Navjot Singh Sidhu: ಇಂಡಿಯಾ ಒಕ್ಕೂಟ ಛಿದ್ರ ಛಿದ್ರ..‘ಕೈ’ ಅಭದ್ರ..! ಕಮಲ ಪಾಳಯಕ್ಕೆ ಘರ್ ವಾಪ್ಸಿಯಾಗ್ತಾರಾ ಸಿಧು..?

ಕಾಂಗ್ರೆಸ್ ನಾಯಕತ್ವದಿಂದ ಬೇಸತ್ತರಾ ಕಮಲ್ ನಾಥ್?
ಕಮಲ ಪಾಳಯಕ್ಕೆ ಘರ್ ವಾಪ್ಸಿಯಾಗ್ತಾರಾ ಸಿಧು..?
ಶೀಘ್ರವೇ ಬಿಜೆಪಿ ಸೇರ್ತಾರಾ ಮಜಿ ಕ್ರಿಕೆಟಿಗ ಸಿಧು..? 

First Published Feb 19, 2024, 12:01 PM IST | Last Updated Feb 19, 2024, 12:02 PM IST

ಇಂಡಿಯಾ ಒಕ್ಕೂಟ ಲೋಕಸಭಾ ಚುನಾವಣೆಗೂ(Loksabha) ಮೊದಲೇ ಛಿದ್ರ ಛಿದ್ರವಾಗುವಂತೆ ಕಾಣುತ್ತಿದ್ದು, ಬಿರುಗಾಳಿಯಲ್ಲಿ ಸಿಲುಕಿ ತರಗೆಲೆಯಂತೆ ಕಾಂಗ್ರೆಸ್ ಆಗಿದೆ. ಅತಿರಥ ಮಹಾರಥ ನಾಯಕರೇ ಪಕ್ಷಕ್ಕೆ ಗುಡ್‌ಬೈ ಹೇಳುತ್ತಿದ್ದಾರೆ. ಕಾಂಗ್ರೆಸ್‌ಗೆ(Congress) ಗಾಯದ ಮೇಲೆ ಉಪ್ಪನ್ನು ಮನೀಶ್ ತಿವಾರಿ ಸುರಿದಿದ್ದಾರೆ. ಕಮಲನಾಥ್(Kamal Nath) ಬಳಿಕ ಕಾಂಗ್ರೆಸ್‌ನಿಂದ ತಿವಾರಿ(Manish Tiwari) ವಿಮುಖರಾಗುವ ಸಾಧ್ಯತೆ ಇದೆ. ಇತ್ತ ಕಾಂಗ್ರೆಸ್‌ಗೆ ಗುಡ್‌ಬೈ ಹೇಳುವತ್ತ ನವಜೋತ್ ಸಿಂಗ್ ಸಿಧು ಮುಂದಾಗಿದ್ದಾರೆ. ಕಾಂಗ್ರೆಸ್ ನಾಯಕತ್ವದಿಂದ ಬೇಸತ್ತರಾ ಕಮಲ್ ನಾಥ್ ಎಂಬ ಪ್ರಶ್ನೆ ಈಗ ಕಾಡುತ್ತಿದೆ. ಕಳೆದ ಚುನಾವಣೆಯಲ್ಲಿ ತಮ್ಮನ್ನು ಕಡೆಗಣಿಸಿದ್ದಕ್ಕೆ ಬೇಸರ ವ್ಯಕ್ತಪಡಿಸಿದ್ದು, ಶೀಘ್ರವೇ ಕಮಲನಾಥ್ ಬಿಜೆಪಿ ಸೇರ್ಪಡೆ ಸಾಧ್ಯತೆ ಎನ್ನಲಾಗ್ತಿದೆ. ಇನ್ನೂ ಇತ್ತ ಪಂಜಾಬ್‌ನಲ್ಲಿ ಕಮಲ ಪಾಳಯಕ್ಕೆ ಸಿಧು(Navjot Singh Sidhu) ಘರ್ ವಾಪ್ಸಿಯಾಗ್ತಾರೆ ಎನ್ನಲಾಗ್ತಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಜತೆ ಮಾತುಕತೆ ನಡೆಸಿದ್ದಾರೆ.

ಇದನ್ನೂ ವೀಕ್ಷಿಸಿ:  ‘ದೋಸ್ತಿ’ಗಳಿಗೆ ಖಡಕ್ ಸಂದೇಶ ಕೊಟ್ರಾ ರೆಬೆಲ್ ಲೇಡಿ ?: ‘ಮಂಡ್ಯನ ಎಂದೆಂದಿಗೂ ಬಿಡಲ್ಲ’ ಎಂದು ಸುಮಲತಾ ಶಪಥ !

Video Top Stories