Asianet Suvarna News Asianet Suvarna News

ಕಾಂಗ್ರೆಸ್ ಕಾರ್ಯಕರ್ತನ ಸಾವಿಗೆ ಟ್ವಿಸ್ಟ್..! ಸಾವಿನ ರಹಸ್ಯ ಬಯಲು ಮಾಡಿತ್ತು P.M ರಿಪೋರ್ಟ್..!

ಹೆಂಡತಿ ವಿರುದ್ಧವೇ ಪತಿ ಸಾಯುವ ಮುನ್ನ ಸಾಕ್ಷಿ ಸೃಷ್ಟಿಸಿದ್ದ..!
ಹೆಂಡತಿಯನ್ನ ಜೈಲಿಗೆ ಕಳುಹಿಸಲು ಆತ ಪ್ಲಾನ್ ಮಾಡಿದ್ದೇಕೆ..?
ಪ್ರಾಣ ಬೆದರಿಕೆ ಇದೆ ಅಂತ ಕುಟುಂಬಸ್ಥರಿಗೆ ಸುಳ್ಳು ಹೆಳಿದ..!
 

ಆವತ್ತು ಮಾರ್ಚ್ 11ನೇ ತಾರೀಖು. ಒಬ್ಬ ಕಾಂಗ್ರೆಸ್‌ ಮುಖಂಡನ(Congress leader) ಬರ್ಬರ ಕೊಲೆಯ(Murder) ಬಗ್ಗೆ ನಾವು ಇದೇ ಕಾರ್ಯಕ್ರಮದಲ್ಲಿ ಹೇಳಿದ್ವಿ. ಪ್ರೀತಿಸಿ ಮದುವೆಯಾದವಳೇ ಆತನನ್ನ ಕೊಂದುಬಿಟ್ಟಿದ್ದಳು ಅಂತ ಪೊಲೀಸರೂ(Police) ಸಹ ಆವತ್ತು ಅಂದುಕೊಂಡಿದ್ರು. ಆದ್ರೆ ಇವತ್ತು ಇದೇ ಕೇಸ್‌ಗೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಅದು ಕೊಲೆ ಅಲ್ಲ ಬದಲಿಗೆ ಆತ್ಮಹತ್ಯೆ ಅನ್ನೋ ಭುಯಾನಕ ಸತ್ಯ ಈಗ ಹೊರಬಿದ್ದಿದೆ. ಇಷ್ಟೆಲ್ಲಾ ಆದಮೇಲೆ. ಇದು ಕೊಲೆಯೇ ಅಂತ ಪೊಲೀಸರು ಫಿಕ್ಸ್ ಆಗಿದ್ರು. ಇನ್ನೂ ಹೆಂಡತಿನೇ ಯಾಕೆ ಕೊಲೆ ಮಾಡ್ತಾಳೆ ಅಂತ ಪೊಲೀಸರು ತನಿಖೆಯನ್ನ ಮುಂದುವರೆಸಿದ್ರು. ಆದ್ರೆ ಗಂಡ ಹೆಂಡಿರ ನಡುವೆ ವೈಮನಸ್ಸು ಬಿಟ್ಟರೆ ಬೇರೇನೂ ಸಿಗಲಿಲ್ಲ ಪೊಲೀಸರಿಗೆ ಆದ್ರೆ ಇಷ್ಟೆಲ್ಲಾ ನಡೆದು ಈಗ ಎರಡುವರೆ ತಿಂಗಳಾಗಿದೆ. ಈಗ ಈ ಕೇಸ್ ಅನ್ನ ಪೊಲೀಸರು ಆತ್ಮಹತ್ಯೆ(suicide) ಕೇಸ್ ಅಂತ ಬರದು ಕೇಸನ್ನ ಕ್ಲೋಸ್ ಮಾಡಿದ್ದಾರೆ. ಶರಣಪ್ಪನ ವೈವಾಹಿಕ ಜೀವನ ಸರಿ ಇರಲಿಲ್ಲ. ಇದೇ ಕಾರಣಕ್ಕೆ ದೂರವಾಗಿದ್ದರು ಕೂಡ. ಆದ್ರೆ ದೂರವಾದ ಹೆಂಡತಿ ಮೇಲೆ ಶರಣಪ್ಪ ದ್ವೇಷ ಸಾದಿಸಲು ಶುರು ಮಾಡಿದ್ದ. ತನ್ನ ಜೀವನವನ್ನ ಹಾಳು ಮಾಡಿದವಳನ್ನ ಜೈಲಿನಲ್ಲಿ ಕೂರಿಸಬೇಕು ಅನ್ನೋ ಹಠಕ್ಕೆ ಬಿದ್ದುಬಿಟ್ಟಿದ್ದ. ಹೀಗೆ ಯೋಚನೆ ಮಾಡುತ್ತಿರುವಾಗ್ಲೇ ಆತನ ಸ್ನೇಹಿತನ ಕೇಸ್ ನೆನಪಿಗೆ ಬಂದಿತ್ತು. ಆ ಕೇಸ್ನಲ್ಲಿ ಗಂಡ ಸತ್ತ ನಂತರ ಹೆಂಡತಿ ಜೈಲಿಗೆ ಹೋಗಿದ್ದಳು. ನಾನು ಸತ್ತರೂ ನನ್ನ ಹೆಂಡತಿ ಜೈಲಿಗೆ ಹೋಗ್ತಾಳೆ ಅನ್ನೋದು ಅವನ ನಂಬಿಕೆಯಾಗಿತ್ತು. ತನ್ನ ಹೆಂಡತಿಯನ್ನ ಜೈಲಿಗೆ  ಕಳುಹಿಸುವ ಸಲುವಾಗಿ ತಾನೇ ಪ್ರಾಣ ಬಿಡೋದಕ್ಕೆ ನಿರ್ಧರಿಸಿಬಿಟ್ಟ. ಇನ್ನೂ ಕೇಸ್ ಬಲವಾಗಲು ತನಗೆ ಪ್ರಾಣ ಬೆದರಿಕೆ ಇದೆ ಅನ್ನೋ ವಾತವರಣ ಸೃಷ್ಟಿಸಿದ್ದ. ಅಷ್ಟೇ ಅಲ್ಲ ಕೊಲೆ ಅನ್ನೋದಕ್ಕೆ ಎಲ್ಲಾ ಸಾಕ್ಷಿಗಳನ್ನ ತಾನೇ ಸೃಷ್ಟಿ ಮಾಡಿ ಕೊನೆಗೇ ತಾನೇ ಹೋಗಿ ನೇಣುಬಿಗಿದುಕೊಂಡ.

ಇದನ್ನೂ ವೀಕ್ಷಿಸಿ:  ಕಾಸರಗೋಡಿನಲ್ಲಿ ಮತ್ತೆ ಲವ್ ಜಿಹಾದ್ ಸದ್ದು? ಮುಸ್ಲಿಂ ಲೀಗ್ ನೇತಾರನ ಷಡ್ಯಂತ್ರ ಎನ್ನುತ್ತಿದೆ ವಿಎಚ್‌ಪಿ!

Video Top Stories