Asianet Suvarna News Asianet Suvarna News

‘ದೋಸ್ತಿ’ಗಳಿಗೆ ಖಡಕ್ ಸಂದೇಶ ಕೊಟ್ರಾ ರೆಬೆಲ್ ಲೇಡಿ ?: ‘ಮಂಡ್ಯನ ಎಂದೆಂದಿಗೂ ಬಿಡಲ್ಲ’ ಎಂದು ಸುಮಲತಾ ಶಪಥ !

ಮಂಡ್ಯ ಬಿಜೆಪಿ ಟಿಕೆಟ್‌ಗೆ ಸಂಸದೆ ಸುಮಲತಾ ಪಟ್ಟು..!
‘ದೋಸ್ತಿ’ಗಳಿಗೆ ಖಡಕ್ ಸಂದೇಶ ಕೊಟ್ಟ ರೆಬೆಲ್ ಲೇಡಿ
ಮತ್ತೆ ಇಂಡಿಯಾದಲ್ಲಿ ಸದ್ದು ಮಾಡಲಿದೆ ಮಂಡ್ಯ ಜಿಲ್ಲೆ..! 

ಅಂಬರೀಶ್ ಅವರ ಹಣೆಗೆ ಮಂಡ್ಯ ಮಣ್ಣಿನ ತಿಲಕ ಇಟ್ಟು ಕಳುಹಿಸಿದ್ದೇವೆ. ಮಂಡ್ಯದ(Mandya) ಮಣ್ಣಿನ ಗುಣ, ಋಣ ನನ್ನಲ್ಲಿ ಬೆರೆತುಹೋಗಿದೆ. ಅಷ್ಟು ಸುಲಭವಾಗಿ ಈ ಮಣ್ಣಿನಿಂದ ನನ್ನನ್ನು ಬೇರ್ಪಡಿಸಲಾಗುವುದಿಲ್ಲ ಎಂದು ಸಂಸದೆ ಸುಮಲತಾ ಅಂಬರೀಶ್(Sumalatha Ambareesh) ಭಾವುಕರಾಗಿ ನುಡಿದಿದ್ದಾರೆ. ಪಟ್ಟಣದ ಶ್ರೀರಂಗನಾಥ ಸ್ವಾಮಿ ದೇವಾಲಯದ ಆವರಣದಲ್ಲಿ ನಟ ದರ್ಶನ್(Darshan) ಚಿತ್ರರಂಗ ಪ್ರವೇಶಿಸಿ 25 ವರ್ಷ ಪೂರೈಸಿದ ಹಿನ್ನೆಲೆ ಆಯೋಜಿಸಿದ್ದ 'ಬೆಳ್ಳಿ ಪರ್ವ ಡಿ-25' ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. ಈ ಮೂಲಕ ಮತ್ತೆ ಇಂಡಿಯಾದಲ್ಲಿ ಮಂಡ್ಯ ಜಿಲ್ಲೆ ಸದ್ದು ಮಾಡಲಿದೆ. ಹಾಸನ, ಮಂಡ್ಯ ಟಿಕೆಟ್‌ಗೆ ಬಿಜೆಪಿ ಜೆಡಿಎಸ್‌ನಲ್ಲಿ ಪೈಪೋಟಿ ಶುರುವಾಗಿದೆ. ಇತ್ತ ಮಂಡ್ಯ ನಂದೇ ಎಂದು ಸಂಸದೆ ಸುಮಲತಾ ಶಪಥ ಮಾಡಿದ್ದಾರೆ.

ಇದನ್ನೂ ವೀಕ್ಷಿಸಿ:  Narendra modi: 3ನೇ ಬಾರಿ ಅಧಿಕಾರ, 400 ಟಾರ್ಗೆಟ್..! ಕಾರ್ಯಕರ್ತರಿಗೆ ಪ್ರಧಾನಿ ಮೋದಿ ಪಾಠ !

Video Top Stories