ಚೈತ್ರಾ ನಿರ್ದೇಶನದ ಚಿತ್ರಕ್ಕೆ ಆ್ಯಂಟಿ ಕ್ಲೈಮ್ಯಾಕ್ಸ್: ಡೀಲ್ ರಾಣಿ ಹೇಳಿದ ಇಂದಿರಾ ಕ್ಯಾಂಟೀನ್ ಕಥೆ ಏನು..?

ಡೀಲ್ ರಾಣಿ ಚೈತ್ರಾ ಹೇಳಿದ ಇಂದಿರಾ ಕ್ಯಾಂಟೀನ್ ಕಥೆ ಏನು..?
ಐಷರಾಮಿ ಕಾರು, ಚಿನ್ನಾಭರಣ ಖರೀದಿಸಿದ ಚೈತ್ರಾ ಕುಂದಾಪುರ
ಇಂದಿರಾ ಕ್ಯಾಂಟೀನ್ ಬಗ್ಗೆ ಗೋವಿಂದ ಪೂಜಾರಿ ಹೇಳಿದ್ದೇನು..?

Share this Video
  • FB
  • Linkdin
  • Whatsapp

ಉದ್ಯಮಿ ಗೋವಿಂದ್ ಪೂಜಾರಿಗೆ ಪಂಗನಾಮ ಹಾಕಿ 5 ಕೋಟಿ ಲೂಟಿ ಮಾಡಿದ ಚೈತ್ರಾ ಕುಂದಾಪುರ ಆ್ಯಂಡ್‌ಗ್ಯಾಂಗ್ ಈಗ ಪೊಲೀಸರ ಅತಿಥಿಗಳಾಗಿದ್ದಾರೆ. ಚೈತ್ರಾ ಸಿನಿಮಾಗೆ ಪೊಲೀಸರು ಕ್ಲೈಮ್ಯಾಕ್ಸ್ ಕೊಡ್ತಿದ್ದಾರೆ. ಆದ್ರೆ ಗೋವಿಂದ ಪೂಜಾರಿನ(Govinda Babu Poojary) ಬಕ್ರ ಮಾಡಿ 5 ಕೋಟಿ ಪಡೆದ ನಂತರ ಏನೇನಾಯ್ತು..? ಪೊಲೀಸರು (Police) ಕೇಸ್ ದಾಖಲಿಸುತ್ತಿದ್ದಂತೆ ಚೈತ್ರಾ ಎಲ್ಲಿ ತಲೆ ಮರೆಸಿಕೊಂಡಿದ್ಲು, ಪೊಲೀಸರ ಕೈಗೆ ಈ ಡೀಲ್ ರಾಣಿ ತಗ್ಲಾಕಿಕೊಂಡಿದ್ದೇಗೆ..? ಅದರ ಮಾಹಿತಿ ಇಲ್ಲಿದೆ. 6 ದಿನಗಳ ನಂತರ ಪೊಲೀಸರು ಚೈತ್ರಾರನ್ನ ಅರೆಸ್ಟ್ ಮಾಡ್ತಾರೆ. ಕೋರ್ಟ್ಗೂ ಪರಡ್ಯೂಸ್ ಮಾಡಿ 10 ದಿನಗಳ ಕಾಲ ಕಸ್ಟಡಿಗೂ ಪೊಲೀಸರು ತೆಗೆದುಕೊಳ್ತಾರೆ. ಸದ್ಯ ಆಕೆಯ ವಿಚಾರಣೆ ನಡೆಯುತ್ತಿದೆ. ಆದ್ರೆ ಇದೇ ವೇಳೆ ಚೈತ್ರಾ ತಾಯಿ ನನ್ನ ಏಷ್ಯಾನೆಟ್‌ ಸುವರ್ಣ ನ್ಯೂಸ್ ನೊಂದಿಗೆ ಮಾತನ್ನಾಡಿದ್ದಾರೆ. ಚೈತ್ರಾ ಕುಂದಾಪುರ(Chaitra Kundapura) ಅರೆಸ್ಟ್ ಆದ್ಲು. ಆದ್ರೆ ಇವತ್ತು ಈಕೆಯನ್ನ ಇವತ್ತು ಸಾಂತ್ವಾನ ಕೇಂದ್ರದಿಂದ ಸಿಸಿಬಿ ಕಚೇರಿಗೆ ಹೋಗುವಾಗ ಒಂದು ಬಾಂಬ್ ಸಿಡಿಸಿದ್ಲು. ಅದು ಇಂದಿರಾ ಕ್ಯಾಂಟೀನ್ ಬಾಂಬ್. ಅಷ್ಟೇ ಅಲ್ಲ ಸ್ವಾಮೀಜಿ ಅರೆಸ್ಟ್ ಆಗ್ಲಿ ಎಲ್ಲವೂ ಹೊರಬರಲಿದೆ ಅಂತ ಹೆಳಿದ್ಲು. ಇಂದಿರಾ ಕ್ಯಾಂಟೀನ್(Indira Canteen) ಊಟದ ಟೆಂಡರ್ ವಿಷಯವಾಗಿ ಚೈತ್ರಾಳನ್ನ ಲಾಕ್ ಮಾಡಿದ್ರಾ..? ಏನಿದು ಹೊಸ ಕಥೆ ಅಂತ ಗೋವಿಂದ ಪೂಜಾರಿಯವರನ್ನ ಕೇಳಿದ್ರೆ ಅವರು ಹೇಳಿದ್ದೇ ಬೇರೆ. ಸದ್ಯ ಸ್ವಾಮೀಜಿ ಬಂಧನಕ್ಕೂ ಕೌಂಟ್‌ಡೌನ್ ಶುರುವಾಗಿದೆ.

ಇದನ್ನೂ ವೀಕ್ಷಿಸಿ: ಉನ್ನತ ಶಿಕ್ಷಣ ಇಲಾಖೆಯಲ್ಲಿ ಮತ್ತೆ ಅಂಕಪಟ್ಟಿ ಗೊಂದಲ: ಭೌತಿಕ ಅಂಕಪಟ್ಟಿ ನೀಡಲು ವಿವಿಗಳ ಮೀನಾಮೇಷ..!

Related Video