ಉಗ್ರ ಪನ್ನುಗೆ ಎನ್ಐಎ ತಪರಾಕಿ: 19 ಉಗ್ರರಿಗೂ ಎದುರಾಯ್ತು ಸಂಕಷ್ಟ !
ಪಂಜಾಬ್‌ನ ಚಂಡೀಗಢದಲ್ಲಿನ ಪನ್ನು ಮನೆ ವಶಕ್ಕೆ
ಖಾನ್‌ಕೋಟ್‌ನಲ್ಲಿರುವ ಉಗ್ರನ ಕೃಷಿ ಭೂಮಿ ವಶಕ್ಕೆ
ಪನ್ನು ಆಸ್ತಿ-ಪಾಸ್ತಿಯವನ್ನು ವಶಕ್ಕೆ ಪಡೆದ ಸರ್ಕಾರ
ದಿನದಿನಕ್ಕೂ ಭಾರತ (India) ಮತ್ತು ಕೆನಡಾ(Canada) ನಡುವಿನ ರಾಜತಾಂತ್ರಿಕ ಬಿಕ್ಕಟ್ಟು ಜೋರಾಗ್ತಿದೆ. ಭಾರತದ ವಿರುದ್ಧ ನಿಂತಿರುವ ಕೆನಡಾಕ್ಕೆ ಭರ್ಜರಿ ತಿರುಗೇಟು ನೀಡಲಾಗಿದೆ. ಭಾರತದ ನಡೆ ಖಲಿಸ್ತಾನಿ ಉಗ್ರರಿಗೆ ಭಾರೀ ಪೆಟ್ಟು ಕೊಟ್ಟಿದೆ. ನಿಜ್ಜರ್ ಹತ್ಯೆಗೆ ಪ್ರತೀಕಾರದ ಮಾತಾಡಿದ್ದ ಖಲಿಸ್ತಾನಿ ಉಗ್ರನಿಗೆ ಶಾಕ್ ಕೊಡಲಾಗಿದೆ. ಸಿಖ್ಸ್ ಫಾರ್ ಜಸ್ಟಿಸ್ ಮುಖ್ಯಸ್ಥ ಗುರುಪತ್ವಂತ್ ಸಿಂಗ್ ಪನ್ನುಗೆ (Gurpatwant Singh Pannu) ತಪರಾಕಿ ಹಾಕಿದ್ದು, ಉಗ್ರ ಪನ್ನುಗೆ ಸೇರಿದ ಆಸ್ತಿಯನ್ನು ಎನ್ಐಎ ವಶಪಡಿಸಿಕೊಂಡಿದೆ. ಅಲ್ಲದೇ ದೇಶ ಬಿಟ್ಟು ಪರಾರಿಯಾದ 19 ಮಂದಿ ಖಲಿಸ್ತಾನ ಉಗ್ರರಿಗೂ ಸಂಕಷ್ಟ ಎದುರಾಗಿದೆ. 19 ಉಗ್ರರ ಆಸ್ತಿ ಮುಟ್ಟುಗೋಲಿಗೆ ಕ್ರಮ ಕೈಗೊಳ್ಳಲಾಗಿದೆ. 19 ಉಗ್ರರ ಪಟ್ಟಿ ಸಿದ್ಧಪಡಿಸಿ ಎನ್ಐಎ ಅಧಿಕಾರಿಗಳು ಕುಳಿತಿದ್ದಾರೆ.
ಇದನ್ನೂ ವೀಕ್ಷಿಸಿ: ರಾಮಮಂದಿರ ಉದ್ಘಾಟನೆಗೆ ದಿನಗಣನೆ: ಅಯೋಧ್ಯೆ ತಲುಪಿದ ಮಂಗಳೂರು ನಾಗಲಿಂಗ ಪುಷ್ಪ !