ಲಾಲ್ ಬಹದ್ದೂರ್ ಶಾಸ್ತ್ರಿಜೀ ಆ ದಿನ ಫೋನ್‌ನಲ್ಲಿ ಹೇಳಿದ್ದೇನು? ಇಂಡೋ-ಪಾಕ್‌ ಯುದ್ಧದ ಪರಿಣಾಮವೇನು ?

ಪಾಕಿಸ್ತಾನದ ಆಪರೇಷನ್ ಗಿಬ್ರಲ್ಟರ್ ಹೆಸರಲ್ಲಿ, ಪಾಪಿ ಕೃತ್ಯಕ್ಕೆ ಮುಂದಾಗಿತ್ತು. ಅದಕ್ಕೆ ದಿಟ್ಟ ಉತ್ತರ ಕೊಡೋಕೆ ಭಾರತ ಸಜ್ಜಾಯ್ತು.
 

First Published Apr 10, 2024, 5:02 PM IST | Last Updated Apr 10, 2024, 5:02 PM IST

ಆದಷ್ಟು ಬೇಗ ಭಾರತಕ್ಕೆ ಬರ್ತಾ ಇದೀನಿ. ಬಂದ್ ಇಳಿದ ಕೂಡಲೇ, ನನ್ ಮನ್ಸಲ್ಲಿರೋ ಮಾತನ್ನ ನನ್ನ ಜನಕ್ ಹೇಳ್ತೀನಿ. ಆ ಮಾತು ಕೇಳಿದ್ರೆ, ದೇಶದ ಜನ ಸಂತೋಷ ಪಡ್ತಾರೆ. ಸಂಭ್ರಮಿಸ್ತಾರೆ- ಹುಮ್ಮಸ್ಸಿನಿಂದ ಈ ಮಾತು ಹೇಳಿದ್ದು, ಅವತ್ತಿನ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ(Lal Bahadur Shastri). ಉಜ್ಬೆಕಿಸ್ತಾನದ(Uzbekistan) ತಾಷ್ಕೆಂಟ್‌ನಿಂದ ಮನೆಯವರಿಗೆ ಫೋನ್(Phone) ಮಾಡಿದ್ದ ಶಾಸ್ತ್ರೀಜಿ, ಅವತ್ತು ರಾತ್ರಿ 1 ಗಂಟೆ ಸುಮಾರಿಗೆ ಸಂತೋಷದ ಸಂಗತಿ ಹೇಳೋದಿದೆ. ನಾನ್ ಬರೋ ತನಕ ಅದರ ಬಗ್ಗೆ ಚರ್ಚೆ ಮಾಡ್ಬೇಡಿ ಅನ್ನೋ ಕಂಡಿಷನ್ ಕೂಡ ಹಾಕಿದ್ರು. ಅಷ್ಟು ಮಾತಾಡಿದ್ದ, ಮನೆ ಮಂದಿಯೆಲ್ಲಾ ನೆಮ್ಮದಿಯಾಗಿದ್ರು. ಆದ್ರೆ, ಫೋನ್ ಕಟ್ ಆದ ಹದಿನೈದೇ ನಿಮಿಷಕ್ಕೆ, ನಡೆಯಬಾರದ್ದು ನಡೆದು ಹೋಗಿತ್ತು. 1966ರ ಜನವರಿ 11ರ ಮುಂಜಾವು, ಅತಿ ಕೆಟ್ಟ ಸುದ್ದಿಯೊಂದಿಗೆ ಶುರುವಾಗಿತ್ತು. ಶಾಸ್ತ್ರೀಜಿ ದೇಶದ ಎರಡನೇ ಪ್ರಧಾನಿ. ನೆಹರು ಬಳಿಕ ಭಾರತಕ್ಕೆ(India) ಅನಾಥ ಪ್ರಜ್ಞೆ ಕಾಡದ ಹಾಗೆ ಮಾಡಿದ ಧೀಮಂತ ನಾಯಕ. ಹಾಗಂತ, ಶಾಸ್ತ್ರೀಜಿ ಪಟ್ಟದಲ್ಲಿ ಕೂತಾಗ, ಭಾರತವೇನು ಶ್ರೀಮಂತವಾಗಿತ್ತಾ? ಹೋಗಲಿ, ನೆಮ್ಮದಿಯಾದ್ರೂ ಇತ್ತಾ..? ಇಲ್ಲ.. ಶಾಸ್ತ್ರೀಜಿ ಅವತ್ತು ಕೂತದ್ದು, ರತ್ನಖಚಿತ ಸಿಂಹಾಸನದ ಮೇಲಲ್ಲ.ಅಕ್ಷರಶಃ ಮುಳ್ಳಿನ ಗದ್ದುಗೆ ಮೇಲೆ.

ಇದನ್ನೂ ವೀಕ್ಷಿಸಿ:  ಕಾಂಗ್ರೆಸ್ ಮುಖಂಡ ಲಕ್ಷ್ಮಣ್ ಸವದಿ ಆಪ್ತನ ಮರ್ಡರ್..! ಎಲೆಕ್ಷನ್ ಹೊತ್ತಲ್ಲಾದ ಕೊಲೆ ರಹಸ್ಯವೇನು..?

Video Top Stories