10ರಲ್ಲಿ 8 ಮಂದಿಗೆ ಮತ್ತೆ ಮೋದಿಯೇ ಪ್ರಧಾನಿಯಾಗ್ಬೇಕಂತೆ..! ಮೋದಿ ಆಡಳಿತದ ಬಗ್ಗೆ ಹೇಳೋದೇನು ವಿದೇಶಿಗರು?

ಟರ್ಮಿನೇಟ್‌ಗೆ ಸೋಲಿಲ್ಲ ಅಂತಿದೆ ಬಿಜೆಪಿ!
ಮೋದಿಯೇ ಮತ್ತೆ ಗೆಲ್ತಾರೆ ಅಂತಿದೆ ಸರ್ವೆ!
ಈ ಬಾರಿ ಗೆಲುವು ಅಷ್ಟು ಸುಲಭವಾ..?

Share this Video
  • FB
  • Linkdin
  • Whatsapp

ಲೋಕಸಭಾ ಎಲೆಕ್ಷನ್‌ಗೆ(Loksabha election) ಇನ್ನೂ ಹತ್ತು ತಿಂಗಳು ಬಾಕಿ ಇದೆ. ಅಷ್ಟರಲ್ಲೇ ಈಗ ಮತ್ತೊಂದು ಸರ್ವೆ ಹೊರಬಂದಿದೆ. ದೇಶದಲ್ಲಿ ಲೋಕಸಮರ ನಡೆಯೋದಕ್ಕೆ ಬಾಕಿ ಇರೋದು, ಹತ್ತೋ ಹನ್ನೊಂದೊ ತಿಂಗಳಷ್ಟೇ. ಈ ಅವಧಿ ಚುನಾವಣೆ ಅನ್ನೋ ಮಹಾಮ್ಯಾಜಿಕ್‌ಗೆ ಅತಿ ಕಡಿಮೆ. ಈಗಿಂದಲೇ ತಾಲೀಮು ಶುರುಮಾಡಿಕೊಂಡ್ರೆ ಮಾತ್ರ, ಗದ್ದುಗೆ ಹತ್ತೋಕೆ ಹಾದಿ ಸುಗಮವಾಗುತ್ತೆ. ಆದ್ರೆ ಸಧ್ಯದ ಪರಿಸ್ಥಿತಿಲಿ ಜನರ ಒಲವು ಯಾರ ಕಡೆಗಿದೆ ಅನ್ನೋ ಕುತೂಹಲಕ್ಕೆ ಉತ್ತರ ಕಂಡುಕೊಳ್ಳೋಕೆ ಒಂದು ಸಮೀಕ್ಷೆ ನಡೆದಿದೆ. ಆ ಸಮೀಕ್ಷೆ(Survey) ನಿಜಕ್ಕೂ ಅಚ್ಚರಿಯ ಸಂಗತಿಗಳನ್ನ ಹೊರಹಾಕಿದೆ. ಈ ಸಮೀಕ್ಷೆಯಲ್ಲಿ ಕೆಲವೊಂದಷ್ಟು ಪರಿಣಾಮಕಾರಿ ಮತ್ತು ಪ್ರಭಾವಶಾಲಿ ಅಂಶಗಳು ಬಯಲಾಗಿದ್ದಾವೆ. ಕೇವಲ ಯಾವ ರಾಜ್ಯದಲ್ಲಿ ಯಾರ ಕಡೆ ಅತಿ ಹೆಚ್ಚು ಒಲವಿದೆ ಅನ್ನೋದಷ್ಟೇ ಅಲ್ಲದೆ, ವಿದೇಶಗಳಲ್ಲಿ, ಭಾರತದ ಪ್ರಧಾನಿಗಳ ಬಗ್ಗೆ ಏನು ಅಭಿಪ್ರಾಯವಿದೆ ಅನ್ನೋದರ ಅಂಕಿಅಂಶ ಕೂಡ ಇಲ್ಲಿ ಲಭ್ಯವಿದೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇದನ್ನೂ ವೀಕ್ಷಿಸಿ:  ಕಬಡ್ಡಿ ಆಟಗಾರನ ಆತ್ಮಹತ್ಯೆಗೆ ಬಿಗ್ ಟ್ವಿಸ್ಟ್: ವಾಟ್ಸಪ್‌ನಲ್ಲಿ ರಿವಿಲ್ ಆಯ್ತು ಅಸಲಿ ಸತ್ಯ

Related Video