Asianet Suvarna News Asianet Suvarna News

ದೇಶದ ಪ್ರಧಾನಿ ಹೆಸರಲ್ಲಿ ಕಾರಿಲ್ಲ.. ಸ್ವಂತ ಸೂರಿಲ್ಲ, 24 ವರ್ಷ ಅಧಿಕಾರದಲ್ಲಿದ್ರೂ 3 ಕೋಟಿ ಆಸ್ತಿ!

ಲೋಕಸಭೆ ಚುನಾವಣೆ ಹೊತ್ತಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಸಂಪತ್ತಿನ ಗುಟ್ಟು ಬಯಲಾಗಿದೆ. 17 ವರ್ಷಗಳಲ್ಲಿ ಪ್ರಧಾನಿ ಮೋದಿ ಆಸ್ತಿ 25 ಪಟ್ಟು ಹೆಚ್ಚಾಗಿದೆ ಅನ್ನೋದು ಚುನಾವಣೆಯ ಅಫಡವಿಟ್‌ನಲ್ಲಿ ಗೊತ್ತಾಗಿದೆ.
 

ಬೆಂಗಳೂರು (ಮೇ.18): ಗುಜರಾತ್‌ನಂಥ ರಾಜ್ಯಕ್ಕೆ 12 ವರ್ಷ ಸಿಎಂ, 10 ವರ್ಷ ಪ್ರಧಾನ ಮಂತ್ರಿ ಹಾಗಿದ್ದರೂ ಪ್ರಧಾನಿ ನರೇಂದ್ರ ಮೋದಿ ಅವರ ಆಸ್ತಿ ಬರೀ 3 ಕೋಟಿ ಎನ್ನುವುದು ಎಲ್ಲರ ಅಚ್ಚರಿಗೆ ಕಾರಣವಾಗಿದೆ. ದೇಶದ ಪ್ರಧಾನಿ ಹೆಸರಲ್ಲಿ ಕಾರಿಲ್ಲ.. ಸ್ವಂತ  ಸೂರಿಲ್ಲ, 24 ವರ್ಷ ಅಧಿಕಾರದಲ್ಲಿದ್ರೂ ಕೇವಲ 3 ಕೋಟಿಯ ಆಸ್ತಿ ಎಲ್ಲರಿಗೂ ಹುಬ್ಬೇರುವಂತೆ ಮಾಡಿದೆ.

ಜಗತ್ತಿನ ಶ್ರೀಮಂತ ನಾಯಕರಲ್ಲಿ ಅತಿ ಹೆ್ಚ್ಚು ಶ್ರೀಮಂತ ಅನ್ನಿಸಿಕೊಂಡಿರೊದು, ರಷ್ಯಾದ ಪುಟಿನ್.. ಹಾಗಾದ್ರೆ.  ಆ ಪಟ್ಟಿಲಿ ನಮ್ಮ ಪ್ರಧಾನಿಗಳು ಎಷ್ಟನೇ ಸ್ಥಾನದಲ್ಲಿದಾರೆ..? ಸಿಎಮ್ ಆದಾಗಿನಿಂದ ಮೂರನೇ ಸಲ ಪಿಎಮ್ ಆಗೋಕೆ ಹೊರಡೋ ತನಕ, ಮೋದಿ ಆಸ್ತಿ ಎಷ್ಟೆಷ್ಟು ಹೆಚ್ಚಾಯ್ತು?

ಭಾರತದ ಪ್ರಧಾನಿಗೆ ಕಾರಿಲ್ಲ, ಮನೆ ಇಲ್ಲ, 3 ಕೋಟಿ ಆಸ್ತಿ!

ನರೇಂದ್ರ ಮೋದಿ ರಾಷ್ಟ್ರ ರಾಜಕಾರಣದ ರಣಕಣಕ್ಕೆ ಕಾಲಿಟ್ಟಿದ್ದೇ, ತಾವೊಬ್ಬ ಚಾಯ್ವಾಲಾ, ಸಾಮಾನ್ಯ ಭಾರತೀಯ ಅನ್ನೋ ಇಮೇಜ್ ಇಟ್ಕೊಂಡು.. ಇವತ್ತಿಗೂ ಕೂಡ ಮೋದಿ ಅವರ, ಆ ಇಮೇಜ್ ಹಾಗೇ ಉಳಿದಿದೆ ಅಂದ್ರೆ, ಅದಕ್ಕೆ ಮೋದಿ ಅವರ ಈ ಸಂಪತ್ತೂ ಸಹ ಕಾರಣವಾಗಿದೆ..