Asianet Suvarna News Asianet Suvarna News

ಮೇ.28ಕ್ಕೆ ನೂತನ ಸಂಸತ್‌ ಭವನ ಉದ್ಘಾಟನೆ: ಸ್ಪೀಕರ್‌ ಆಸನದ ಪಕ್ಕ ಕಂಗೊಳಿಸಲಿದೆ ಚಿನ್ನದ ರಾಜದಂಡ ಸೆಂಗೋಲ್‌ !

ಬ್ರಿಟಿಷರಿಂದ ಅಧಿಕಾರ ಹಸ್ತಾಂತರವನ್ನು ಪ್ರತಿನಿಧಿಸಲು ಭಾರತದ ಮೊದಲ ಪ್ರಧಾನಿ ಜವಾಹರಲಾಲ್ ನೆಹರು ಅವರು ಸ್ವೀಕರಿಸಿದ ತಮಿಳುನಾಡಿನ ಐತಿಹಾಸಿಕ ರಾಜದಂಡವೇ 'ಸೆಂಗೋಲ್‌' ಆಗಿದೆ.

ಹೊಸ ಸಂಸತ್‌ ಭವನ ಮೇ 28ರಂದು ಲೋಕಾರ್ಪಣೆಯಾಗಲಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಐತಿಹಾಸಿಕ ಅಧಿಕಾರದ ಸಂಕೇತವಾಗಿರುವ ರಾಜದಂಡವನ್ನು ಸ್ವೀಕರಿಸಿ ಸಂಸತ್‌ಭವನದಲ್ಲಿ ಲೋಕಸಭೆಯ ಸ್ಪೀಕರ್‌ ಆಸನದ ಪಕ್ಕ ಅದೇ ದಿನ ಸ್ಥಾಪಿಸಲಿದ್ದಾರೆ. ಕೇಂದ್ರ ಗೃಹ ಸಚಿವ ಅಮಿತ್‌ ಶಾ, ಸೆಂಗೋಲ್‌ ಅಂದರೆ ರಾಜದಂಡವನ್ನು ಹೊಸ ಸಂಸತ್‌ ಭವನದ ಕಟ್ಟಡದ ಸ್ಪೀಕರ್‌ ಕುರ್ಚಿಯ ಬಳಿ ಇರಿಸೋದಾಗಿ ಹೇಳಿದ್ದಾರೆ. ದೇಶದ ಬಹುತೇಕರಿಗೆ ರಾಜದಂಡ ಎನ್ನುವ ವಸ್ತು ದೇಶದ ಇತಿಹಾಸದಲ್ಲಿ ಅತ್ಯಂತ ಮಹತ್ವದ ಸ್ಮರಣಿಕೆ ಎನ್ನುವುದೇ ಗೊತ್ತಿರಲಿಲ್ಲ. ಭಾರತಕ್ಕೆ ಅಧಿಕಾರ ಹಸ್ತಾಂತರ ಮಾಡುವ ನೆನಪಿನಲ್ಲಿ ಸ್ಮರಣಿಕೆಯಾಗಿದ್ದ ಸೆಂಗೋಲ್‌ ಅಥವಾ ರಾಜದಂಡ ಹಾಗಿದ್ದರೆ ಇಲ್ಲಿವರೆಗೂ ಎಲ್ಲಿತ್ತು ಎನ್ನುವ ಪ್ರಶ್ನೆ ದೇಶದ ಬಹುತೇಕ ಪ್ರಜೆಗಳನ್ನು ಕಾಡಿದ್ದು ಸುಳ್ಳಲ್ಲ. ರಾಜರ ಆಳ್ವಿಕೆಯ ಕಾಲದಿಂದಲೂ ಭಾರತದಲ್ಲಿ ಅಧಿಕಾರಿ ಹಾಗೂ ಕಾನೂನು ಆಳ್ವಿಕೆಯ ಹಸ್ತಾಂತರವನ್ನು ಸೆಂಗೋಲ್‌ ಮೂಲಕ ಮಾಡಲಾಗುತ್ತಿತ್ತು. ಚೋಳರ ಕಾಲದ ಈ ರಾಜದಂಡ ಭಾರತದ ಸ್ವಾತಂತ್ರ್ಯದ ಸಂಕೇತವಾಗಿ ಅಂದಿನ ಪ್ರಧಾನಮಂತ್ರಿ ಜವಹರಲಾಲ್‌ ನೆಹರು ಅವರಿಗೆ ನೀಡಲಾಗಿತ್ತು. ದೇಶದ ಇತಿಹಾಸದಲ್ಲಿ ಅತ್ಯಂತ ಪ್ರಾಮುಖ್ಯತೆ ಪಡೆದ ಸ್ಮರಣಿಕೆಯೊಂದಿಗೆ ಇಲ್ಲಿಯವರೆಗೂ ಅಲಹಾಬಾದ್‌ನ ಆನಂದ ಭವನದ ಮ್ಯೂಸಿಯಂನ ಗಾಜಿನೆ ಪೆಟ್ಟಿಗೆಯ ಒಳಗೆ ಲಾಕ್‌ ಆಗಿತ್ತು. ಇದೀಗ ಕಾಂಗ್ರೆಸ್‌ ಹಾಗೂ ಎಡಪಕ್ಷಗಳ ವಿರುದ್ಧ ಬಿಜೆಪಿ ಹಾಗೂ ದೇಶದ ಇತಿಹಾಸಕಾರರು ಮುಗಿಬಿದ್ದಿದ್ದಾರೆ. 

ಇದನ್ನೂ ವೀಕ್ಷಿಸಿ: ಚಿಕ್ಕಬಳ್ಳಾಪುರದಲ್ಲಿ ನೈತಿಕ ಪೊಲೀಸ್‌ ಗಿರಿ ಪ್ರದರ್ಶನ: ಯುವತಿಯಿಂದ ದೂರು ದಾಖಲು, ಇಬ್ಬರ ಬಂಧನ