ಕೇರಳದಲ್ಲಿ ಕಣಗಿಲೆ ಹೂ ಬ್ಯಾನ್..ಪೂಜೆಗೆ ಬಳಸುವಂತಿಲ್ಲ..! ಏನಿದು ವಿಷಕಾರಿ ಹೂವಿನ ಸಾವಿನ ಸೀಕ್ರೆಟ್..?
ವಿಷಕಾರಿ ಕಣಗಿಲೆ ಹೂ ನಿಮ್ಮ ಮನೆಯಲ್ಲೂ ಇದೆಯಾ?
ಕೇರಳದಲ್ಲಿ ಕಣಗಿಲೆ ಹೂವು ತಿಂದು ಯುವತಿ ಸಾವು..!
ಯುವತಿ ಸಾವಿನ ಕಾರಣ ತಿಳಿದು ಬೆಚ್ಚಿ ಬಿದ್ದ ಜನತೆ..!
ಕೇರಳದ ದೇವಸ್ಥಾನಗಳಲ್ಲಿ ಕಣಗಿಲೆ ಹೂವು ಬ್ಯಾನ್ ..!
ಕಣಗಿಲೆ ಹೂವು.. ನಿಮ್ಮ ಮನೆಯಲ್ಲಿದೆಯಾ..? ನಿಮ್ಮ ಗಾರ್ಡನ್ನಲ್ಲಿ ಬೆಳೆಸಿದ್ದೀರಾ..? ಅಥವಾ ದೇವಸ್ಥಾನದಲ್ಲಿ ಪ್ರಸಾಧದ ರೀತಿ ನಿಮ್ಮ ಕೈ ಸೇರಿದೆಯಾ..? ಹಾಗಾದ್ರೆ ಎಚ್ಚರ.. ನಿಮ್ಮ ಬಳಿ ಇರೋದು ಹೂ ಅಲ್ಲ.. ಬದಲಿಗೆ ಕಾರ್ಕೋಟಕ ವಿಷ..ಅರೆ ಕಣಗಿಲೆ ಹೂ(Oleander flower) ವಿಷಾನ..? ಎಷ್ಟೋ ವರ್ಷದಿಂದ ಬಳಕೆ ಮಾಡ್ತಿದ್ದೀವಿ ಏನು ಆಗೇ ಇಲ್ಲ ಇದೇನಿದು ಹೊಸಾ ಸುದ್ದಿ ಅಂತಿದ್ದೀರಾ..? ಎಸ್ ನಂಬೋದಕ್ಕೆ ಸಾಧ್ಯ ಆಗದೇ ಇರ್ಬೋದು ಆದ್ರೆ ನಂಬಲೇ ಬೇಕಾದ ಕಡು ಸತ್ಯವಿದು.. ಕೇರಳದಲ್ಲಿ(Kerala) ಯವತಿಯೊಬ್ಬಳು(Woman) ಕಣಗಿಲೆ ಹೂವನ್ನ ಜಗಿದ ಕಾರಣ ಆಕೆ ಮೈಗೆ ವಿಷವೇರಿ( Poison) ಸಾವಿಗೀಡಾಗಿದ್ದಾಳೆ. ಆ ಬೆನ್ನಲ್ಲೇ ಕೇರಳದಲ್ಲಿ ಪೂಜೆ ಅತಿ ಹೆಚ್ಚು ಬಳಸಲಾಗ್ತಿದ್ದ ಈ ಕಣಗಿಲೆ ಹೂವನ್ನೇ ಬ್ಯಾನ್ ಮಾಡಲಾಗಿದೆ. ದೇವರ ಪೂಜೆಯಲ್ಲಿ ತಾಜಾ ಹೂವುಗಳು ಅವಿಭಾಜ್ಯ ಅಂಗವಾಗಿವೆ. ಪ್ರತಿಯೊಂದು ಹೂವು ನೋಡಲು ಸುಂದರವಾಗಿರುತ್ತದೆ, ಅದರದ್ದೇ ಆದ ಆಕರ್ಷಕ ಬಣ್ಣಗಳನ್ನು ಹೊಂದಿರುತ್ತದೆ. ಹಾಗೆಯೇ ಕಣಗಿಲೆ ಹೂವು ಕೂಡಾ ನೋಡಲು ಸುಂದರವಾಗಿದೆ. ಆದ್ರೆ ಇದೇ ಕಣಗಿಲೆ ಹೂವು ವಿಷಕಾರಿಯಾಗಿ ಕೇರಳದ ಯುವತಿ ಜೀವ ಕಳೆದುಕೊಂಡಿದ್ದಾಳೆ.
ಇದನ್ನೂ ವೀಕ್ಷಿಸಿ: ಕನ್ನಡಿಗರು ಕಟ್ಟಿದ ಸಂಸ್ಥೆಯಿಂದ ಅರಣ್ಯವಾಸಿಗಳಲ್ಲಿ ನವೋಲ್ಲಾಸ..! ರೈತರ ಪಾಲಿನ ರಕ್ಷಕನಾದ ವಿ2ಸಾಫ್ಟ್..!