Asianet Suvarna News Asianet Suvarna News

ಅದು ಸಂಸದನ ಮನೆ ಅಲ್ಲ..ಕೋಟಿ ನೋಟಿನ ಕೋಟೆ..! ದುಡ್ಡಿನ ಸಾಮ್ರಾಜ್ಯ ಕಟ್ಟಿದ್ದು ಹೇಗೆ ಕಾಂಗ್ರೆಸ್ ಮುಖಂಡ..?

ದುಡ್ಡು ಎಣಿಸೋಕಾಗದೆ ಮಿಷಿನ್‌ ಕೆಟ್ಟೋಯ್ತು!
ಕಾಸಿನ ಕೋಟೆ ನೋಡಿ ಅಧಿಕಾರಿಗಳೇ ಸುಸ್ತು!
ಇದು ಸಂಸದನ ಮನೆ ಅಲ್ಲ,ನೋಟಿನ ಕೋಟೆ!

ಅದು ಸಂಸದನ ಮನೆ ಅಲ್ಲ. ಕೋಟಿ ಕೋಟಿ ನೋಟಿನ ಕೋಟೆ. ಆ ದುಡ್ಡಿನ ಸಾಮ್ರಾಜ್ಯ ಕಟ್ಟಿದ್ದು ಹೇಗೆ ಕಾಂಗ್ರೆಸ್(Congress) ಮುಖಂಡ ಧೀರಜ್ ಸಾಹು..? ದುಡ್ಡು ಎಣಿಸಿ ಅಧಿಕಾರಿಗಳೇ ಸುಸ್ತಾದ್ರು. ನೋಟಿನ ಮೆಷಿನ್ನೇ ಢಮಾರ್ ಆಯ್ತು. ಆದ್ರೂ ಮುಗಿದಿಲ್ಲ ದುಡ್ಡು ಎಣಿಸೋ ಕೆಲಸ. ಧೀರಜ್ ಸಾಹು(Dheeraj Sahu) ಒಡಿಶಾದ (Odisha) ಕಾಂಗ್ರೆಸ್ ಸಂಸದ. ಅಕ್ರಮ ಆಸ್ತಿಗಳಿಕೆ ಅನುಮಾನದ ಮೇಲೆ ಐಟಿ ಪಡೆ ಸಾಹುಗೆ ಸಂಬಂಧಪಟ್ಟ ಹತ್ತಾರು ಕಡೆ ದಾಳಿ ನಡೆಸಿತ್ತು. ದಾಳಿ ನಡೀವಾಗ ಇಂಥದ್ದೊಂದು ಆಘಾತಕಾರಿ, ಅಚ್ಚರಿ ಬೇಟೆ ನಡೆಯಲಿದೆ ಅನ್ನೋದು ಅವರಿಗೂ ಗೊತ್ತಿರ್ಲಿಲ್ವೋ ಏನೋ. ಆದ್ರೆ, ಧೀರಜ್ ಸಾಹು ಹಾಗೂ ಅವರ ಆಪ್ತರ ಮನೆಗಳ ಮೇಲೆ ರೈಡ್ ನಡೆದಾಗ, ನೋಟಿನ ದೇವತೆ ಅವರ ಮನೆಗಳಲ್ಲಿ ತಾಂಡವ ಆಡ್ತಾ ಇದ್ಲು. ಒಂದಲ್ಲಾ ಎರಡಲ್ಲಾ, ಬರೋಬ್ಬರಿ ನಾಲ್ಕು ದಿನಗಳಿಂದಲೂ ನಡೀತಿರೋ ರೈಡ್ ಇದು. ಒಡಿಶಾ, ಜಾರ್ಖಂಡ್, ದೆಹಲಿ(Delhi) ಈ ಮೂರೂ ರಾಜ್ಯಗಳಲ್ಲಿ, ಧಿರಜ್ ಸಾಹು ನಿಗೂಢ ವ್ಯವಹಾರ ನಡೆಸಿದ್ದಾರೆ ಅನ್ನೋ ಮಾಹಿತಿ ಇದೆ. ಅದರ ಆಧಾರದ ಮೇಲೇ ಹೆಚ್ಚುಕಮ್ಮಿ ಒಂದು ಡಜನ್ ಜಾಗಗಳಲ್ಲಿ ಶೋಧ ಕಾರ್ಯ ನಡೀತಿದೆ. ಈ ಶೋಧ ಇನ್ನೂ ಅದೆಷ್ಟು ಕಾಲ ನಡೆಯುತ್ತೋ ಗೊತ್ತಿಲ್ಲ. ಅದರಿಂದ ಮತ್ತೆಷ್ಟು ಹಣ ಸಿಗುತ್ತೋ ಹೇಳೋಕ್ಕಾಗಲ್ಲ. ಆದ್ರೆ ಇದುವರೆಗು ಸಿಕ್ಕಿರೋ ದುಡ್ಡನ್ನ ಲೆಕ್ಕ ಮಾಡಿ ಹೇಳೋಕೇ ಇನ್ನೂ ಒಂದೆರಡು ದಿನ ಬೇಕಾಗುತ್ತೆ ಅಂತಿದ್ದಾರೆ ಅಧಿಕಾರಿಗಳು. ಈ ಪರಿ ಲೆಕ್ಕಕ್ಕೆ ಸಿಗದ ದುಡ್ಡು ಪತ್ತೆಯಾಗಿರೋದು, ಕಾಂಗ್ರೆಸ್ ಶಾಸಕರ ಮನೆಯಲ್ಲಿ. 300 ಕೋಟಿಗೂ ಅಧಿಕ ಅಕ್ರಮ ಹಣ ಪತ್ತೆಯಾಗಿದೆ. ಇನ್ನೂ 10 ಕೋಣೆಗಳು ಮಾತ್ರ ತೆರೆಯಲ್ಪಟ್ಟಿವೆ, ಇನ್ನೂ 10 ಬಾಕಿ ಇದೆ. ಈ ಹಣವೆಲ್ಲಾ ಜಾರ್ಖಂಡ್, ಛತ್ತಿಸ್‌ಗಢ್ ಲೂಟಿ ಮಾಡಿ ಸಂಗ್ರಹಿಸಿರೋ ದುಡ್ಡು. ಈ ಬಗ್ಗೆ ಇಡಿ ತನಿಖೆ ನಡೆಸಲಿ. ಆಗ ಗಾಂಧಿ ಪರಿವಾರದ ನಂಟು ಬೆಳಕಿದೆ ಬರುತ್ತೆ. ಈ ಹಣವನ್ನ ಕಾಂಗ್ರೆಸ್ ಚುನಾವಣೆಗೆ ಅಂತ ಬಚ್ಚಿಟ್ಟಿತ್ತು. ತನಿಖೆ ನಡೆದರೆ ಕಾಂಗ್ರೆಸ್ ಬಂಡವಾಳ ಬಯಲಾಗುತ್ತೆ. ಈ 200 ಕೋಟಿ 2000 ಕೋಟಿ ದಾಟಿದರೂ ಆಶ್ಚರ್ಯವಿಲ್ಲ.

ಇದನ್ನೂ ವೀಕ್ಷಿಸಿ:  10 ಎಕರೆ ಜಮೀನು ಕೊಲೆಗೆ ಕಾರಣವಾಯ್ತಾ..? ನಾಯ್ಕೋಡಿ VS ಪಾಟೀಲ್ ದ್ವೇಷದ ಕಿಚ್ಚು..!