40 ಚುನಾವಣೆಗಳು, 22 ವಿಜಯಗಳು, ಮೋದಿ ನವಾಶ್ವಮೇಧ..! ಜಾಗತಿಕ ನಾಯಕರನ್ನು ಮೀರಿಸಿದ್ದು ಹೇಗೆ ಗಜಕೇಸರಿ..?
ನವಾಶ್ವಮೇಧದಲ್ಲಿ ಮೋದಿ ಅಜೇಯ..ಬಿಜೆಪಿ ದಿಗ್ವಿಜಯ..!
ಜಾಗತಿಕ ಸಮೀಕ್ಷೆಯಲ್ಲಿ ಮತ್ತೆ ಪ್ರಧಾನಿ ಮೋದಿ ಮೇನಿಯಾ..!
ಮೋದಿ ಜನಪ್ರಿಯತೆಯ ಹಿಂದಿದೆ ಆ ಅದೃಶ್ಯ ಶಕ್ತಿಯ ಶ್ರೀರಕ್ಷೆ..!
ಜಗತ್ತಿಗೆ ಮೋದಿಯೇ ನಂ.1 ಲೀಡರ್. 9 ವರ್ಷಗಳ ನವಾಶ್ವಮೇಧ. ಮೋದಿ ಅಶ್ವಮೇಧಕ್ಕೆ ಸಿಕ್ಕಿದ್ದು 22 ವಿಜಯಗಳು. 9 ಘಟಾನುಘಟಿ ಕಿರೀಟಗಳೇ ಉರುಳಿದ್ರೂ, ಮೋದಿ ಮಾತ್ರ ಇಂದಿಗೂ ಅಜೇಯ. ಜಾಗತಿಕ ನಾಯಕರ ಪೈಕಿ ಮೋದಿಯೇ (Narendra Modi) ಅಗ್ರಗಣ್ಯ. ಇದು ಸಮೀಕ್ಷೆ ಬಿಚ್ಚಿಟ್ಟ ರಹಸ್ಯ. ಪ್ರಧಾನಿ ನರೇಂದ್ರ ಮೋದಿ ಭರತ ಖಂಡದ ಸಾಟಿಯಿಲ್ಲದ ನಾಯಕ(Leader). ಮೋದಿ ನಾಯಕತ್ವಕ್ಕೆ ಸಡ್ಡು ಹೊಡೆಯಬಲ್ಲ ಮತ್ತೊಬ್ಬ ಲೀಡರ್ ದೇಶದಲ್ಲೇ ಇಲ್ಲ. ಇದೇ ಕಾರಣದಿಂದ ಕಳೆದ 9 ವರ್ಷಗಳಿಂದ ರಾಷ್ಟ್ರ ರಾಜಕಾರಣದಲ್ಲಿ ಮೋದಿ ಅಜೇಯ. 2014ರಲ್ಲಿ ಶುರುವಾಗಿರೋ ಮೋದಿ ಅಶ್ವಮೇಧದ ಕುದುರೆಯನ್ನು ಕಟ್ಟಿ ಹಾಕಬಲ್ಲ ಗಟ್ಟಿಗ ಮತ್ತೊಬ್ಬನಿಲ್ಲ. ಪ್ರೈಮ್ ಮಿನಿಸ್ಟರ್ ನರೇಂದ್ರ ಮೋದಿ ಭಾರತದಲ್ಲಷ್ಟೇ ಅಲ್ಲ, ಇಡೀ ಜಗತ್ತಿನಲ್ಲೇ ನಂ.1 ಲೀಡರ್. ಸಮೀಕ್ಷೆಗಳ ಮೇಲೆ ಸಮೀಕ್ಷೆಗಳು ನಡೆಯಲಿ, ಪರೀಕ್ಷೆಗಳ ಮೇಲೆ ಅಗ್ನಿಪರೀಕ್ಷೆಗಳೇ ಎದುರಾಗಲಿ.ಮೋದಿ ದಿನದಿಂದ ದಿನಕ್ಕೆ ಪ್ರಜ್ವಲಿಸುತ್ತಲೇ ಇದ್ದಾರೆ. ಈಗ ಬಿಡುಗಡೆಯಾಗಿರೋ ಮತ್ತೊಂದು ಅಂತರಾಷ್ಟ್ರೀಯ ಸಮೀಕ್ಷೆಯೂ(Global Survey) ಇದನ್ನೇ ಹೇಳ್ತಾ ಇದೆ. ಜಗತ್ತಿನ ಅತ್ಯಂತ ಜನಪ್ರಿಯ ನಾಯಕರ ಪೈಕಿ ಮೋದಿ ಅಗ್ರಗಣ್ಯ ಅನ್ನೋ ಸತ್ಯವನ್ನು ಆ ಸಮೀಕ್ಷೆ ಬಿಚ್ಚಿಟ್ಟಿದೆ. ನರೇಂದ್ರ ಮೋದಿ ಪ್ರಧಾನಿ ಪಟ್ಟಕ್ಕೇರಿದ್ದು 2014ರ ಮೇ 26ರಂದು. ಅಲ್ಲಿಂದ ಶುರುವಾದ ಮೋದಿ ಅಶ್ವಮೇಧಕ್ಕೀಗ 9 ವರ್ಷ. ಈ 9 ವರ್ಷಗಳಲ್ಲಿ ಎಷ್ಟೋ ಸಿಂಹಾಸನಗಳು ಉದುರಿ ಹೋಗಿವೆ. ಅದೆಷ್ಟೋ ಕಿರೀಟಗಳು ಚದುರಿ ಹೋಗಿವೆ. ವಿಶ್ವನಾಯಕರು ಅಂತ ಕರೆಸಿಕೊಂಡವರೇ ಹೇಳ ಹೆಸರಿಲ್ಲದಂತೆ ಸೋತು ಸುಣ್ಣವಾಗಿ ಹೋಗಿದ್ದಾರೆ. ಹೀಗೆ ಉದುರಿ, ಚದುರಿ ಹೋದವರ ಮಧ್ಯೆ ರಾಜಗಾಂಭೀರ್ಯದಿಂದ ಸಾಗುತ್ತಿರೋ ಸಿಂಗಲ್ ಸಿಂಹ ನರೇಂದ್ರ ಮೋದಿ.
ಇದನ್ನೂ ವೀಕ್ಷಿಸಿ: ಅದು ಸಂಸದನ ಮನೆ ಅಲ್ಲ..ಕೋಟಿ ನೋಟಿನ ಕೋಟೆ..! ದುಡ್ಡಿನ ಸಾಮ್ರಾಜ್ಯ ಕಟ್ಟಿದ್ದು ಹೇಗೆ ಕಾಂಗ್ರೆಸ್ ಮುಖಂಡ..?