ಖಗ ಮೃಗಗಳ ಮೂಲಕ ಗೂಢಚರ್ಯೆ: ಪ್ರಾಣಿ, ಪಕ್ಷಿ, ಕೀಟಗಳಿಂದ ಹೇಗೆ ನಡೆಯುತ್ತೆ ಗೂಢಚರ್ಯೆ

ಶತ್ರು ದೇಶಗಳ ಮೇಲೆ ಕಣ್ಣಿಡಲು ಸಿಐಎಯಂತಹ ಗುಪ್ತಚರ ಸಂಸ್ಥೆಗಳು ಪ್ರಾಣಿ, ಪಕ್ಷಿಗಳನ್ನು ಬಳಸಿಕೊಂಡ ಇತಿಹಾಸವಿದೆ. ಬೆಕ್ಕುಗಳನ್ನು ಕದ್ದಾಲಿಸಲು, ಸತ್ತ ಇಲಿಗಳನ್ನು ರಹಸ್ಯ ರವಾನಿಸಲು ಮತ್ತು ಡ್ರೋನ್‌ಗಳನ್ನು ಹೊಡೆದುರುಳಿಸಲು ಹದ್ದುಗಳನ್ನು ಬಳಸಿದಂತಹ ರೋಚಕ ಕಾರ್ಯಾಚರಣೆಗಳ ಬಗ್ಗೆ ಇಲ್ಲಿದೆ ಸ್ಟೋರಿ..

Share this Video
  • FB
  • Linkdin
  • Whatsapp

ಬೆಕ್ಕುಗಳೇ ಗೂಢಾಚಾರಿಗಳು.. CIA ಪ್ರಾಜೆಕ್ಟ್​..! ಸತ್ತ ಇಲಿಗಳ ದೇಹದಲ್ಲಿ ಬಿಗ್ ಸೀಕ್ರೆಟ್ಸ್​​..! ಹದ್ದುಗಳ ಕಣ್ಣಿಗೆ ಬಿದ್ರೆ ಡ್ರೋನ್ ಕಥೆ ಖಲಾಸ್..! ಶೀಥಲ ಯುದ್ಧ.. ರಷ್ಯಾ-ಅಮೆರಿಕಾ ತಿಮಿಂಗಿಲ ಸಮರ..! ಇದೇ ಈ ಹೊತ್ತಿನ ವಿಶೇಷ.. ಒಂದು ದೇಶದ ರಕ್ಷಣೆಗೆ ಅದ್ರ ಗುಪ್ತಚರ ಸಂಸ್ಥೆ ಬಲಿಷ್ಠವಾಗಿರೋದು ಬಹಳ ಮುಖ್ಯ.. ಶತ್ರುಗಳ ದೇಶದಲ್ಲಿ ಸ್ಪೈ ಏಜೆಂಟ್ ಆಗಿ ಕೆಲಸ ಮಾಡಿರೋ ಅನೇಕರ ಕಥೆಗಳು ನಿಮಗೆ ಗೊತ್ತಿರಬಹುದು. ಆದ್ರೆ ಪ್ರಾಣಿ, ಪಕ್ಷಿಗಳು ಅಷ್ಟೇ ಯಾಕೆ ಕೀಟಗಳನ್ನ ಸಹ ಗೂಢಾಚರ್ಯೆ ನಡೆಸೋಕೆ ಬಳಸಿಕೊಂಡಿರೋ ಇತಿಹಾಸವಿದೆ. ಹಾಗಿದ್ರೆ, ಖಗ-ಮೃಗಗಳಿಂದ ಹೇಗೆ ನಡೆಯುತ್ತೆ ಸ್ಪೈ ಕೆಲಸ.? ಆ ರೋಚಕ ಸ್ಟೋರಿಯನ್ನೇ ನಿಮ್ಮ ಮುಂದೆ ತೆರೆದಿಡ್ತೀವಿ ನೋಡಿ.

ಇದನ್ನೂ ಓದಿ: ಕ್ಯಾನ್ಸರ್ ಪೀಡಿತರ ಆರೈಕೆಗಾಗಿ ಜೀವಮಾನದ ಉಳಿಕೆಯನ್ನೆಲ್ಲಾ ಎಮ್ಸ್‌ಗೆ ದಾನ ನೀಡಿದ ಶತಾಯುಷಿ ಸ್ತ್ರೀರೋಗ ತಜ್ಞೆ

ನಿಮಗೆ ಆಶ್ಚರ್ಯವಾಗ್ಬೋದು.. ಸತ್ತ ಇಲಿಗಳ ದೇಹವನ್ನ ಕೂಡ ಮಹತ್ತರವಾದ ಕೆಲಸಕ್ಕೆ ಉಪಯೋಗಿಸಿಕೊಳ್ಳಲಾಗ್ತಿತ್ತು. ಸತ್ತ ಇಲಿಗಳ ದೇಹದಲ್ಲಿಯೇ ಬಿಗ್ ಸೀಕ್ರೆಟ್​ಗಳನ್ನ ಇಡ್ತಿತ್ತು ಅಮೆರಿಕಾದ ಸಿಐಎ.. ಅಷ್ಟಕ್ಕೂ ಇಲಿಗಳನ್ನೇ ಇಲ್ಲಿ ಬಳಸಿಕೊಂಡಿದ್ಯಾಕೆ..? ಸತ್ತ ಇಲಿಗಳ ದೇಹವನ್ನ ಇಟ್ಕೊಂಡು ಅಮೆರಿಕಾ ಏನ್ ಮಾಡ್ತಿತ್ತು..?

ಹದ್ದುಗಳಿಗೆ ತರಬೇತಿ ಕೊಟ್ಟು, ಅವುಗಳನ್ನ ಸಹ ಸೈನ್ಯದಲ್ಲಿ ಬಳಸಿಕೊಳ್ಳಲಾಗ್ತಿದೆ. ಹಾಗಿದ್ರೆ ಹದ್ದುಗಳನ್ನ ಬಳಸಿಕೊಂಡು ಏನ್ ಮಾಡಲಾಗ್ತಿದೆ. ಇತ್ತೀಚಿಗೆ ಭಾರತವೂ ಸೇರಿದಂತೆ ಹಲವು ದೇಶಗಳು ಹದ್ದುಗಳಿಗೆ ಟ್ರೈನಿಂಗ್ ಕೊಡೋದಕ್ಕೆ ಶುರು ಮಾಡಿವೆ. ಸೇನೆಯಲ್ಲಿ ಅವುಗಳಿಗೆ ದೊಡ್ಡ ಜವಾಬ್ದಾರಿಯನ್ನೇ ಕೊಡಲಾಗ್ತಿದೆ. ಹಾಗಿದ್ರೆ, ಹದ್ದುಗಳನ್ನ ಯಾವ ಕಾರ್ಯಕ್ಕೆ ಬಳಸಿಕೊಳ್ಳಲಾಗ್ತಿದೆ..?

ಇದನ್ನೂ ಓದಿ: ಸ್ವಂತ ಉದ್ಯೋಗಿಗೆ ಸಾಲ ಕೊಡದ ದೇಶದ ಪ್ರತಿಷ್ಠಿತ ಬ್ಯಾಂಕ್: ಚಿಕಿತ್ಸೆ ನೀಡಲಾಗದೇ ಕ್ಯಾನ್ಸರ್ ಪೀಡಿತ ತಾಯಿ ಸಾವು

Related Video