ಒಂದು ದೇಶ ಒಂದು ಚುನಾವಣೆಗೆ ಬಿರುಸಿನ ಚಟುವಟಿಕೆ: ದೇಶಕ್ಕೊಂದೇ ಚುನಾವಣೆ ಕಾನೂನು ಜಾರಿ ಹೇಗೆ..?
ಒಂದು ದೇಶ-ಒಂದು ಚುನಾವಣೆಗೆ ಬಿರುಸಿನ ಚಟುವಟಿಕೆ
22ನೇ ಕಾನೂನು ಆಯೋಗದಿಂದ ಸಕಾರಾತ್ಮಕ ಸ್ಪಂದನೆ
2029ಕ್ಕೆ ಒಂದು ದೇಶ ಒಂದು ಚುನಾವಣೆ ಜಾರಿ ಸಾಧ್ಯತೆ
‘ಒಂದು ದೇಶ ಒಂದು ಚುನಾವಣೆ’ಗೆ ಚಟುವಟಿಕೆಗಳು ತೀವ್ರಗೊಂಡಿವೆ. ದೇಶಕ್ಕೊಂದೇ ಚುನಾವಣೆಗೆ ಕಾನೂನು ಆಯೋಗ(Law Commission) ಶಿಫಾರಸು ಮಾಡಿದೆ. 22ನೇ ಕಾನೂನು ಆಯೋಗದಿಂದ ಶೀಘ್ರವೇ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು. 2029ಕ್ಕೆ ದೇಶಕ್ಕೊಂದೇ ಚುನಾವಣೆ ನಡೆಸುವ ಸಾಧ್ಯತೆ ಇದೆ. ಲೋಕಸಭೆ(Loksabha), ರಾಜ್ಯ ವಿಧಾನಸಭೆಗಳಿಗೆ ಏಕಕಾಲಕ್ಕೆ ಎಲೆಕ್ಷನ್ ನಡೆಯುವ ಸಾಧ್ಯತೆ ಇದೆ. ದೇಶಕ್ಕೊಂದೇ ಎಲೆಕ್ಷನ್‌ಗೆ ಈಗಾಗಲೇ ಸಮಿತಿ ರಚನೆ ಮಾಡಲಾಗಿದೆ. ರಾಮನಾಥ್ ಕೋವಿಂದ್(Ram Nath Kovind) ನೇತೃತ್ವದಲ್ಲಿ ಸಮಿತಿ ರಚನೆ ಮಾಡಲಾಗಿದೆ. ಸೆ.23ರಂದು ಮೊದಲ ಸಭೆ ನಡೆಸಿದ್ದ ಕೋವಿಂದ್, ಆಯೋಗದ ವರದಿಯನ್ನು ಈ ಸಮಿತಿ ಪರಿಶೀಲಿಸಲಿದೆ. ಬಳಿಕ ಸರ್ಕಾರಕ್ಕೆ ತನ್ನ ಶಿಫಾರಸನ್ನು ಕಮಿಟಿ ತಿಳಿಸಲಿದೆ.
ಇದನ್ನೂ ವೀಕ್ಷಿಸಿ: ಜೆಡಿಎಸ್-ಬಿಜೆಪಿಗೆ ಆಘಾತ: ದೇವೇಗೌಡರ ತವರು ಜಿಲ್ಲೆಯಲ್ಲೇ ಮೈತ್ರಿಗೆ ವಿರೋಧ ?