ಚುನಾವಣಾ ಅಖಾಡದಲ್ಲಿ ರತ್ನ ಭಂಡಾರ ಕೀಲಿ ಕೈ ವಿವಾದ: ಓಡಿಶಾದಲ್ಲಿ ಮೋದಿ ಭಾಷಣ..ತಮಿಳುನಾಡಿನಲ್ಲೂ ಸಂಚಲನ!
ಪುರಿ ಶ್ರೀರತ್ನ ಭಂಡಾರದ ಕೀಲಿ ತಮಿಳುನಾಡಿಗೆ ಹೋಗಿದೆ- ಮೋದಿ
ಓಡಿಶಾಗೆ ತಮಿಳಿಗನ್ನ ಪಟ್ನಾಯಕ್ ರಾಜನಾಗಿಸಿದ್ದಾರೆ-ಅಮಿತ್ ಶಾ
ವಿ.ಕೆ ಪಾಂಡಿಯನ್, ತಮಿಳುನಾಡು ಮೂಲದ ಐಎಎಸ್ ಅಧಿಕಾರಿ
ಪಾಂಡಿಯನ್ನನ್ನೇ ಉತ್ತರಾಧಿಕಾರಿ ಘೋಷಿಸಿದ ಸಿಎಂ ಪಟ್ನಾಯಕ್
ಓಡಿಶಾದಲ್ಲಿ( Odisha)ಲೋಕಸಭಾ, ವಿಧಾನಸಭೆ ಚುನಾವಣೆಗೆ ಬಿಜೆಪಿ(BJP)- ಬಿಜೆಡಿ(BJD) ಮೈತ್ರಿ ಮಾಡಿಕೊಳ್ಳಲು ಮುಂದಾಗಿದ್ದವು. ಆದ್ರೆ ಕೊನೆ ಕ್ಷಣದಲ್ಲಿ ಸೀಟು ಹಂಚಿಕೆ ಗೊಂದಲದಿಂದಾಗಿ ಬಿಜೆಪಿ- ಬಿಜೆಡಿ ಪ್ರತ್ಯೇಕವಾಗಿ ಸ್ಪರ್ಧಿಸಿವೆ. ಅಧಿಕಾರ ಉಳಿಸಿಕೊಳ್ಳಲೇಬೇಕೆಂದು ನವೀನ್ ಪಟ್ನಾಯಕ್ ಹೋರಾಟ ನಡೆಸಿದರೆ, ಈ ಬಾರಿ ಅಧಿಕಾರ ಹಿಡಿಯಲೇಬೇಕೆಂದು ಬಿಜೆಪಿ ಸಮರ ಸಾರಿದೆ. ಹೀಗಾಗಿ ಬಿಜೆಪಿ ಈ ಬಾರಿ ಟಾರ್ಗೆಟ್. 2023ರಲ್ಲಿ ಘೋಷಣೆ ಆದ ನವೀನ್ ಉತ್ತರಾಧಿಕಾರಿ. ತಮಿಳುನಾಡು(Tamil Nadu) ಮೂಲಕ ವಿ.ಕೆ ಪಾಂಡಿಯನ್. ಇದನ್ನೇ ಬಂಡವಾಳ ಮಾಡಿಕೊಂಡ ಮೋದಿ, ಪುರಿ ಜಗನ್ನಾಥ ರತ್ನ(Puri Jagannath) ಭಂಡಾರದ ಕೀಲಿ ಕೈ(Ratna Bhandar) ನಾಪತ್ತೆ ಎಂದು ಸರ್ಕಾರ ವರದಿ ಸಲ್ಲಿಸಿದೆ. ಅದು ತಮಿಳುನಾಡಿಗೆ ಹೋಗಿರಬಹುದು ಎಂದು ವಾಗ್ದಾಳಿ ನಡೆಸಿದ್ರು. ಅತ್ತ ವಿಕೆ ಪಾಂಡಿಯನ್, ನಿಮ್ಮದೇ ಸರ್ಕಾರ ತನಿಖೆ ನಡೆಸಿ ಎಂದು ಸವಾಲು ಹಾಕಿದ್ದಾರೆ. ಇನ್ನೂ ಇಂಡಿಯಾ ಮೈತ್ರಿಕೂಟ ಗೆದ್ದರೆ, ಐದು ವರ್ಷಕ್ಕೆ ಐದು ಪಿಎಂ ಆಗ್ತಾರೆ ಎಂದು ವಾಗ್ದಾಳಿ ನಡೆಸಿದ್ರು. ಇದಕ್ಕೇ ಕೌಂಟರ್ ಕೊಟ್ಟ ಖರ್ಗೆ, ಯುಪಿಎ 10 ವರ್ಷ ಹಿಂದೆ ಆಡಳಿತ ನಡೆಸಿದ್ದು ಒಬ್ಬರೇ ಪ್ರಧಾನಿ(Narendra modi ಆಗಿದ್ದರು ಅಂದರು.
ಇದನ್ನೂ ವೀಕ್ಷಿಸಿ: ಬಿಬಿಎಂಪಿ ಬಸ್ ನಿಲ್ದಾಣ ತೆರವು..ಖಾಸಗಿ ಹೋಟೆಲ್ ನಿರ್ಮಾಣ: ಏನ್ ಮಾಡ್ತಿದೆ ಬಿಬಿಎಂಪಿ..?