ಅಷ್ಟ ದಿಕ್ಕುಗಳಲ್ಲೂ ಆಕ್ರಮಣ ಆಪ್ತಮಿತ್ರನ ಮಹಾಮೌನ.. ರಣರಂಗದಲ್ಲಿ ಏಕಾಂಗಿ ಪಾಕಿಸ್ತಾನ

ಪಾಕಿಸ್ತಾನದ ಮೇಲೆ ಅಷ್ಟ ದಿಕ್ಕುಗಳಿಂದ ಆಕ್ರಮಣ ನಡೆಯುತ್ತಿದ್ದು, ಚೀನಾ ಕೈಬಿಟ್ಟಿರುವುದರಿಂದ ಪಾಕಿಸ್ತಾನ ಏಕಾಂಗಿಯಾಗಿದೆ. ಭಾರತದ ಪ್ರತೀಕಾರದಿಂದಾಗಿ ಪಾಕಿಸ್ತಾನ ಭೂಪಟದಿಂದಲೇ ಅಳಿಸಿಹೋಗುವ ಸಾಧ್ಯತೆ ಇದೆಯೇ ಎಂಬ ಪ್ರಶ್ನೆ ಉದ್ಭವಿಸಿದೆ.

Share this Video
  • FB
  • Linkdin
  • Whatsapp

ಭಾರತವೀಗ ಅಕ್ಷರಶಃ ಗಾಯಗೊಂಡಿರೋ ಸಿಂಹ.. ಗೊತ್ತೇ ಇದ್ಯಲ್ಲಾ, ಗಾಯಗೊಂಡ ಸಿಂಹದ ಉಸಿರು ಘರ್ಜನೆಗಿಂತ ಭಯಂಕರ. ಭಾರತ ಕೊಡ್ತಾ ಇರೋ ಒಂದೊಂದು ಏಟುಗಳಿಗೆ ಪಾಕಿಸ್ತಾನ ಪತರಗುಟ್ಟಿ ಹೋಗ್ತಾ ಇದೆ. ಹಾಗಾದ್ರೆ ಹಿಂದೆಲ್ಲಾ ಪಾಕ್ ಬೆನ್ನಿಗೆ ನಿಂತು ಕಳ್ಳಾಟವಾಡ್ತಾ ಇದ್ದ ಚೀನಾ ಈಗ ಸುಮ್ಮನಿರೋದ್ಯಾಕೆ..? ಪಾಕಿಸ್ತಾನವನ್ನು ಡ್ರ್ಯಾಗನ್ ನಡು ನೀರಿನಲ್ಲಿ ಕೈ ಬಿಡ್ತಾ..? ಚೀನಾ ಮೌನ ರಹಸ್ಯವನ್ನು ತೋರಿಸ್ತೀವಿ ನೋಡಿ.

ವಿನಾಶ ಕಾಲೇ ವಿಪರೀತ ಬುದ್ಧಿ.. ಪಾಕಿಸ್ತಾನಕ್ಕೆ ಕಾದಿದೆ ಮತ್ತೊಂದು ಮರ್ಮಾಘಾತ.. ಅಷ್ಟ ದಿಕ್ಕುಗಳಲ್ಲೂ ಪಾಕಿಸ್ತಾನದ ಮೇಲೆ ಆಕ್ರಮಣ.. ಅಷ್ಟ ಚಕ್ರವ್ಯೂಹದಲ್ಲಿ ಬಂಧಿಯಾದ ಸೈತಾನ..! ಪಾಕ್ ಸೈನಿಕರ ತಲೆ ತೆಗೆದ ಬಲೂಚಿ ಬೆಂಕಿ.. ಕಷ್ಟಕಾಲದಲ್ಲಿ ಕೈ ಕೊಟ್ಟ ಚೀನಾ, .. ಏಕಾಂಗಿ ಪಾಪಿಸ್ತಾನ..! ಭಾರತ ಹೊತ್ತಿಸಿದ ಪ್ರತೀಕಾರದ ಜ್ವಾಲೆಗೆ ಸುಟ್ಟು ಭಸ್ಮವಾಗ್ತಾನಾ ಭಸ್ಮಾಸುರ..? ಭೂಪಟದಿಂದಲೇ ಅಳಿಸಿ ಹೋಗಲಿದ್ಯಾ ಭಿಕಾರಿ ದೇಶ..? ಹತ್ತಿರ ಬಂದೇ ಬಿಡ್ತಾ ಪಾಕಿಸ್ತಾನ ಸರ್ವನಾಶ..! ಇದೇ ಇವತ್ತಿನ ಸುವರ್ಣ ಸ್ಪೆಷಲ್, ಅಶ್ವಮೇಧ ವೀಕ್ಷಿಸಿ

Related Video