪೋರಬಂದರ್ ಕರಾವಳಿಗೆ ಅಪ್ಪಳಿಸಿದ 'ತೌಕ್ಟೆ', ಗುಜರಾತ್ ಪ್ರಚಂಡ ಮಾರುತದ ಭೀತಿ..!
- ರಾಜ್ಯದಲ್ಲಿ ತಗ್ಗಿದ 'ತೌಕ್ಟೆ' ಅಬ್ಬರ, ಮಳೆ, ಗಾಳಿ ಇಳಿಮುಖ
- ಗುಜರಾತ್‌ಗೆ 210 ಕಿಮೀ ಪ್ರಚಂಡ ಮಾರುತ
- ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಜನಜೀವನ ಸಹಜ ಸ್ಥಿತಿಗೆ
ಬೆಂಗಳೂರು (ಮೇ. 18): ರಾಜ್ಯಕ್ಕೆ ಭೀತಿಯನ್ನುಂಟುಮಾಡಿದ್ದ ತೌಕ್ಟೆ ಚಂಡಮಾರುತ ಗುಜರಾತ್ ಕಡೆಗೆ ಚಲಿಸಿದೆ. ಕರಾವಳಿ ಭಾಗದಲ್ಲಿ ಬಿರುಗಾಳಿ ತಹಬದಿಗೆ ಬಂದಿದೆ. ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಜನಜೀವನ ಸಹಜ ಸ್ಥಿತಿಗೆ ಮರಳಿದೆ. ಆದರೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಮಾತ್ರ ಏಟಿನಿಂದ ಚೇತರಿಸಿಕೊಳ್ಳಲು ಸಾಕಷ್ಟುಸಮಯ ಬೇಕಾಗಲಿದೆ. ಇದೀಗ ತೌಕ್ಟೆ ಚಂಡಮಾರುತ ಗುಜರಾತ್‌ನ ಪೋರಬಂದರ್ ಹಾಗೂ ಮಹುವಾ ಕಡಲ ತೀರಗಳಿಗೆ ಅಪ್ಪಳಿಸಿದೆ. ಗಂಟೆಗೆ 185 ಕಿಮೀ ವೇಗದಲ್ಲಿ ಅಪ್ಪಳಿಸಲಿದೆ.