Asianet Suvarna News Asianet Suvarna News

ಗುಜರಾತ್‌ನಲ್ಲಿ ಮೋದಿ ಹ್ಯಾಟ್ರಿಕ್ ಗೆಲುವು ಕಂಡಿದ್ದು ಹೇಗೆ? ನೆಹರು ನಂತರ 3ನೇ ಗೆಲುವು ಪಡೆದು ದಾಖಲೆ ಮಾಡ್ತಾರಾ ಪ್ರಧಾನಿ?

ಗುಜರಾತ್ ಗೆದ್ದ ಮೋದಿ ಭಾರತವನ್ನೂ 3ನೇ ಬಾರಿ ಗೆಲ್ತಾರಾ..? 
ಡಬಲ್ ಹ್ಯಾಟ್ರಿಕ್ ಹೊಸ್ತಿಲಿನಲ್ಲಿ ಪ್ರಧಾನಿ ನರೇಂದ್ರ ಮೋದಿ 
ಗುಜರಾತ್ ಸಿಎಂ ಆಗಿ ಮೋದಿ ಹೆಸರಲ್ಲಿ ಹ್ಯಾಟ್ರಿಕ್ ದಾಖಲೆ 
ದೇಶಕ್ಕೆ ಪ್ರಧಾನಿಯಾಗಿ ಹ್ಯಾಟ್ರಿಕ್ ಗೆಲುವು ಪಡೆಯುತ್ತಾರಾ..?  
 

ಪ್ರಧಾನಿ ನರೇಂದ್ರ ಮೋದಿ ಈಗ ಡಬಲ್ ಹ್ಯಾಟ್ರಿಕ್ ಗೆಲುವಿನ(Hat trick win) ಸಂಭ್ರಮದ ಹೊಸ್ತಿಲಲ್ಲಿದ್ದಾರೆ. ಈ ಮೊದಲು ಗುಜರಾತ್ ರಾಜ್ಯದ ಮುಖ್ಯಮಂತ್ರಿಯಾಗಿ ಹ್ಯಾಟ್ರಿಕ್ ಗೆಲುವನ್ನು ಸಂಭ್ರಮಿಸಿದ್ದರು. ಈಗ ದೇಶದ ಪ್ರಧಾನಿಯಾಗಿ ಮೂರನೇ ಬಾರಿ ಗೆಲುವು ಪಡೆಯುವ ಹೊಸ್ತಿಲಲ್ಲಿದ್ದಾರೆ. ಮುಂದಿನ ತಿಂಗಳು ಜೂನ್ 4ರಂದು ಕೇಂದ್ರದಲ್ಲಿ ಬಹುಮತ ಪಡೆದು ಬಿಜೆಪಿ(BJP) ಅಧಿಕಾರಕ್ಕೆ ಬಂದಿದ್ದೇ ಆದ್ರೆ, ನರೇಂದ್ರ ಮೋದಿ(Narendra Modi) ಮತ್ತೊಮ್ಮೆ ಪ್ರಧಾನಿಯಾಗ್ತಾರೆ. ಮೊದಲನೇ ಹ್ಯಾಟ್ರಿಕ್ ಏನಂದ್ರೆ, ಗುಜರಾತ್ ಸಿಎಂ(Gujarat CM) ಆಗಿ ಹ್ಯಾಟ್ರಿಕ್ ಸಾಧನೆ ಮಾಡಿದ್ದು. ಇನ್ನೊಂದು ದೇಶದ ಪ್ರಧಾನಿಯಾಗಿ ಹ್ಯಾಟ್ರಿಕ್. ಎರಡನೇ ಹ್ಯಾಟ್ರಿಕ್ ಮೋದಿ ವಾರಾಣಸಿಯಲ್ಲಿ ಗೆದ್ದರೆ ಮಾತ್ರ. ನರೇಂದ್ರ ಮೋದಿ ಡಬಲ್ ಹ್ಯಾಟ್ರಿಕ್ ಹಾದಿ ಅಷ್ಟು ಸುಲಭದ ಹಾದಿಯಾಗಿರ್ಲಿಲ್ಲ. ಆದ್ರೆ ಅತ್ಯಂತ ಕಠಿಣ ಹಾದಿಯಲ್ಲೂ ಹೂವಿನ ದಾರಿಯಲ್ಲಿ ನಡೆದಷ್ಟೇ ಸುಲಭವಾಗಿ ನಡೆದು ಸಾಗಿದವರು ನರೇಂದ್ರ ದಾಮೋದರ್ದಾಸ್ ಮೋದಿ.

ಇದನ್ನೂ ವೀಕ್ಷಿಸಿ:  ಕಾಂಗ್ರೆಸ್ ಕಾರ್ಯಕರ್ತನ ಸಾವಿಗೆ ಟ್ವಿಸ್ಟ್..! ಸಾವಿನ ರಹಸ್ಯ ಬಯಲು ಮಾಡಿತ್ತು P.M ರಿಪೋರ್ಟ್..!

Video Top Stories