
1929ರಲ್ಲೇ ಬಾಂಬ್ ಹಾಕಿದ್ದ ಭಗತ್ ಸಿಂಗ್: 2001ರಲ್ಲಿ ಸಂಸತ್ ಮೇಲೆ ದಾಳಿ ನಡೆದಾಗ ಏನಾಗಿತ್ತು..?
ಸ್ವಾತಂತ್ರ್ಯ ಹೋರಾಟದ ದಿನದಲ್ಲೂ ಸಂಸತ್ ಮೇಲೆ ಬಾಂಬ್ ದಾಳಿ
ವೀಕ್ಷಕರ ಗ್ಯಾಲರಿಯಿಂದಲೇ ದುರ್ಬಲ ಬಾಂಬ್ ಎಸೆದು ಘೋಷಣೆ
13 ಡಿಸೆಂಬರ್ 2001ರಲ್ಲಿ 5 ಉಗ್ರರಿಂದ ಸಂಸತ್ ಮೇಲೆ ದಾಳಿ
ದೇವಶನ್ನೆ ಬೆಚ್ಚಿ ಬೀಳಿಸಿದೆ ನೂತನ ಸಂಸತ್ ಮೇಲಿನ ದಾಳಿ. ಸಂಸತ್‌ನಲ್ಲಿ(Parliament) ಭದ್ರತಾ ಪ್ರಮಾದ ಇದೇ ಮೊದಲು ಆಗಿಲ್ಲ. ಬ್ರಿಟಿಷರ ಆಡಳಿತ ಕಾಲದಲ್ಲೂ ಸಂಸತ್ ಮೇಲೆ ದಾಳಿ ನಡೆದಿದೆ. 1929ರಲ್ಲೇ ಸಂಸತ್ ಒಳಗೆ ಭಗತ್ ಸಿಂಗ್(Bhagat Singh) ಬಾಂಬ್ ಎಸೆದಿದ್ದರು. ಈ ಮೂಲಕ ಬ್ರಿಟಿಷರನ್ನು ಕ್ರಾಂತಿಕಾರಿ ಭಗತ್ ಸಿಂಗ್ ನಡುಗಿಸಿದ್ದರು. 20013ರಲ್ಲಿ ಭಾರೀ ಭದ್ರತೆ ಮಧ್ಯೆ ಸಂಸತ್ ಮೇಲೆ ಉಗ್ರರ ದಾಳಿ ಸಹ ನಡೆದಿತ್ತು. ಉಗ್ರರ ಗುಂಡಿನ ದಾಳಿಗೆ 9 ಭದ್ರತಾ ಸಿಬ್ಬಂದಿಗಳು ಬಲಿಯಾಗಿದ್ದರು. 5 ಬಂಧೂಕುದಾರಿ ಉಗ್ರರನ್ನ ಭದ್ರತಾಪಡೆ ಹೊಡೆದುರುಳಿಸಿದ್ದರು. ಇದಾಗಿ 22 ವರ್ಷಗಳ ಬಳಿಕ ಸಂಸತ್‌ನಲ್ಲಿ ಸ್ಮೋಕ್ ಬಾಂಬ್ ಸ್ಫೋಟ ಮಾಡಲಾಗಿದೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಇದನ್ನೂ ವೀಕ್ಷಿಸಿ: ಪಾರ್ಲಿಮೆಂಟ್ ಭದ್ರತಾ ಲೋಪಕ್ಕೆ ರಾಜ್ಯದ ನಂಟು: ಪ್ರತಾಪ್ ಸಿಂಹ ಕಚೇರಿಯಿಂದ ಮನೋರಂಜನ್‌ಗೆ ಸಿಕ್ಕಿತಾ ಪಾಸ್ ?