Asianet Suvarna News Asianet Suvarna News

ಇಡೀ ದೇಶಕ್ಕೆ ಮಾದರಿಯಾದ ಮಹಾರಾಷ್ಟ್ರ ಶಿಕ್ಷಕ... ಇವರು ಮಕ್ಕಳಿಗೆ ಕಲಿಸೋದೇನು ನೋಡಿ!

ಮಕ್ಕಳಿಗೆ ಜೀವನ ಪಾಠ ಕಲಿಸುವ ಮೂಲಕ ಮಹಾರಾಷ್ಟ್ರದ ಈ ಶಿಕ್ಷಕರು ದೇಶಕ್ಕೆ ಮಾದರಿಯಾಗಿದ್ದಾರೆ. ಈ ಶಾಲೆಯಲ್ಲಿ ಮಕ್ಕಳಿಗೆ ಏನೆಲ್ಲಾ ಕಲಿಸಲಾಗುತ್ತದೆ ಎಂಬ ಸಂಪೂರ್ಣ ಡಿಟೇಲ್ ಈ ವಿಡಿಯೋದಲ್ಲಿದೆ. 

ಕೋಟಿ ವಿದ್ಯೆಗಿಂತ ಮೇಟಿ ವಿದ್ಯೆ ಮೇಲು ಎಂಬ ಗಾದೆ ಮಾತಿದೆ. ಅದರಂತೆ ನಾಲ್ಕು ಗೋಡೆಯ ಮಧ್ಯೆ ಕಲಿಯುವ ಶಿಕ್ಷಣಕ್ಕಿಂತ ಸಮಾಜದಲ್ಲಿ ನಾವು ಕಲಿಯುವ ಜೀವನ ಪಾಠ ತುಂಬಾ ಅಮೂಲ್ಯವಾದುದು. ಇದೇ ಕಾರಣಕ್ಕೆ ಶಿಕ್ಷಕರೊಬ್ಬರು ಪಾಠದ ಜೊತೆ ಬದುಕಿನ ಶಿಕ್ಷಣವನ್ನು ವಿದ್ಯಾರ್ಥಿಗಳಿಗೆ ನೀಡುತ್ತಿದ್ದಾರೆ. ಮಹಾರಾಷ್ಟ್ರದ (Maharashtra) ಸಾಂಗ್ಲಿಯ (Sangli) ಶಿಕ್ಷಕರೊಬ್ಬರು ಮಕ್ಕಳಿಗೆ ಪಾಠದ ಜೊತೆ ರೊಟ್ಟಿ ಮಾಡುವ ಜೀವನ ಪಾಠದ ಶಿಕ್ಷಣವನ್ನು ಕಲಿಸುತ್ತಿದ್ದಾರೆ. ಇದರಿಂದ ಪುಟ್ಟ ಪುಟ್ಟ ಮಕ್ಕಳು ಕೂಡ ಸಲೀಸಾಗಿ ರೊಟ್ಟಿ ಮಾಡುತ್ತಿದ್ದಾರೆ. ಮನೆಯಲ್ಲಿ ಅಮ್ಮ ಹೇಗೆ ರೊಟ್ಟಿ ಮಾಡುತ್ತಾರೋ ಅದೇ ರೀತಿ ಮಕ್ಕಳು ಇಲ್ಲಿ ತುಂಬಾ ಪರ್ಫೆಕ್ಟ್ ಆಗಿ ರೊಟ್ಟಿ ಮಾಡುತ್ತಿದ್ದಾರೆ. ಹೀಗೆ ಮಕ್ಕಳಿಗೆ ಜೀವನ ಪಾಠ ಕಲಿಸುವ ಮೂಲಕ ಈ ಶಿಕ್ಷಕರು ದೇಶಕ್ಕೆ ಮಾದರಿಯಾಗಿದ್ದಾರೆ. ಈ ಶಾಲೆಯಲ್ಲಿ ಮಕ್ಕಳಿಗೆ ಏನೆಲ್ಲಾ ಕಲಿಸಲಾಗುತ್ತದೆ ಎಂಬ ಸಂಪೂರ್ಣ ಡಿಟೇಲ್ ಈ ವಿಡಿಯೋದಲ್ಲಿದೆ. 
 

Video Top Stories