ಆಪರೇಷನ್ ಲಾಡೆನ್ ಬಗ್ಗೆ ಪ್ರಸ್ತಾಪ ಬಂದಿದ್ದೇಕೆ..? ಅಮೆರಿಕಾದಂತೆ ವರ್ತಿಸಿತಾ ಭಾರತ..?

ದಿನೇ ದಿನೇ ಹೆಚ್ಚುತ್ತಿದೆ ಭಾರತ ಕೆನಡಾ ಬಿಕ್ಕಟ್ಟು..!
ಉಗ್ರಪೋಷಕರಾಗಿ ಬದಲಾಗುತ್ತಿದೆಯಾ ಕೆನಡಾ..?
ಖಲಿಸ್ತಾನಿಗಳ ಸ್ವರ್ಗದಲ್ಲಿ ಭಯೋತ್ಪಾದನೆಯ ಕಿಚ್ಚು
 

First Published Sep 25, 2023, 2:17 PM IST | Last Updated Sep 25, 2023, 2:17 PM IST

ಭಾರತ ಹಾಗೂ ಕೆನಡಾ ನಡುವಿನ ರಾಜತಾಂತ್ರಿಕ ಸಂಬಂಧ ದಿನೇ ದಿನೇ ಹದಗೆಡ್ತಾ ಇದೆ. ಕೆನಡಾ ಮಾಡಿದ ಒಂದೇ ಒಂದು ಆರೋಪದಿಂದ ಜಾಗತಿಕ ಮಟ್ಟದಲ್ಲಿ ಚರ್ಚೆ ಆಗ್ತಾ ಇದೆ. ಖಲಿಸ್ತಾನಿ ಕ್ರಿಮಿಯನ್ನ ಕೆನಡಾಕ್ಕೆ ನುಗ್ಗಿ ಭಾರತ ಹತ್ಯೆ ಮಾಡಿದೆ ಅನ್ನೋ ಆರೋಪ ಬಂದ ನಂತರ ಭಾರತವೂ ಖಡಕ್ ಆಗಿ ಉತ್ತರ ಕೊಟ್ಟಿದೆ. ಆದ್ರೆ ಈಗ ಭಾರತ(India) ಹಾಗೂ ಅಮೆರಿಕಾಕ್ಕೆ(America) ಹೋಲಿಕೆ ಮಾಡಿ ಕೆನಡಾ ರಾಜಕೀಯ ನಾಯಕನೊಬ್ಬ ಕೊಟ್ಟ ಹೇಳಿಕೆ ಭಾರಿ ಸದ್ದು ಮಾಡ್ತಾ ಇದೆ. ಬನ್ನಿ ಹಾಗಾದ್ರೆ ಏನದು ಕೆನಡಾದಿಂದ ಬಂದ ಕೆಂಡದಂತ ಮಾತು ಅನ್ನೋದನ್ನ ನೋಡೋಣ. ಕೆನಡಾ(Canada) ಹಾಗೂ ಭಾರತದ ನಡುವೆ ರಾಜತಾಂತ್ರಿಕ ಸಂಬಂಧಕ್ಕೆ ಸ್ವತಃ ಕೆನಡಾ ಕೊಡಲಿ ಏಟು ಕೊಟ್ಟು ಕಮಂಗಿ ಆಗ್ತಾ ಇದೆ. ಭಾರತದ ಮೇಲೆ ಹಗೆ ಸಾಧಿಸೋಕೆ ಖಲಿಸ್ತಾನಿಗಳ ಸ್ವರ್ಗ ಕೆನಡಾ ದಿನೆ ದಿನೇ ಸಮಯ ಸಾಧಕನ ಹಾಗೇ ವರ್ತಿಸ್ತಾ ಇದೆ. ಖಲಿಸ್ತಾನಿ ಉಗ್ರ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯನ್ನ ನೇರವಾಗಿ ಭಾರತದ ಮೇಲೆ ಹಾಕಿದ್ದ ಕೆನಡಾ ಪ್ರಧಾನಿ ಜಸ್ಟೀನ್ ಟ್ರುಡೋ(Justin Trudeau) ಜಾಗತಿಕವಾಗಿ ಚರ್ಚೆಯ ವಿಷಯವಾಗಿದ್ದಾನೆ. ಇನ್ನೊಂದು ಕಡೆ ಯಲ್ಲಿ ಕೆನಡಾದ ಮೈಕಲ್ ರೂಬಿನ್ ಹೇಳಿಕೆ ಇನ್ನೊಂದು ಹಂತದ ಚರ್ಚೆಯನ್ನ ಶುರು ಮಾಡಿದೆ.. ಅಮೆರಿಕಾದಲ್ಲಿ ಅವಳಿ ಕಟ್ಟಡಗಳ ಮೇಲೆ ದಾಳಿ ಮಾಡಿ ದೊಡ್ಡ  ಹಲ್ ಚಲ್ ಸೃಷ್ಟಿಸಿದ್ದ ಬಿನ್ ಲಾಡೆನ್ ಅನ್ನೋ ಮೋಸ್ಟ್ ವಾಂಟೆಡ್ ಉಗ್ರನನ್ನಪಾಕಿಸ್ತಾನದ ಅಬೋಟಾಬಾದ್ ನಲ್ಲಿ ಅಮೆರಿಕಾ ಸ್ಪೆಷಲ್ ಫೋರ್ಸ್ ಹತ್ಯೆ ಮಾಡಿತ್ತು.ಅದೇ ರೀತಿಯಲ್ಲಿ ಭಾರತ ಕೆನಡಾದಲ್ಲಿ ಹರ್ದೀಪ್ ಸಿಂಗ್ ನಿಜ್ಜರ್ ನನ್ನು ಹತ್ಯೆ ಮಾಡಿದೆ ಅನ್ನೋ ಮೂಲಕ ಸಂಚಲನ ಸೃಷ್ಟಿಸಿದ್ದಾರೆ. 

ಇದನ್ನೂ ವೀಕ್ಷಿಸಿ:  ಉಗ್ರ ಪನ್ನುಗೆ ಎನ್ಐಎ ತಪರಾಕಿ: 19 ಉಗ್ರರಿಗೂ ಎದುರಾಯ್ತು ಸಂಕಷ್ಟ !