Katchatheevu Island Controversy: ಭಾರತದ ಭಾಗವಾಗಿದ್ದ ಕಚ್ಚತೀವು ಲಂಕಾ ಪಾಲಾಗಿದ್ದು ಹೇಗೆ..? ಏನಿದು ವಿವಾದ ?
1974ರಲ್ಲಿ ಭಾರತ ದ್ವೀಪವನ್ನು ಲಂಕಾಗೆ ಬಿಟ್ಟು ಕೊಟ್ಟ ಭಾರತ
ತಮಿಳುನಾಡನ ಮೇಲೆ ಪ್ರಧಾನಿ ಮೋದಿಗೆ ಹೆಚ್ಚಿದ ವಿಶೇಷ ಪ್ರೀತಿ
ತಮಿಳುನಾಡಲ್ಲಿ ಕಮಲ ಕೋಟೆ ಕಟ್ಟುವ ಹುಮ್ಮಸ್ಸಿನಲ್ಲಿ ಮೋದಿ
ಭಾರತಕ್ಕೆ ಸೇರಿದ್ದ ಕಚ್ಚತೀವು ದ್ವೀಪವನ್ನು ಎಪ್ಪತ್ತರ ದಶಕದಲ್ಲಿ ಶ್ರೀಲಂಕಾಗೆ(Srilanka) ಬಿಟ್ಟುಕೊಟ್ಟಿರುವ ವಿಚಾರ ಈಗ ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಪ್ರಧಾನಿ ನರೇಂದ್ರ ಮೋದಿ(Narendra Modi) ಸೇರಿದಂತೆ ಬಿಜೆಪಿಯ(BJP) ನಾಯಕರು ಈ ವಿಷಯದಲ್ಲಿ ಕಾಂಗ್ರೆಸ್(Congress) ವಿರುದ್ಧ ಹರಿಹಾಯುತ್ತಿದ್ದಾರೆ. ಎಲೆಕ್ಷನ್ ಸಂದರ್ಭದಲ್ಲಿ ಎದ್ದಿರುವು ಈ ವಿವಾದ ನ್ಯಾಷನಲ್ ಕಾಂಗ್ರೆಸ್ ಪಕ್ಷಕ್ಕೆ ನುಂಗಲಾರದ ತುತ್ತಾಗಿದೆ. ಈ ಕಚ್ಚತೀವು ದ್ವೀಪದ(Kachchatheevu) ಹೆಸರನ್ನು ನಾವು ಇಲ್ಲಿತನಕ ಕೇಳಿಯೇ ಇರಲಿಲ್ಲ. ಯಾಕೆಂದ್ರೆ, 70ರ ದಶಕದ ಸರ್ಕಾರ ಭಾರತದ ಇತಿಹಾಸ ಪುಸ್ತಕದಿಂದಲೇ ಕಚ್ಚತೀವು ದ್ವೀಪದ ಹೆಸರನ್ನು ಅಳಿಸಿ ಹಾಕಿತ್ತು. ಹೀಗಾಗಿ ಇಲ್ಲಿವರೆಗೂ ನಮಗ್ಯಾರಿಗೂ ಈ ದ್ವೀಪದ ಪರಿಚಯವೂ ಇರಲಿಲ್ಲ. ಆದ್ರೆ, ಈಗ ಈ ದ್ವೀಪದ ಕುರಿತು ದೇಶದಲ್ಲಿ ದೊಡ್ಡ ವಿವಾದ ಶುರುವಾಗಿದೆ. ಎಲೆಕ್ಷನ್‌ನ ಈ ಸಂದರ್ಭದಲ್ಲಿ ಈ ವಿವಾದ ಬಿಜೆಪಿಗೆ ಅಸ್ತ್ರದಂತಾದ್ರೆ. ಕಾಂಗ್ರೆಸ್ ಪಕ್ಷಕ್ಕೆ ನುಂಗಲಾರದ ಬಿಸಿ ತುಪ್ಪವಾಗಿದೆ. ಕಚ್ಚತೀವು ಎಂಬ ಹೆಸರಿನ ಈ ದ್ವೀಪ ಭಾರತ ಮತ್ತು ಶ್ರೀಲಂಕಾ ಮಧ್ಯೆದಲ್ಲಿದೆ. ಶ್ರೀಲಂಕಾದ ನೆಡುತೀವು ಮತ್ತು ಭಾರತದ ರಾಮೇಶ್ವರಂ ನಡುವಿನ ಸಮುದ್ರ ಭಾಗದಲ್ಲಿ ಈ ದ್ವೀಪವಿದೆ.
ಇದನ್ನೂ ವೀಕ್ಷಿಸಿ: Amit Shah calls Eshwarappa: ಬಂಡಾಯ ಸ್ಪರ್ಧೆ ಬೇಡ, ಬೇಡಿಕೆ ಈಡೇರಿಸೋಣ ಎಂದಿರುವ ಅಮಿತ್ ಶಾ : ಈಶ್ವರಪ್ಪ