Asianet Suvarna News Asianet Suvarna News

ಪಂಚ ಕುರುಕ್ಷೇತ್ರವೇ ನಿರ್ಧರಿಸುತ್ತಾ ಮಹಾಭಾರತ ಭವಿಷ್ಯ?

ರಾಜಕೀಯ ಇತಿಹಾಸ ಬಿಚ್ಚಿಡುತ್ತಿದೆ ಅಚ್ಚರಿಯ ಕತೆ!
5 ರಾಜ್ಯಗಳ ಚುನಾವಣೆಯಿಂದ ನಿಶ್ಚಯವಾಗೋದೇನು..?
ಪಂಚರಾಜ್ಯ ಅಗ್ನಿಪರೀಕ್ಷೆ.. ಲೋಕಸಮರ ಸತ್ವ ಪರೀಕ್ಷೆ!

ಪಂಚರಾಜ್ಯ ಚುನಾವಣಾ ರಿಸಲ್ಟ್, ಯಾರಿಗೆ ಯಾಕೆ ಎಷ್ಟು  ಇಂಪಾರ್ಟೆಂಟ್..? 2 ರಾಜ್ಯಗಳ ಮೇಲೆ ಕೇಸರಿ ಪಡೆ ಕಣ್ಣಿಟ್ಟಿದೆ. ಇನ್ನೊಂದು ರಾಜ್ಯದಲ್ಲಿ ಸಾಮ್ರಾಜ್ಯ ವಿಸ್ತರಿಸೋಕೆ ಹಸ್ತ ಪಡೆ ಕಾಯ್ತಾ ಇದೆ. ಐದು ರಾಜ್ಯಗಳ ಚುನಾವಣೆ ಅನ್ನೋದು, ರಾಜಕೀಯ ಪಕ್ಷಗಳ ಪಾಲಿಗೆ ಅಕ್ಷರಶಃ ಅಗ್ನಿ ಪರೀಕ್ಷೆ. ಬರೀ ಅಗ್ನಿಪರೀಕ್ಷೆಯಲ್ಲ. ಲೋಕಸಂಗ್ರಾಮ ಅನ್ನೋ ಮಹಾಯುದ್ಧಕ್ಕೆ ಸತ್ವಪರೀಕ್ಷೆ. ಈ ಐದೂ ರಾಜ್ಯಗಳಲ್ಲಿ ಚುನಾವಣೆ ನಡೆದಿದೆ. ಅದರ ಫಲಿತಾಂಶ ಹೊರಬೀಳೋಕೆ ಕೆಲವೇ ಕೆಲವು ಗಂಟೆಗಳಷ್ಟೇ ಬಾಕಿ. ನಾಳೆ ಈ ಹೊತ್ತಿಗಾಗ್ಲೇ, ಯಾವ ರಾಜ್ಯದಲ್ಲಿ ಯಾರು ಅಧಿಕಾರ ಸ್ಥಾಪನೆ ಮಾಡಲಿದ್ದಾರೆ ಅನ್ನೋದು ಗೊತ್ತಾಗಿಹೋಗಿರುತ್ತೆ. ಅಷ್ಟೇ ಅಲ್ಲ, ರಾಷ್ಟ್ರ ರಾಜಕಾರಣದಲ್ಲಿ ಗೆಲುವು ಯಾರ ಕಡೆಗಿದೆ ಅನ್ನೋದು ಸಹ ಜಗಜ್ಜಾಹೀರಾಗಿಬಿಡುತ್ತೆ. ಈಗ ನಡೆದಿರೋ ಚುನಾವಣೆನಾ ಬರೀ ಚುನಾವಣೆ ಥರ ಯಾರೂ ನೋಡ್ತಾ ಇಲ್ಲ.. ಇದು ಲೋಕಸಭಾ ಚುನಾವಣೆ ಅನ್ನೋ ಮಹಾಫಿನಾಲೆಗೆ ಸೆಮಿ ಫೈನಲ್ ಥರ. ಇಲ್ಲಿ ಗೆದ್ದವರಿಗೆ ಅಲ್ಲೂ ಗೆಲುವು ನಿಶ್ಚಿತ ಅನ್ನೋದು ರಾಜಕೀಯ ಗಣಿತಜ್ಞರ ಅಭಿಪ್ರಾಯ.. ಒಂದರ್ಥದಲ್ಲಿ ನೋಡೋದಾದ್ರೆ, ಈ ಚುನಾವಣೆ ಮಹಾಚುನಾವಣೆಗೆ ದಿಕ್ಸೂಚಿ ಇದ್ದ ಹಾಗೆ.. ಯಾವ ಪಕ್ಷದ ಟ್ರೆಂಡ್ ಹೇಗಿದೆ ಅನ್ನೋದು ಗೊತ್ತಾಗಿಬಿಡುತ್ತೆ. 1998ರಿಂದಲೂ ಲೋಕಸಭಾ ಚುನಾವಣೆಗೆ ಇನ್ನೊಂದ್ ವರ್ಷ ಬಾಕಿ ಇದೆ ಅನ್ನುವಾಗ್ಲೇ, ಕೆಲವು ರಾಜ್ಯಗಳ ಚುನಾವಣೆ ನಡೀತಿತ್ತು.. ಅದರಲ್ಲೂ, 2003ರ ಬಳಿಕ, ಆ ಅಂತರ 6 ತಿಂಗಳಿಗೆ ಇಳಿದಿದೆ.. ಕನಿಷ್ಟ ನಾಲ್ಕೈದು ರಾಜ್ಯಗಳಲ್ಲಿ ಲೋಕಸಭೆಗೂ ಮುನ್ನ ಚುನಾವಣೆ ನಡೆಯುತ್ತೆ.. ಅದರಲ್ಲೂ ಮುಖ್ಯವಾಗಿ ಮಧ್ಯಪ್ರದೇಶ, ರಾಜಸ್ತಾನ ಹಾಗೂ ಛತ್ತಿಸ್ಗಢ, ಈ ಮೂರೂ ಹಿಂದಿ ಹಾರ್ಟ್ ಲ್ಯಾಂಡ್ ಅಂತ ಕರೆಸಿಕೊಳ್ಳೋ ರಾಜ್ಯಗಳಲ್ಲಿ ಚುನಾವಣೆ ನಡೆಯೋದು ವಾಡಿಕೆಯಂತಾಗಿದೆ.. ಅವುಗಳ ಪರಿಣಾಮ, ಲೋಕಸಭೆಲಿ ಯಾವ ರೀತಿ ಪರಿಣಾಮ ಬೀರಲಿದೆ ಅನ್ನೋದು, ನಿಮಗೆ ನಾವು ಹೇಳೋ ಕತೆ ಕೇಳಿದ್ರೆ ಗೊತ್ತಾಗಿಬಿಡತ್ತೆ.

ಇದನ್ನೂ ವೀಕ್ಷಿಸಿ:  ಅಕ್ಕನಿಗೆ ಬುದ್ಧಿವಾದ ಹೇಳಿದ್ದೇ ತಪ್ಪಾಗಿಹೊಯ್ತಾ..? ಆಡುತ್ತಿದ್ದ ಮಕ್ಕಳನ್ನ ಕಿಡ್ನ್ಯಾಪ್ ಮಾಡಿದಳು..!

Video Top Stories