ಬಂಗಾಳ ಕೋಟೆಯಲ್ಲಿ ಮೊಳಗಿತು ಜೈ ಶ್ರೀರಾಮ್ ಘೋಷಣೆ, ರೊಚ್ಚಿಗೆದ್ದ ದೀದಿ, ವೇದಿಕೆಯಲ್ಲಿ ಹೈಡ್ರಾಮಾ!

ನೇತಾಜಿ ಸುಭಾಷ್‌ ಚಂದ್ರ ಬೋಸ್‌ ಅವರ 125 ನೇ ಜನ್ಮದಿನಾಚರಣೆ ಕಾರ್ಯಕ್ರಮದ ವೇಳೆ ಬಿಜೆಪಿ ಕಾರ್ಯಕರ್ತರು ಜೈ ಶ್ರೀರಾಮ್‌ ಎಂದು ಘೋಷಣೆ ಕೂಗಿದ್ದಕ್ಕೆ ಸಿಟ್ಟಾದ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಭಾಷಣ ಮಾಡಲು ನಿರಾಕರಿಸಿದ್ದಾರೆ. 

Share this Video
  • FB
  • Linkdin
  • Whatsapp

ಕೊಲ್ಕತ್ತಾ (ಜ. 25): ನೇತಾಜಿ ಸುಭಾಷ್‌ ಚಂದ್ರ ಬೋಸ್‌ ಅವರ 125 ನೇ ಜನ್ಮದಿನಾಚರಣೆ ಕಾರ್ಯಕ್ರಮದ ವೇಳೆ ಬಿಜೆಪಿ ಕಾರ್ಯಕರ್ತರು ಜೈ ಶ್ರೀರಾಮ್‌ ಎಂದು ಘೋಷಣೆ ಕೂಗಿದ್ದಕ್ಕೆ ಸಿಟ್ಟಾದ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಭಾಷಣ ಮಾಡಲು ನಿರಾಕರಿಸಿದ್ದಾರೆ. ಈ ಘಟನೆ ಇದೀಗ ಬಿಜೆಪಿ-ಟಿಎಂಸಿ ಪಕ್ಷಗಳ ನಡುವೆ ವಾಕ್ಸಮರಕ್ಕೆ ಜೈ ಶ್ರೀರಾಮ್ ಎಂಬ ಒಂದು ಘೋಷಣೆ ಭಾರೀ ಹೈಡ್ರಾಮಾ ಸೃಷ್ಟಿಸಿದೆ. 

ಬೈಡೆನ್ ಮಂತ್ರಿಮಂಡಲದಿಂದ ಇಬ್ಬರು ಭಾರತೀಯರಿಗೆ ಗೇಟ್ ಪಾಸ್, ಅಚ್ಚರಿ ಮೂಡಿಸಿದೆ ಕಾರಣ..!

ಮಮತಾ ಬ್ಯಾನರ್ಜಿ ಏನು ಮಾಡಿದರೋ ಅದು ಅವರ ಹಿಂದೂ ವಿರೋಧಿ ಮನೋಭಾವನೆ ಮತ್ತು ಓಲೈಕೆ ರಾಜಕಾರಣ ತೋರಿಸುತ್ತದೆ. ಶ್ರೀರಾಮ ಇಡೀ ದೇಶದ ಆತ್ಮವಿದ್ದಂತೆ. ಯಾರಾದರೂ ಜೈ ಶ್ರೀರಾಮ್‌ ಎಂದು ಘೋಷಣೆ ಕೂಗಿದರೆ ಅವರೇಕೆ ಸಿಟ್ಟಾಗಬೇಕು ಎಂದು ವಿಎಚ್‌ಪಿ ನಾಯಕ ಸುರೇಂದ್ರ ಜೈನ್‌ ಪ್ರಶ್ನಿಸಿದ್ದಾರೆ.

Related Video