ಹಲವು ಯುದ್ಧಗಳ ಅವಲೋಕಿಸಿದ್ದೇನೆ ಆಪರೇಷನ್ ಸಿಂದೂರ ಎಲ್ಲಕ್ಕಿಂತ ಭಿನ್ನ: ಅಮೆರಿಕನ್ ಯುದ್ಧ ತಜ್ಞ

ಭಾರತ ಹಾಗೂ ಪಾಕಿಸ್ತಾನದ ನಡುವಿನ ಸಂಘರ್ಷವೂ ಹೊಸ ಯುದ್ಧತತ್ವಗಳನ್ನು ಹೊಸ ಸಾಧ್ಯತೆಗಳನ್ನು ಜಗತ್ತಿನ ಮುಂದೆ ತೆರೆದಿಟ್ಟಿದೆ. ಖ್ಯಾತ ಯುದ್ಧ ತಜ್ಞ ಜಾನ್ ಸ್ಪೆನ್ಸರ್ ಈ ಬಗ್ಗೆ ಮಾತನಾಡಿದ್ದು ಅವರು ಏನು ಹೇಳಿದ್ದಾರೆ ನೋಡಿ...

Share this Video
  • FB
  • Linkdin
  • Whatsapp

ಭಾರತ ಹಾಗೂ ಪಾಕಿಸ್ತಾನದ ನಡುವಿನ ಸಂಘರ್ಷವೂ ಹೊಸ ಯುದ್ಧತತ್ವಗಳನ್ನು ಹೊಸ ಸಾಧ್ಯತೆಗಳನ್ನು ಜಗತ್ತಿನ ಮುಂದೆ ತೆರೆದಿಟ್ಟಿದೆ. ಖ್ಯಾತ ಯುದ್ಧ ತಜ್ಞ ಜಾನ್ ಸ್ಪೆನ್ಸರ್ ಈ ಬಗ್ಗೆ ಮಾತನಾಡಿದ್ದು, ಭಾರತಕ್ಕೆ ಇದೊಂದು ನಿರ್ಣಾಯಕ ಗೆಲುವು ಎಂದಿದ್ದಾರೆ. ಭಾರತ ಆಪರೇಷನ್ ಸಿಂದೂರ್ ಮೂಲಕ ಉಗ್ರರಿಗೆ ಸ್ಪಷ್ಟ ಸಂದೇಶ ರವಾನಿಸಿದೆ.ಈ ಯುದ್ಧದಿಂದ ಭಾರತದ ವಾಯು ರಕ್ಷಣಾ ವ್ಯವಸ್ಥೆ ತಾಕತ್ತಿನ ಪ್ರದರ್ಶನವಾಗಿದೆ ಎಂದು ಅಮೆರಿಕದ ಖ್ಯಾತ ಯುದ್ಧ ತಜ್ಞ ಜಾನ್ ಸ್ಪೆನ್ಸರ್ ಅಭಿಪ್ರಾಯಪಟ್ಟಿದ್ದಾರೆ.

ಆಪರೇಷನ್ ಸಿಂದೂರ ಮೂಲಕ ಭಾರತಕ್ಕೆ ಸ್ಪಷ್ಟ ಗೆಲುವು, ಆಪರೇಷನ್ ಸಿಂದೂರ ವಿಭಿನ್ನ, ನಾನು ಹಲವು ಯುದ್ಧಗಳನ್ನ ಅವಲೋಕಿಸಿದ್ದೇನೆ, ಆದರೆ ಆಪರೇಷನ್ ಸಿಂದೂರ ಎಲ್ಲಕ್ಕಿಂತ ಭಿನ್ನ, ಭಾರತ ಉಗ್ರರ ನೆಲೆಗಳನ್ನೇ ಧ್ವಂಸ ಮಾಡಿದೆ. ಭಾರತವು ಇನ್ನೂ ಕಾರ್ಯಚರಣೆ ನಡೆಸಬೇಕಿತ್ತು. ಕಾರ್ಯಾಚರಣೆ ಬಳಿಕ ಹೊಸ ಯುದ್ಧ ತತ್ವ ಉದಯವಾಗಿದೆ. ನಿಗದಿತ ಕಾರ್ಯಾಚರಣೆಯಿಂದಲೇ ಗುರಿ ಸಾಧಿಸಿದೆ. ಬೇಕಾಗಾದ, ಬೇಕಾದ ಜಾಗಕ್ಕೆ ಭಾರತ ಗುರಿ ಇಟ್ಟಿತ್ತು. ಭಾರತ ಕಾರ್ಯಚರಣೆ ಸಾಮರ್ಥ್ಯವನ್ನ ಆಪರೇಷನ್ ಸಿಂದೂರ ಪ್ರದರ್ಶಿಸಿದೆ. ಸುಳ್ಳು ಸುದ್ದಿಗಳನ್ನ ಹೊಸಕಿಹಾಕುವಲ್ಲೂ ಪ್ರಾಬಲ್ಯ ಸಾಧಿಸಿದೆ ಎಂದು ಯುದ್ಧ ತಜ್ಞ ಜಾನ್ ಸ್ಪೆನ್ಸರ್ ಹೇಳಿದ್ದಾರೆ.

Related Video