ಕೇರಳದಲ್ಲಿ ಹೆಚ್ಚಿದ ಮಳೆಯಬ್ಬರ: ಕ್ಷಣ ಮಾತ್ರದಲ್ಲಿ ನೀರು ಪಾಲಾಯ್ತು ಎರಡಂತಸ್ತಿನ ಮನೆ,ವಿಡಿಯೋ ವೈರಲ್

  • ಕೇರಳದಲ್ಲಿ ಹೆಚ್ಚಾದ ಮಳೆಯಬ್ಬರ
  • ತೌಕ್ಟೆ ಸೈಕ್ಲೋನ್‌ ಅಪಾಯಕಾರಿ ಅವತಾರ
  • ವಿಡಿಯೋ ಎಲ್ಲೆಡೆ ವೈರಲ್
Cyclone Tauktae House Collapses Property Destroyed in Kerala dpl

ಕಾಸರಗೋಡು(ಮೇ.15): ತೌಕ್ಟೇ ಚಂಡಮಾರುತ ಕೇರಳ ಕರಾವಳಿಯಲ್ಲಿ ಅಪ್ಪಳಿಸುತ್ತಿದ್ದಂತೆ, ದೊಡ್ಡ ಪ್ರಮಾಣದ ಆಸ್ತಿ ನಾಶ, ನಷ್ಟ ಸಂಭವಿಸಿದೆ. ಕೇರಳದ ಕಾಸರಗೋಡು ಜಿಲ್ಲೆಯ ಮುಸೋಡಿಯಲ್ಲಿ ಕಡಲತೀರದ ಉದ್ದಕ್ಕೂ ಇರುವ ಎರಡು ಅಂತಸ್ತಿನ ಮನೆ ಕುಸಿದು ನಾಶವಾಗಿದೆ.

ಇತರ ಐದು ಮನೆಗಳು ಕೂಡಾ ಕುಸಿದು ಹೋಗುವ ಭೀತಿಯಲ್ಲಿದೆ. ಸುತ್ತಮುತ್ತ ವಾಸಿಸುತ್ತಿದ್ದ ಜನರನ್ನು ಪ್ರದೇಶದಿಂದ ಸ್ಥಳಾಂತರಿಸಲಾಗಿದೆ. ಜಲಾನಯನ ಪ್ರದೇಶದಲ್ಲಿ ಹೆಚ್ಚಿನ ಒಳಹರಿವಿನ ನಂತರ ಮುನ್ನೆಚ್ಚರಿಕೆ ಕ್ರಮವಾಗಿ ಇಡುಕ್ಕಿ ಜಿಲ್ಲೆಯ ಕಲ್ಲಾರ್ಕುಟ್ಟಿ, ಮಲಂಕರ ಮತ್ತು ಭೂತಥಂಕೆಟ್ಟು ಮತ್ತು ಪಥನಮತ್ತಟ್ಟದ ಮಣಿಯಾರ್ ಅಣೆಕಟ್ಟು ನಾಲ್ಕು ಅಣೆಕಟ್ಟುಗಳ ಗೇಟ್ ತೆರೆಯಲಾಗಿದೆ.

ಕರ್ನಾಟಕ ಸೇರಿ 4 ರಾಜ್ಯಕ್ಕೆ ತೌಕ್ಟೆ ಸೈಕ್ಲೋನ್‌: 175 ಕಿ.ಮೀ. ವೇಗದಲ್ಲಿ ಗಾಳಿಯಬ್ಬರ!

ಕರಾವಳಿ ಭಾಗಗಳಾದ ಚೆರ್ತಾಲಾ, ಅಂಬಲಪ್ಪುಳ ಮತ್ತು ಕಾರ್ತಿಕಪ್ಪಲ್ಲಿ ತಾಲ್ಲೂಕುಗಳಲ್ಲಿ ಸಮುದ್ರ ಸವೆತ ತೀವ್ರವಾಗಿದೆ. ಕಡಕ್ಕರಪ್ಪಲ್ಲಿ ಗ್ರಾಮ ಪಂಚಾಯಿತಿಯ ಒಟ್ಟಾಮಶೇರಿಯಲ್ಲಿ ಕನಿಷ್ಠ 10 ಮನೆಗಳು ನಾಶವಾಗಿವೆ ಅಥವಾ ಹಾನಿಗೊಂಡಿವೆ. ಅವರ ಮನೆಗಳು ಪ್ರವಾಹಕ್ಕೆ ಸಿಲುಕಿದ ನಂತರ ಹಲವಾರು ಕುಟುಂಬಗಳು ಸಂಬಂಧಿಕರ ಮನೆಗಳಿಗೆ ತೆರಳಿದರು ಎಂದು ದಿ ಹಿಂದೂ ವರದಿ ಮಾಡಿದೆ.

Latest Videos
Follow Us:
Download App:
  • android
  • ios