ಕಾಂಗ್ರೆಸ್ ಮುಖಂಡ ಲಕ್ಷ್ಮಣ್ ಸವದಿ ಆಪ್ತನ ಮರ್ಡರ್..! ಎಲೆಕ್ಷನ್ ಹೊತ್ತಲ್ಲಾದ ಕೊಲೆ ರಹಸ್ಯವೇನು..?

ಸ್ನೇಹಿತನಿಗೆ ಸಹಾಯ     ಮಾಡಿದ್ದೇ ತಪ್ಪಾಯ್ತು!
ಉಪಾಧ್ಯಕ್ಷನ ಕಷ್ಟಕ್ಕೆ ಅಧ್ಯಕ್ಷ ನೆರವಾಗಿದ್ದ..!
ಅವನ ಕಥೆ ಮುಗಿಸಿ ಹಂತಕರು ಎಸ್ಕೇಪ್..!
 

First Published Apr 10, 2024, 4:31 PM IST | Last Updated Apr 10, 2024, 4:31 PM IST

ಆತ ಹತ್ತೂರಿಗೆ ಬೇಕಾಗಿದ್ದ ವ್ಯಕ್ತಿ. ಕಾಂಗ್ರೆಸ್ ಮುಖಂಡ ಮೇಲಾಗಿ ಶಾಸಕರಾದ ಲಕ್ಷ್ಮಣ ಸವದಿ(Lakshmana Savadi) ಮತ್ತು ರಾಜು ಕಾಗೆ ಪರಮಾಪ್ತನ್ನಾಗಿದ್ದ. ಹೀಗಿದ್ದ ವ್ಯಕ್ತಿ ಆವತ್ತೊಂದು ದಿನ ತನ್ನೂರಿನಲ್ಲೇ ಬರ್ಬರವಾಗಿ ಕೊಲೆಯಾಗಿ(Murder) ಹೋಗಿದ್ದ. ಸದಾ ಜನರ ಮಧ್ಯೆ ಇರುತ್ತಿದ್ದವನನ್ನ ವಾಚ್ ಮಾಡಿ ಒಂಟಿಯಾಗಿದ್ದಾಗಲೇ ಅವನ ಕಥೆ ಮುಗಿಸಿ ಹಂತಕರು ಎಸ್ಕೇಪ್ ಆಗಿದ್ದರು. ಇನ್ನೂ ಈ ಕೇಸ್ನ ತನಿಖೆ ನಡೆಸಿದ ಪೊಲೀಸರಿಗೆ(Police) ಹಂತಕರು ಒಂದೇ ಒಂದು ಸುಳಿವನ್ನ ಬಿಟ್ಟಿರಿಲ್ಲ. ಆದರೆ ಬೆಂಬಿಡದ ಪೊಲೀಸರು ಕೊಲೆಯಾಗಿ ಮೂರೇ ದಿನದಲ್ಲಿ ಹಂತಕರ ಹೆಡೆಮುರಿ ಕಟ್ಟಿದ್ರು. ವಿಠ್ಠಲ್ ಪೂಜಾರಿ ತಾನೇ ಅಣ್ಣಪ್ಪನನ್ನ ಕೊಂದಿದ್ದು ಅಂತ ಒಪ್ಪಿಕೊಂಡಿದ್ದ. ಇನ್ನೂ ಯಾಕೆ ಕಂದೆ ಅಂತ ಕೇಳಿದಾಗ ಆತ ಹೇಳಿದ್ದು 20 ಗುಂಟೆ ಜಮೀನಿನ ವಿಚಾರ. ಆದ್ರೆ ಆ 20 ಗುಂಟೆ ಜಮೀನಿಗೂ(Land) ಅಣ್ಣಪ್ಪನಿಗೂ ಯಾವುದೇ ಸಂಬಂಧವಿಲ್ಲ. ಆದ್ರೂ ಅಲ್ಲಿ ಅಣ್ಣಪ್ಪ ಬಲಿಯಾಗಿದ್ದ. ಉಪಾಧ್ಯಕ್ಷನಿಗೆ ಸಹಾಯ ಮಾಡಲು ಹೋಗಿ ಅಧ್ಯಕ್ಷ ಕೊಲೆಯಾಗಿ ಹೋಗಿದ್ದ. ವರ್ಷಗಳ ಹಿಂದೆ ಅಪಾಧ್ಯಕ್ಷ 20 ಗಂಟೆ ಜಮೀನನ್ನ ವಿಠ್ಠಲ್ ಪೂಜಾರಿ ಬಳಿ 9 ಲಕ್ಷ ಕೊಟ್ಟು ಖರೀಧಿಸಿದ್ದ. ಆದ್ರೆ ದುಡ್ಡ ಪಡೆದ ವಿಠ್ಠಲಾ ಜಮೀನು ಮಾತ್ರ ಕೊಟ್ಟಿರಲಿಲ್ಲ. ಕೇಳೋಕೆ ಹೋದ್ರೆ ಆವಾಜ್ ಹಾಕ್ತಿದ್ದ. ಇದೇ ಜಗಳದ ಕಾರಣ ಒಂದೆರಡು ಕೇಸ್ಗಳೂ ಆಗಿದ್ವು. ಆದ್ರೆ ಒಂದು ದಿನ ಉಪಾರ್ಧಯಕ್ಷ, ಅಧ್ಯಕ್ಷ ಅಣ್ಣಪನ ಬಳಿ ಸಮಸ್ಯೆಯನ್ನ ಹೇಳಿಕೊಂಡಿದ್ದ. ಸ್ನೇಹಿತನಿಗಾಗಿ ಅಣ್ಣಪ್ಪ ಆ ಸಮಸ್ಯೆಯನ್ನ ಬಗೆ ಹರಿಸಿದ್ದ ವಿಠ್ಠಲ್ನಿಂದ ಜಮೀನನ್ನ ಬಿಡಿಸಿಕೊಟ್ಟಿದ್ದ. ಇದೇ ದ್ವೆಷವನ್ನ ಇಟ್ಟುಕೊಂಡಿದ್ದ ವಿಠ್ಠಲ ತನ್ನ ಸಂಬಂಧಿಕರು ಮತ್ತು ಸ್ನೇಹಿತರ ಜೊತೆಗೂಡಿ ಸ್ಕೆಚ್ ರೆಡಿ ಮಾಡಿಯೇಬಿಟ್ಟ. ಊರ ಜನರಿಗೆ ಒಳ್ಳೆಯದು ಮಾಡ್ತಾ ನೊಂದವರು ಅನ್ಯಾಯಕ್ಕೊಳಗಾದವರ ಪರವಾಗಿ ಧ್ವನಿ ಎತ್ತಿ ಅವರಿಗೆ ನ್ಯಾಯ ಕೊಡಿಸುವ ಕೆಲಸ ಮಾಡ್ತಿದ್ದ ಅಣ್ಣಪ್ಪ ಇಂದು ಬೇರೆಯವರ ಸಲುವಾಗಿ ಕೊಲೆಯಾಗಿ ಹೋಗಿದ್ದಾನೆ.

ಇದನ್ನೂ ವೀಕ್ಷಿಸಿ:  Loksabha Eection 2024: ಬೆಳಗಾವಿ, ಉತ್ತರಕನ್ನಡದಲ್ಲಿ MES ಟೆನ್ಷನ್..! ಎರಡೂ ಪಕ್ಷಗಳಿಗೆ ಶುರು ಮತ ವಿಭಜನೆ ಸಂಕಷ್ಟ!