
ಪಾರ್ಲಿಮೆಂಟ್ ಭದ್ರತಾ ಲೋಪಕ್ಕೆ ರಾಜ್ಯದ ನಂಟು: ಪ್ರತಾಪ್ ಸಿಂಹ ಕಚೇರಿಯಿಂದ ಮನೋರಂಜನ್‌ಗೆ ಸಿಕ್ಕಿತಾ ಪಾಸ್ ?
ರಾಜಕೀಯ ಸಮರಕ್ಕೆ ಕಾರಣವಾದ ಸಂಸತ್ ಪ್ರಕರಣ
ಸಂಸದ ಪ್ರತಾಪ್ ಸಿಂಹ ವಿರುದ್ಧ ಮುಗಿಬಿದ್ದ ಕಾಂಗ್ರೆಸ್
ಪಾಸ್ ಕೊಟ್ಟಿದ್ದೇಕೆ ಎಂದು ಪ್ರಶ್ನಿಸುತ್ತಿರುವ ಕಾಂಗ್ರೆಸ್
ಪಾರ್ಲಿಮೆಂಟ್ ಭದ್ರತಾ ಲೋಪಕ್ಕೆ ರಾಜ್ಯದ ನಂಟು ಇದೆ ಎಂದು ಹೇಳಲಾಗುತ್ತಿದೆ. ಸಂಸತ್‌ಗೆ(Parliment) ನುಗ್ಗಿದ A2 ಆರೋಪಿ ಮೈಸೂರು ಮೂಲದವನು ಎನ್ನಲಾಗ್ತಿದೆ. ಪ್ರತಾಪ್ ಸಿಂಹ(Pratap Simha) ಕಚೇರಿಯಿಂದ ಮನೋರಂಜನ್‌ಗೆ(Manoranjan) ಪಾಸ್ ಸಿಕ್ಕಿದೆ ಎಂದು ಆರೋಪಿಸಲಾಗಿದೆ. ಮನೋರಂಜನ್‌ಗೆ ಪ್ರತಾಪ್ ಸಿಂಹ ಪಿಎ ಪರಿಚಯವಿದೆ ಎಂದು ಹೇಳಲಾಗ್ತಿದೆ. ಈ ಮೂಲಕ ಸಾಗರ್ ಶರ್ಮಾಗೂ ಪಾಸ್ ಸಿಕ್ಕಿದೆ. ಪ್ರತಾಪ್ ಸಿಂಹ ಪಾಸ್ ಸಿಕ್ಕಿದ್ದೇ ರಾಜಕೀಯ ವಾಕ್ಸಮರಕ್ಕೆ ನಾಂದಿ ಹಾಡಿದೆ. ಪಾಸ್(Pass) ಕೊಟ್ಟ ಪ್ರತಾಪ್ ಸಿಂಹ ವಿರುದ್ಧ ಕಾಂಗ್ರೆಸ್ ಮುಗಿಬಿದ್ದಿದೆ. ಪಾಸ್ ಕೊಟ್ಟಿದ್ದೇಕೆ ಎಂದು ಕಾಂಗ್ರೆಸ್ ಪ್ರಶ್ನೆ ಮಾಡುತ್ತಿದೆ. ಸಂಪೂರ್ಣ ಭದ್ರತಾ ವ್ಯವಸ್ಥೆಯ ಲೋಪ. ಪಾಸ್ ಕೊಟ್ಟ ಪ್ರತಾಪ ಸಿಂಹರನ್ನು ವಿಚಾರಣೆ ಮಾಡಿ. ನಿಷ್ಪಕ್ಷಪಾತ ತನಿಖೆ ನಡೆಸಿ ಎಂದು ಕಾಂಗ್ರೆಸ್ ಆಗ್ರಹಿಸಿದೆ.
Add Asianetnews Kannada as a Preferred Source

ಇದನ್ನೂ ವೀಕ್ಷಿಸಿ: ಸದನದೊಳಗೆ ದುಷ್ಕರ್ಮಿ ಸ್ಮೋಕ್ ಬಾಂಬ್ ತಂದಿದ್ದೇಗೆ..? 2001ರ ಬಳಿಕ ಮತ್ತೆ ಪಾರ್ಲಿಮೆಂಟ್‌ನಲ್ಲಿ ಭದ್ರತಾ ಲೋಪ..!