
Ram Mandir: ರಾಮ ಅಯೋಧ್ಯೆಗೆ ಬಂದಾಗ ಆದಂತಹ ಸಂತೋಷ ಈಗ ಆಗುತ್ತಿದೆ: ಗೋಪಾಲ್ ನಾಗರಕಟ್ಟೆ
ಜನವರಿ 22 ರಂದು ಭವ್ಯ ರಾಮ ಮಂದಿರ ಲೋಕಾರ್ಪಣೆಗೊಳ್ಳಲಿದ್ದು, ಈ ಬಗ್ಗೆ ವಿಶ್ವ ಹಿಂದೂ ಪರಿಷತ್‌ನ ಮುಖಂಡರಾದ ಗೋಪಾಲ್ ನಾಗರಕಟ್ಟೆ ಏಷ್ಯಾನೆಟ್ ಸುವರ್ಣ ನ್ಯೂಸ್ ಜೊತೆ ಮಾತನಾಡಿದ್ದಾರೆ.
ಜನವರಿ 22 ರಂದು ಅಭಿಜಿತ್ ಮೂಹೂರ್ತದಲ್ಲಿ ಶ್ರೀರಾಮ(Sri Ram) ಪ್ರತಿಷ್ಠಾಪನೆಗೊಳ್ಳಲಿದ್ದಾನೆ. ರಾಮ ಅಯೋಧ್ಯೆಗೆ ಬಂದಾಗ ಇದ್ದ ಸಂತೋಷ ಈಗ ಇದೆ ಎಂದು ಗೋಪಾಲ್ ನಾಗರಕಟ್ಟೆ(Gopal Nagarakatte) ಹೇಳಿದರು. ರಾಮನ ಮಂದಿರ(Rama Mandir) ಒಡೆಯುವುದರಿಂದ ಹಿಂದೂ ಧರ್ಮವನ್ನು ಸಂಪೂರ್ಣ ನಷ್ಟ ಮಾಡಬಹುದು ಎಂದು ಬಾಬರ್‌ಗೆ ಅನಿಸಿತ್ತು. ಹಾಗಾಗಿ ಅದನ್ನ ಒಡೆದ. ಹಿಂದೂಗಳು ರಾಷ್ಟ್ರ, ಧರ್ಮದ ಮೇಲಿನ ಅಪಮಾನವನ್ನು ಸಹಿಸಲಾರರು. ಈ ಮಂದಿರಕ್ಕಾಗಿ 500 ವರ್ಷಗಳಿಂದ ನಿರಂತ ಹೋರಾಟ ನಡೆದಿದೆ. ಮೂಲೆ ಮೂಲೆಯಿಂದ ಇಲ್ಲಿಗೆ ಜನ ಬರುತ್ತಿದ್ದಾರೆ ಎಂದು ಗೋಪಾಲ್ ನಾಗರಕಟ್ಟೆ ಹೇಳುತ್ತಾರೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಇದನ್ನೂ ವೀಕ್ಷಿಸಿ: Today Horoscope: ಈ ರಾಶಿಯವರಿಗೆ ವೃತ್ತಿಯಲ್ಲಿ ಸ್ಥಾನಮಾನ ಹೆಚ್ಚಳವಾಗಲಿದ್ದು, ಹಣಕಾಸಿನ ತೊಂದರೆ ಆಗಲಿದೆ..