Asianet Suvarna News Asianet Suvarna News

ಭಾರತದ ಪ್ರಧಾನಿಗೆ ಕಾರಿಲ್ಲ, ಮನೆ ಇಲ್ಲ, 3 ಕೋಟಿ ಆಸ್ತಿ!

2014 ರಲ್ಲಿ ವಾರಣಾಸಿಯಿಂದ ಎನ್‌ಡಿಎ ಪ್ರಧಾನಿ ಅಭ್ಯರ್ಥಿಯಾಗಿ ಮೊದಲ ಬಾರಿಗೆ ಸ್ಪರ್ಧಿಸಿದ್ದ ಪಿಎಂ ಮೋದಿ, ಇದೇ ಕ್ಷೇತ್ರದಿಂದ ಸತತ ಮೂರನೇ ಬಾರಿಗೆ ಸ್ಪರ್ಧೆ ಮಾಡುತ್ತಿದ್ದಾರೆ.  ವಾರಣಾಸಿಯಲ್ಲಿ ಜೂನ್ 1 ರಂದು ಏಳನೇ ಮತ್ತು ಅಂತಿಮ ಹಂತದ ಚುನಾವಣೆಯ ಮತದಾನ ನಡೆಯಲಿದೆ.

Election affidavit of PM Modi doesnt own house car has Rs 52000 in cash san
Author
First Published May 14, 2024, 7:50 PM IST

ನವದೆಹಲಿ (ಮೇ. 14): ವಾರಣಾಸಿ ಲೋಕಸಭಾ ಕ್ಷೇತ್ರದಿಂದ ಲೋಕಸಭೆ ಚುನಾವಣೆಗೆ ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ನಾಮಪತ್ರ ಸಲ್ಲಿಸಿದ್ದಾರೆ. ಪ್ರಧಾನಿ ಮೋದಿಯವರ ಅಫಿಡವಿಟ್ ಪ್ರಕಾರ, ಅವರು 3.02 ಕೋಟಿ ರೂಪಾಯಿ ಮೌಲ್ಯದ ಚರಾಸ್ತಿ ಹೊಂದಿದ್ದಾರೆ, 52,920 ರೂಪಾಯಿ ನಗದ ಹೊಂದಿದ್ದು, ಅವರ ಹೆಸರಿನಲ್ಲಿ ಯಾವುದೇ ಜಮೀನು, ಮನೆ ಅಥವಾ ಕಾರು ಹೊಂದಿಲ್ಲ. 2018-19 ರ ಆರ್ಥಿಕ ವರ್ಷದಲ್ಲಿ 11 ಲಕ್ಷ ರೂಪಾಯಿಗಳಿಂದ 2022-23 ರಲ್ಲಿ 23.5 ಲಕ್ಷ ರೂಪಾಯಿಗಳಿಗೆ ಪಿಎಂ ಮೋದಿಯವರ ತೆರಿಗೆಯ ಆದಾಯವು ದ್ವಿಗುಣಗೊಂಡಿದೆ ಎಂದು ಅಫಿಡವಿಟ್ ತೋರಿಸಿದೆ. ಪ್ರಧಾನಿ ಮೋದಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಎರಡು ಖಾತೆಗಳನ್ನು ಹೊಂದಿದ್ದಾರೆ. ಎಸ್‌ಬಿಐನ ಗಾಂಧಿನಗರ ಶಾಖೆಯಲ್ಲಿ 73,304 ರೂ.ಗಳನ್ನು ಠೇವಣಿ ಇರಿಸಿದ್ದರೆ, ಎಸ್‌ಬಿಐನ ವಾರಣಾಸಿ ಶಾಖೆಯಲ್ಲಿ ಕೇವಲ 7,000 ರೂಪಾಯಿ ಹೊಂದಿದ್ದಾರೆ.

ಪ್ರಧಾನ ಮಂತ್ರಿ ಎಸ್‌ಬಿಐನಲ್ಲಿ 2,85,60,338 ರೂ ಮೌಲ್ಯದ ಸ್ಥಿರ ಠೇವಣಿಯನ್ನೂ ಹೊಂದಿದ್ದಾರೆ. ಪ್ರಧಾನಿಯವರ ಬಳಿ 2,67,750 ರೂಪಾಯಿ ಮೌಲ್ಯದ ನಾಲ್ಕು ಚಿನ್ನದ ಉಂಗುರಗಳಿವೆ. 2014 ರಲ್ಲಿ ವಾರಣಾಸಿಯಿಂದ ಎನ್‌ಡಿಎ ಪ್ರಧಾನಿ ಅಭ್ಯರ್ಥಿಯಾಗಿ ಮೊದಲ ಬಾರಿಗೆ ಸ್ಪರ್ಧಿಸಿದ್ದ ಪಿಎಂ ಮೋದಿ, ಈ ಕ್ಷೇತ್ರದಿಂದ ಸತತ ಮೂರನೇ ಬಾರಿಗೆ ಸ್ಪರ್ಧಿಸಲು ಪ್ರಯತ್ನಿಸುತ್ತಿದ್ದಾರೆ, ಅಲ್ಲಿ ಜೂನ್ 1 ರಂದು ಏಳನೇ ಮತ್ತು ಅಂತಿಮ ಹಂತದ ಚುನಾವಣೆಯ ಮತದಾನ ನಡೆಯಲಿದೆ.

ಷೇರು ಮಾರುಕಟ್ಟೆಯಲ್ಲಿ ಕೋಟಿ ಕೋಟಿ ಹಣ ಹಾಕಿರುವ ರಾಹುಲ್‌, ಐದು ವರ್ಷದಲ್ಲಿ ಆಸ್ತಿ 5 ಕೋಟಿ ಏರಿಕೆ!

ಮಂಗಳವಾರ ವಾರಣಾಸಿಯ ಜಿಲ್ಲಾಧಿಕಾರಿ ಕಚೇರಿಗೆ ನಾಮಪತ್ರ ಸಲ್ಲಿಸಲು ತೆರಳಿದ ಪ್ರಧಾನಿ ಮೋದಿ ಅವರ ಜೊತೆಯಲ್ಲಿ ಬಿಜೆಪಿಯ ಹಿರಿಯ ನಾಯಕರೂ ಇದ್ದರು. ಕೇಂದ್ರ ಗೃಹ ಸಚಿವ ಅಮಿತ್ ಶಾ, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಬಿಜೆಪಿ ಮುಖ್ಯಸ್ಥ ಜೆಪಿ ನಡ್ಡಾ ಸೇರಿದಂತೆ ಹಲವು ನಾಯಕರು ಪ್ರಧಾನಿ ಜೊತೆಗಿದ್ದರು. ಪ್ರಧಾನಿ ಮೋದಿ ಅವರ ನಾಲ್ವರು ಪ್ರಪೋಸರ್‌ಗಳಾಗಿ ಪಂಡಿತ್ ಗಣೇಶ್ವರ ಶಾಸ್ತ್ರಿ, ಲಾಲ್‌ಚಂದ್ ಕುಶ್ವಾಹ, ಬೈಜನಾಥ್ ಪಟೇಲ್ ಮತ್ತು ಸಂಜಯ್ ಸೋಂಕರ್ ಕೂಡ ಇದ್ದರು.

Stock Portfolio Rahul Gandhi: ಪಿಡಿಲೈಟ್‌ನಲ್ಲಿ ಗರಿಷ್ಠ ಹೂಡಿಕೆ, ಪಿಎಸ್‌ಯುಗೆ ಹಣ ಹಾಕದ ಕಾಂಗ್ರೆಸ್‌ ನಾಯಕ!

ಚುನಾವಣಾ ಆಯೋಗದ ವೆಬ್‌ಸೈಟ್‌ನಲ್ಲಿ ಸಂಜೆ 5 ಗಂಟೆಗೆ ಮೋದಿ ಅವರ ಅಫಡವಿಟ್‌ ಅಪ್‌ಲೋಡ್‌ ಆದ ಬೆನ್ನಲ್ಲಿಯೇ 2 ಸಾವಿರ ಮಂದಿ ಇದನ್ನು ಡೌನ್‌ಲೋಡ್‌ ಮಾಡಿದ್ದಾರೆ.

Election affidavit of PM Modi doesnt own house car has Rs 52000 in cash san

Election affidavit of PM Modi doesnt own house car has Rs 52000 in cash san
 

Latest Videos
Follow Us:
Download App:
  • android
  • ios