ಘಟಬಂಧನ್ ವಿರುದ್ಧ ಪ್ರಧಾನಿ ರಣಕಹಳೆ! ಸನಾತನ ಪರಂಪರೆ ಘನತೆ ವಿವರಿಸಿದ ಪ್ರಧಾನಿ!

ಚುನಾವಣಾ ರಣಕಣಕ್ಕೆ ಸನಾತನವೇ ಆಯುಧ!
ಮೈತ್ರಿಕೂಟದ ವಿರುದ್ಧ ಮೋದಿ ರಣಾರ್ಭಟ!
ಜನಕ್ಕೆ ಕಟ್ಟೆಚ್ಚರ ಅಂತ ಹೇಳಿದ್ದೇಕೆ ಮೋದಿ?
ಪಂಚ ರಾಜ್ಯ ಸಂಗ್ರಾಮಕ್ಕೆ ಮೋದಿ ಪಾಂಚಜನ್ಯ!

Share this Video
  • FB
  • Linkdin
  • Whatsapp

ಒಂದು ಕಡೆ ಐಎನ್ಡಿಐಎ ಮೈತ್ರಿಕೂಟದ ಪ್ರಧಾನ ಪಕ್ಷದ ಪ್ರಭಾವಿ ನಾಯಕರು, ಹಿಂದೂ ಧರ್ಮ, ಸನಾತನ(sanatana) ಪರಂಪರೆ ವಿರುದ್ಧ ನಾಲಿಗೆ ಹರಿಬಿಡ್ತಾ ಇದಾರೆ. ಆದ್ರೆ ಅಂಥವರ ಬಾಯಿ ಮುಚ್ಚಿಸೋದಕ್ಕೆ ಅಂತಲೇ, ಪ್ರಧಾನಿ ನರೇಂದ್ರ ಮೋದಿ(Narendra Modi) ಸಮರಾಂಗಣಕ್ಕೆ ಪ್ರವೇಶಿಸಿದ ಹಾಗೆ ಕಾಣ್ತಾ ಇದೆ. ಇಷ್ಟೂ ಕಾಲ ಎದುರಾಳಿ ಪಡೆ ಹೇಳಿದ್ದನ್ನೆಲ್ಲಾ ಕೇಳಿಸಿಕೊಂಡಿದ್ದ ಮೋದಿ ಅವರು, ಈಗ ಉತ್ತರ ಕೊಡೋಕೆ ಮುಂದಾದ ಹಾಗೆ ಕಾಣ್ತಾ ಇದೆ. ಕಳೆದ ಕೆಲವೊಂದಷ್ಟು ದಿನಗಳಿಂದ, ದೇಶದಲ್ಲಿ ಬೃಹತ್ ಚರ್ಚೆಯೊಂದು ನಡೀತಿದೆ. ಆ ಚರ್ಚೆಗೆ ಕಾರಣವಾಗಿದ್ದು, ತಮಿಳಿನಾಡಿನ ಮುಖ್ಯಮಂತ್ರಿ, ಎಮ್ ಕೆ ಸ್ಟಾಲಿನ್ ಅವರ ಪುತ್ರರತ್ನ, ಉದಯನಿಧಿ ಸ್ಟಾಲಿನ್(Udhayanidhi Stalin) ಅನ್ನೋ ರಾಜಕಾರಣಿ. ಈ ಮನುಷ್ಯ ಇಷ್ಟು ಹೇಳಿದಾಗಲೇ, ಸನಾತನ ಧರ್ಮದ ಆರಾಧಕರು, ಆಸ್ತಿಕರು ಆಕ್ರೋಶ ಹೊರಹಾಕಿದ್ರು. ಆದ್ರೆ ಆ ಆಕ್ರೋಶದ ಜ್ವಾಲೆ, ಕಾಳ್ಗಿಚ್ಚಾಗಿ ಬದಲಾಗೋ ಹಾಗೆ ಮಾಡಿದ್ದು, ಇದೇ ಡಿಎಮ್ಕೆ ಪಕ್ಷದ ಮತ್ತೊಬ್ಬ ನಾಯಕ, ಎ ರಾಜ. ಈ ಎ ರಾಜ ಯಾರು ಅಂತ ನೀವು ಕೇಳಿದ್ರೆ, ದೇಶದಲ್ಲಿ ದೊಡ್ಡ ಸದ್ದು ಮಾಡಿದ್ದ 2ಜಿ ಹಗರಣದ ಕತೆ ಹೇಳ್ಬೇಕಾಗುತ್ತೆ. ಅದು ನಮಗೀಗ ಬೇಕಿಲ್ಲ. ಆದ್ರೆ ಈ ಇಬ್ಬರೂ, ಸನಾತನ ಧರ್ಮದ ವಿರುದ್ಧ ಹೇಳಿಕೆ ಕೊಡ್ತಿದ್ದ ಹಾಗೇ, ಅದರ ಪ್ರಭಾವ ತಮಿಳುನಾಡಲ್ಲಿ ಮಾತ್ರವೇ ಅಲ್ಲ, ಇಡೀ ದೇಶದಲ್ಲೇ ಸಂಚಲನ ಸೃಷ್ಟಿಸಿಬಿಡ್ತು.

ಇದನ್ನೂ ವೀಕ್ಷಿಸಿ: ಚೈತ್ರಾ ನಿರ್ದೇಶನದ ಚಿತ್ರಕ್ಕೆ ಆ್ಯಂಟಿ ಕ್ಲೈಮ್ಯಾಕ್ಸ್: ಡೀಲ್ ರಾಣಿ ಹೇಳಿದ ಇಂದಿರಾ ಕ್ಯಾಂಟೀನ್ ಕಥೆ ಏನು..?

Related Video