Asianet Suvarna News Asianet Suvarna News

ಸೀರೆಯುಟ್ಟು ಕುದುರೆ ಸವಾರಿ ಮಾಡೋ ಮೋನಾಲಿಸಾ: ಬುಲೆಟ್, ಲಾರಿಯನ್ನೂ ಓಡಿಸುವ ಗಟ್ಟಿಗಿತ್ತಿ

ಸೀರೆಯುಟ್ಟ ನಾರಿಯ ಕುದುರೆ ಸವಾರಿ
ಯೂಟ್ಯೂಬ್‌ ಸ್ಟಾರ್ ಆದ ಸಾಮಾನ್ಯ ಗೃಹಿಣಿ
ಬುಲೆಟ್, ಟ್ರಾಕ್ಟರ್‌ಗಳನ್ನು ಓಡಿಸುವ ಮೊನಾಲಿಸಾ

ಒಡಿಶಾದ ಜಹಾಲ್ ಗ್ರಾಮದ ಮಹಿಳೆಯೊಬ್ಬರು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಸುದ್ದಿ ಮಾಡುತ್ತಿದ್ದಾರೆ. ಇವರು ಸೀರೆಯುಟ್ಟು ಮಹಾರಾಣಿಯಂತೆ ಕುದುರೆ ಸವಾರಿ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಒಡಿಶಾದ ಜಾಜ್‌ಪುರ ಜಿಲ್ಲೆಯ ಜಹಾಲ್‌ ಗ್ರಾಮದ ಈ ಮಹಿಳೆಯ ಹೆಸರು ಮೊನಾಲಿಸಾ ಭದ್ರಾ. ಇವರು ಕುದುರೆ ಕೇವಲ ಕುದುರೆ ಮಾತ್ರವಲ್ಲದೇ ಮತ್ತು ಬುಲೆಟ್ ಹಾಗೂ ಟ್ರಕ್‌ನ್ನು ಓಡಿಸುತ್ತಾರೆ. ಸಾಮಾನ್ಯ ಗೃಹಿಣಿಯಾದ ಮೊನಾಲಿಸಾ ಸದ್ಯ ಸಾಕಷ್ಟು ಫಾಲೋವರ್‌ಗಳನ್ನು ಹೊಂದಿರುವ ಯುಟ್ಯೂಬ್ ಸ್ಟಾರ್ ಆಗಿದ್ದಾರೆ.

Video Top Stories