ಹೇಗಿದೆ ಗೊತ್ತಾ ಭಾರತ-ಕೆನಡಾ ಸಂಬಂಧ ? ಖಲಿಸ್ತಾನಿಗಳ ಟಾರ್ಗೆಟ್ ಹಿಂದಿರೋ ಅಸಲಿ ಕತೆ ಏನು ?
ಕೆನಡಾ-ಭಾರತ ಮಧ್ಯೆ ಬೆಂಕಿ ಹಚ್ಚಲು ಪಾಕ್ ಪ್ಲಾನ್!
ಒಂದು ಕೊಲೆಯ ಹಿಂದೆ ನೂರೆಂಟು ಊಹಾಪೋಹ!
ದ್ವಿಪಕ್ಷೀಯ ಸಂಬಂಧ ಹಾಳುಮಾಡಲು ಐಎಸ್‌ಐ ಕೃತ್ಯ
ಪಾಕಿಸ್ತಾನ ಅಂದ್ರೆ, ಬರೀ ಪಡೋಸಿ ದೇಶ ಅಲ್ಲ. ಅದು ಭಾರತದ ಬದ್ಧ ದ್ವೇಷಿ..ಇನ್ನೊಂದು ಕಡೆ, ಈ ಹರ್ದೀಪ್ ನಿಜ್ಜರ್ ಹುನ್ನಾರ ನಡೆಸ್ತಾ ಇದ್ದದ್ದು, ತನ್ನ ಬಲಪ್ರಯೋಗದ ಮೂಲಕ ಹಾಳುಗೆಡವೋಕೆ ನೋಡ್ತಾ ಇದ್ದದ್ದು ಭಾರತವನ್ನ.ನಿಜ್ಜರ್ ಕೂಡ ಭಾರತ(India) ದ್ವೇಷಿ, ಶತ್ರುವಿನ ಶತ್ರು ಮಿತ್ರ ಅಂತ ಕರೀತಾರೆ. ಆದ್ರೆ ಈ ಕಥೇಲಿ, ಭಾರತ ದ್ವೇಷಿಯ ಕತೆನಾ ಪಾಕಿಸ್ತಾನವೇ(Pakistan) ಮುಗಿಸಿದೆ ಅಂತ ಹೇಳಲಾಗ್ತಾ ಇದೆ. ಇದು ನಿಜಕ್ಕೂ ಅಚ್ಚರಿಗೇ ಮಹದಚ್ಚರಿ. ಭಾರತ ಮತ್ತು ಕೆನಡಾ(Canada) ಮಧ್ಯೆ ಬಿರುಕು ಮೂಡಿಸಬೇಕು ಅಂತಲೇ ಪಾಕಿಸ್ತಾನ ಹೊಂಚು ಹಾಕಿ ಈ ಕೊಲೆ ಮಾಡಿದೆ ಅಂತ ವರದಿ ಹೇಳ್ತಾ ಇದೆ. ಉಭಯ ದೇಶಗಳ ದ್ವಿಪಕ್ಷೀಯ ಸಂಬಂಧ ಹಾಳು ಮಾಡಿದಷ್ಟೂ, ತನಗೇ ಅಧಿಕ ಮೈಲೇಜ್ ಅಂದ್ಕೊಂಡು ಐಎಸ್‌ಐ (ISI) ಈ ಕೃತ್ಯ ಎಸಗಿರಬಹುದು ಅನ್ನೋ ಸಂಶಯ ತನಿಖೆಯಲ್ಲಿ ವ್ಯಕ್ತವಾಗಿದೆ. ಪಾಕಿಸ್ತಾನದಿಂದ ಕೆನಡಾಗೆ ಸಾಕಷ್ಟು ಮಂದಿ ಗ್ಯಾಂಗ್‌ಸ್ಟರ್‌ಗಳು ವಲಸೆ ಹೋಗಿದ್ದರು. ಅವರಿಗೆ ಬೆಂಬಲ ಕೊಡ್ಬೇಕು ಅಂತ ನಿಜ್ಜರ್‌ಗೆ ಪಾಕ್ ಒತ್ತಡ ಹೇರಿತ್ತು. ಪಾಕ್ ಎಷ್ಟೇ ಒತ್ತಡ ಹಾಕಿದ್ರೂ ನಿಜ್ಜರ್ ಒಲವು ಮಾತ್ರ ಖಲಿಸ್ತಾನಿ ನಾಯಕರ ಕಡೆಗೇ ಇತ್ತು.ಅ ವನು ಅಪ್ಪಿ ತಪ್ಪಿ ಕೂಡ, ಪಾಕಿಸ್ತಾನದ ಕಡುಪಾಪಿಗಳ ಕಡೆ ಗಮನ ಕೊಡ್ಲಿಲ್ಲ. ತನ್ನ ಮಾತು ಕೇಳಲಿಲ್ಲ ಅನ್ನೋ ಕೋಪಕ್ಕೆ, ಇವನಿಂದ ತನಗೇನೂ ಪ್ರಯೋಜನವಿಲ್ಲ ಅನ್ನೋ ಕಾರಣಕ್ಕೆ ಐಎಸ್ಐ, ನಿಜ್ಜರ್ ಕೊಲೆ ಮಾಡಿದೆ ಅಂತ ವರದಿಯೊಂದು ಹೇಳ್ತಾ ಇದೆ.
ಇದನ್ನೂ ವೀಕ್ಷಿಸಿ: ಒಂದು ದೇಶ ಒಂದು ಚುನಾವಣೆಗೆ ಬಿರುಸಿನ ಚಟುವಟಿಕೆ: ದೇಶಕ್ಕೊಂದೇ ಚುನಾವಣೆ ಕಾನೂನು ಜಾರಿ ಹೇಗೆ..?