Asianet Suvarna News Asianet Suvarna News

ಕಬಡ್ಡಿ ಆಟಗಾರನ ಆತ್ಮಹತ್ಯೆಗೆ ಬಿಗ್ ಟ್ವಿಸ್ಟ್: ವಾಟ್ಸಪ್‌ನಲ್ಲಿ ರಿವಿಲ್ ಆಯ್ತು ಅಸಲಿ ಸತ್ಯ

ಮಂಗಳೂರಿನ ಕಬಡ್ಡಿ ಆಟಗಾರ ಸ್ವರಾಜ್ ಆತ್ಮಹತ್ಯೆ
ಲೋನ್ ಆ್ಯಪ್ ಕಿರುಕುಳಕ್ಕೆ ಯುವಕ ಸ್ವರಾಜ್ ಬಲಿ
ಮಗುವಿನ ಫೋಟೋ ಹಾಕಿ ಕಿರುಕುಳ ನೀಡಿದ ಆರೋಪ 

ಮಂಗಳೂರು: ಇಲ್ಲಿನ ಕಬಡ್ಡಿ ಆಟಗಾರ ಸ್ವರಾಜ್ ಆತ್ಮಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಈತನ ಸಾವಿಗೆ ಕಾರಣವೇನು ಎಂಬುದು ವಾಟ್ಸಪ್‌ನಲ್ಲಿ ರಿವೀಲ್ ಆಗಿದೆ.ಈ ಮೂಲಕ ಆತ್ಮಹತ್ಯೆ ಹಿಂದಿನ ಅಸಲಿ ಸತ್ಯ ಬಯಲಾಗಿದೆ. ಲೋನ್ ಆ್ಯಪ್ ಕಿರುಕುಳಕ್ಕೆ ಕಬ್ಬಡಿ ಆಟಗಾರ ಸ್ವರಾಜ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಇದೀಗ ತಿಳಿದುಬಂದಿದೆ. ಈತ ಗುರುವಾರ ಆತ್ಮಹತ್ಯೆಗೆ ಶರಣಾಗಿದ್ದ. ಲೋನ್ ಆ್ಯಪ್‌ಗಳಿಂದ ಸಾಲ ಪಡೆದಿದ್ದ ಸ್ವರಾಜ್‌ಗೆ, ನಿನ್ನೆ ಮಧ್ಯಾಹ್ನದೊಳಗೆ ಸಾಲ ಪಾವತಿಗೆ ಡೆಡ್‌ಲೈನ್‌ ನೀಡಲಾಗಿತ್ತು. ಆ್ಯಪ್‌ನಲ್ಲಿ ಸ್ವರಾಜ್ ಅಕ್ಕನ ಮಗುವಿನ ಫೋಟೋ ಹಾಕಿ ಕಿರುಕುಳ ನೀಡಲಾಗುತ್ತಿತ್ತು ಎಂಬ ಆರೋಪ ಸಹ ಕೇಳಿಬಂದಿದೆ. ‘Baby for sale’ ಎಂದು ಮಗುವಿನ ಫೋಟೋ ಹಾಕಿ ಕಿರುಕುಳ ನೀಡುತ್ತಿದ್ದರು ಎನ್ನಲಾಗ್ತಿದೆ. ಸ್ವರಾಜ್‌ ಕಾಂಟ್ಯಾಕ್ಟ್‌ ಲಿಸ್ಟ್‌ನಲ್ಲಿ ಇರುವವರಿಗೆ ಈ ಫೋಟೋ ಫಾರ್ವರ್ಡ್‌ ಮಾಡಲಾಗಿದೆ. ಪೋಟೋ ನೋಡಿ ಆ.30 ರಂದು 30 ಸಾವಿರ ಕಟ್ಟಿದ್ದರು. ಆದ್ರೆ ಒತ್ತಡ ತಾಳಲಾರದೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗ್ತಿದೆ.

ಇದನ್ನೂ ವೀಕ್ಷಿಸಿ:  Ram Mandir: ರಾಮ ಮಂದಿರ ನಿರ್ಮಾಣದ ಬಗ್ಗೆ ನೃಪೇಂದ್ರ ಮಿಶ್ರಾ ಹೇಳಿದ್ದೇನು ?