Asianet Suvarna News Asianet Suvarna News

ಅಕ್ಕನಿಗೆ ಬುದ್ಧಿವಾದ ಹೇಳಿದ್ದೇ ತಪ್ಪಾಗಿಹೊಯ್ತಾ..? ಆಡುತ್ತಿದ್ದ ಮಕ್ಕಳನ್ನ ಕಿಡ್ನ್ಯಾಪ್ ಮಾಡಿದಳು..!

ಅಕ್ಕನಿಗೆ ಬುದ್ಧಿವಾದ ಹೇಳಿದ್ದೇ  ತಪ್ಪಾಗಿಹೊಯ್ತಾ..?
ತಂಗಿಯ ಮೇಲಿನ ಕೋಪಕ್ಕೆ ಮಗನನ್ನ ಮುಗಿಸಿದ್ಲು..!
ಚಿಕ್ಕಬಳ್ಳಾಪುರದಲ್ಲಿ ಕಿಡ್ನ್ಯಾಪ್ ಬೆಂಗಳೂರಲ್ಲಿ ಅರೆಸ್ಟ್..!


ಅವಳು ಕೂಲಿ ಮಾಡಿಕೊಂಡು ಇಬ್ಬರು ಮಕ್ಕಳನ್ನ ಸಾಕುತ್ತಿದ್ದಳು. ಗಂಡ ಆಕೆಯನ್ನ ಬಿಟ್ಟು ಹೋದಮೇಲೆ ಅವಳೇ ಕುಟುಂಬದ ಜವಾಬ್ದಾರಿ ಹೊತ್ತಿದ್ಲು. ದುಡಿಯುತ್ತಿದ್ದ ಪುಡಿಗಾಸಿನಲ್ಲೆ ಹೊಟ್ಟೆ ಬಟ್ಟೆ ಹೊಂಚಿಕೊಂಡು ಮಕ್ಕಳನ್ನೂ ಚೆನ್ನಾಗಿ ಓದಿಸುತ್ತಿದ್ದಳು. ಆದ್ರೆ ಆವತ್ತೊಂದು ದಿನ ಆಕೆ ಮನೆಯಿಂದ ಹೊರ ಹೋಗಿದ್ದಾಗ ಇಬ್ಬರು ಮಕ್ಕಳು ಕಿಡ್ನ್ಯಾಪ್(Kidnap) ಆಗಿಬಿಟ್ರು. ಎಲ್ಲಿ ಹುಡುಕಿದ್ರೂ ಮಕ್ಕಳ ಸುಳಿವು ಮಾತ್ರ ಸಿಗಲೇ ಇಲ್ಲ. ಠಾಣೆಯಲ್ಲಿ ಕೇಸ್ ಕೂಡ ದಾಖಲಾಯ್ತು. ಇನ್ನೂ ತನಿಖೆ ನಡೆಸಿದ ಪೊಲೀಸರಿಗೆ(Police) ಮಕ್ಕಳನ್ನ ಕಿಡ್ನ್ಯಾಪ್ ಮಾಡಿದ್ದು ಒಡಹುಟ್ಟಿದ ಅಕ್ಕನೇ ಅನ್ನೋದು ಗೊತ್ತಾಗಿತ್ತು.ಕಬ್ಬನ್ ಪಾರ್ಕ್ ಪೊಲೀಸರಿಗೆ ಅಂಬಿಕಾ ಸಿಕ್ಕಿಬಿದ್ದಿದ್ಲು.ಆಕೆಯ ಜೊತೆ ಅನಿತಾಳ ಮೊದಲ ಮಗಳು ಸಿಕ್ಕಿದ್ದಾಳೆ. ಗ ಏನಾದ..? ಈ ಪ್ರಶ್ನೆಗೆ ಉತ್ತರ ಅಂಬಿಕಾಳಿಗೆ ಮಾತ್ರ ಗೊತ್ತಿತ್ತು. ಅವಳಿಂದ ಬಾಯಿಬಿಡಿಸಲು ಆಕೆಯನ್ನ ಪೆರೇಸಂದ್ರಗೆ ಕರೆತಂದ ಪೊಲೀಸರು ವಿಚಾರಣೆ ಶುರು ಮಾಡಿದ್ರು. ಅವಳು ಗಂಡನನ್ನ ಬಿಟ್ಟು ತವರು ಮನೆ ಸೇರಿದ್ಲು.. ತಾಯಿ ಮತ್ತು ತಂಗಿಯ ಜೊತೆಗೇ ವಾಸ ಮಾಡೋದಕ್ಕೆ ಶುರು ಮಾಡಿದ್ಲು. ಆದ್ರೆ ತವರು ಮನೆಯಲ್ಲಿದ್ದವಳು ಬೇರೊಬ್ಬನ ಸಹವಾಸ ಮಾಡಿದ್ಲು. ಬೆಳಗ್ಗೆ ಮನೆ ಬಿಟ್ಟು ಹೋದ್ರೆ ರಾತ್ರಿ ಆದ್ರೂ ವಾಪಸ್ ಬರುತ್ತಿರಲಿಲ್ಲ.. ಇದರ ಬಗ್ಗೆ ತಂಗಿ ಅಕ್ಕನಿಗೆ ಪ್ರಶ್ನೆ ಮಾಡಿದ್ದಾಳೆ. ಅಷ್ಟೇ.. ನನಗೇ ಪ್ರಶ್ನೆ ಮಾಡುತ್ತಿದ್ದಾಳಲ್ಲ ಅಂತ ತಿಳಿದ ಅಕ್ಕ ತಂಗಿಯ ವಿರುದ್ಧ ಕತ್ತಿ ಮಸೆಯೋಕೆ ಶುರು ಮಾಡಿದಳು. ತಂಗಿಗೆ ಬುದ್ಧಿ ಕಲಿಸಬೇಕು ಅನ್ನೋ ನಿಟ್ಟಿನಲ್ಲಿ ಆಕೆಯ ಮಕ್ಕಳನ್ನೇ ಕಿಡ್ನ್ಯಾಪ್ ಮಾಡಿದಳು. ಇನ್ನೂ ಮಕ್ಕಳನ್ನ ಕಿಡ್ನ್ಯಾಪ್ ಮಾಡಿದ ಆಕೆ 6 ವರ್ಷದ ಮಗನನ್ನ ಕೊಂದು (Murder) ಹೂತು ಹಾಕಿದ್ರೆ ಉಳಿದ ಮಗಳನ್ನ ಬೆಂಗಳೂರಿಗೆ ಕರೆತಂದಿದ್ಲು.. ಆದ್ರೆ ಈಕೆಯ ಅದೃಷ್ಟ ಕೆಟ್ಟಿತ್ತು.. ಆಟೋ ಡ್ರೈವರ್ ಈಕೆಯ ಮೇಲೆ ಅನುಮಾನ ಬಂದು ಸೀದಾ ಪೊಲೀಸ್ ಠಾಣೆಗೆ ದೂರು ನೀಡಿದ್ರು.

ಇದನ್ನೂ ವೀಕ್ಷಿಸಿ:  ರಾಜ್ಯದ ನಾಯಕತ್ವ ಗಟ್ಟಿಯಾಗಿ ಇದ್ದಾಗ ಮಾತ್ರ ಚುನಾವಣೆ ಗೆಲ್ಲಲು ಸಾಧ್ಯ: ಬಿ.ಎಸ್.ಯಡಿಯೂರಪ್ಪ

Video Top Stories